CWG 2022: ಕಾಮನ್​ವೆಲ್ತ್ ಕ್ರೀಡಾ ಗ್ರಾಮದಿಂದ ಶ್ರೀಲಂಕಾದ ಇಬ್ಬರು ಅಥ್ಲೀಟ್‌, ಒಬ್ಬ ಅಧಿಕಾರಿ ನಾಪತ್ತೆ

CWG 2022: ಬಹುಶಃ ಇಂಗ್ಲೆಂಡ್ನಲ್ಲಿ ಉಳಿಯುವ ಕಲ್ಪನೆ ಈ ಮೂವರಿಗಿದ್ದು, ಈ ಉದ್ದೇಶದಿಂದಲೇ ಅವರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

CWG 2022: ಕಾಮನ್​ವೆಲ್ತ್ ಕ್ರೀಡಾ ಗ್ರಾಮದಿಂದ ಶ್ರೀಲಂಕಾದ ಇಬ್ಬರು ಅಥ್ಲೀಟ್‌, ಒಬ್ಬ ಅಧಿಕಾರಿ ನಾಪತ್ತೆ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಪೃಥ್ವಿಶಂಕರ

Updated on: Aug 04, 2022 | 5:58 PM

ಟೋಕಿಯೊ ಒಲಿಂಪಿಕ್ಸ್ (Tokyo Olympics) ಘಟನೆಯನ್ನು ಬರ್ಮಿಂಗ್ಹ್ಯಾಮ್‌ನಲ್ಲಿ ಪುನರಾವರ್ತಿಸಲಾಗುತ್ತಿದೆ (Commonwealth Games 2022). ಶ್ರೀಲಂಕಾದ ಇಬ್ಬರು ಅಥ್ಲೀಟ್‌ಗಳು ಮತ್ತು ಅಧಿಕಾರಿಯೊಬ್ಬರು ಗೇಮ್ಸ್ ವಿಲೇಜ್‌ನಿಂದ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದು, ಉಳಿದಿರುವ ಎಲ್ಲಾ ಶ್ರೀಲಂಕಾದ ಅಥ್ಲೀಟ್‌ಗಳು ಮತ್ತು ಅಧಿಕಾರಿಗಳಿಗೆ ಅವರ ಪಾಸ್‌ಪೋರ್ಟ್‌ಗಳನ್ನು ಒಪ್ಪಿಸುವಂತೆ ಆದೇಶಿಸಲಾಗಿದೆ. ಶ್ರೀಲಂಕಾ ಒಟ್ಟು 161 ಸದಸ್ಯರನ್ನು ಕಳುಹಿಸಿದೆ. ಅವರಲ್ಲಿ 51 ಅಧಿಕಾರಿಗಳು ಸೇರಿದ್ದಾರೆ. ಇದೇ ವೇಳೆ ಮೂವರು ನಾಪತ್ತೆಯಾಗಿರುವುದು ಆತಂಕ ಮೂಡಿಸಿದೆ. ಜೂಡೋ ಪಟು, ಕುಸ್ತಿಪಟು ಮತ್ತು ಜೂಡೋ ಮ್ಯಾನೇಜರ್ ಪತ್ತೆಯಾಗಿಲ್ಲ ಎಂದು ಶ್ರೀಲಂಕಾ ತಂಡದ ಪತ್ರಿಕಾ ಅಧಿಕಾರಿ ಗೋಬಿನಾಥ್ ಶಿವರಾಜ ತಿಳಿಸಿದ್ದಾರೆ.

ಶ್ರೀಲಂಕಾದಲ್ಲಿ ರಾಜಕೀಯ ಅಶಾಂತಿ ಇನ್ನೂ ಮುಗಿದಿಲ್ಲ. ಆಹಾರ ಮತ್ತು ಇಂಧನ ಬಿಕ್ಕಟ್ಟು ಬಹಳ ಹಿಂದಿನಿಂದಲೂ ಇದೆ. ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಬೇಕೋ ಇಲ್ಲವೋ ಎಂಬ ಚಿಂತೆಯೂ ಕ್ರೀಡಾಪಟುಗಳಿಗೆ ಇತ್ತು. ಕಾಮನ್ವೆಲ್ತ್ ಗೇಮ್ಸ್ ಫೆಡರೇಶನ್ ಮತ್ತು ಶ್ರೀಲಂಕಾ ಕ್ರಿಕೆಟ್ ಮಂಡಳಿ ನಿಧಿ ಸಂಗ್ರಹಿಸಿ ಆಟಗಾರರನ್ನು ಕ್ರೀಡಾಕೂಟಕ್ಕೆ ಕಳುಹಿಸಿತ್ತು. ಬರ್ಮಿಂಗ್‌ಹ್ಯಾಮ್‌ಗೆ ಆಗಮಿಸಿದ ಶ್ರೀಲಂಕಾ ತಂಡ ಸ್ವಲ್ಪ ದಿನ ಎಲ್ಲ ಜಂಜಾಟಗಳಿಂದ ದೂರವಾಗಿ ಆರಾಮವಾಗಿತ್ತು. ಆದರೆ ಈಗ ಕ್ರೀಡಾಕೂಟ ಮುಗಿದ ಬಳಿಕ ಅವರು ತನ್ನ ದೇಶಕ್ಕೆ ವಾಪಸ್ಸಾಗಬೇಕಿದೆ. ಅವರಿಗೂ ಕುಟುಂಬದ ಚಿಂತೆ ಕಾಡುತ್ತಿದ್ದು, ತೀವ್ರ ಆಹಾರ ಮತ್ತು ಇಂಧನ ಬಿಕ್ಕಟ್ಟು ಇನ್ನು ಮುಗಿದಿಲ್ಲ. ಸರದಿಯಲ್ಲಿ ಬಹಳ ಹೊತ್ತು ನಿಂತರೂ ಅಗತ್ಯ ಆಹಾರ ಸಿಗುತ್ತಿಲ್ಲ. ಈ ಅಂಶಗಳು ಬರ್ಮಿಂಗ್ಹ್ಯಾಮ್‌ನಲ್ಲಿ ಶ್ರೀಲಂಕಾದ ಮೂರು ಸದಸ್ಯರ ನಾಪತ್ತೆಗೆ ಕಾರಣವಾಗಿರಬಹುದು. ಬಹುಶಃ ಇಂಗ್ಲೆಂಡ್ನಲ್ಲಿ ಉಳಿಯುವ ಕಲ್ಪನೆ ಈ ಮೂವರಿಗಿದ್ದು, ಈ ಉದ್ದೇಶದಿಂದಲೇ ಅವರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ
Image
CWG 2022: ಹೀಟ್‌ನಲ್ಲಿ ಮೊದಲ ಸ್ಥಾನ; 200 ಮೀಟರ್ ಓಟದಲ್ಲಿ ಸೆಮಿಫೈನಲ್​ಗೇರಿದ ಹಿಮಾ ದಾಸ್
Image
CWG 2022: ಕಾಮನ್​ವೆಲ್ತ್ ಗೇಮ್ಸ್​ನಲ್ಲಿ ನೀಡುವ ಚಿನ್ನದ ಪದಕದಲ್ಲಿ ಎಷ್ಟು ಗ್ರಾಂ ಚಿನ್ನವಿರುತ್ತೆ ಗೊತ್ತಾ?
Image
CWG 2022 Squash: ಸ್ಕ್ವಾಷ್​ನಲ್ಲಿ ಕಂಚು ಗೆದ್ದು ಇತಿಹಾಸ ನಿರ್ಮಿಸಿದ ಸೌರವ್ ಘೋಷಾಲ್..!

ಬರ್ಮಿಂಗ್ಹ್ಯಾಮ್ ಕ್ರೀಡಾಕೂಟದಲ್ಲಿ ಶ್ರೀಲಂಕಾದ ಪತ್ರಿಕಾ ಅಧಿಕಾರಿ ಗೋಬಿನಾಥ್ ಶಿವರಾಜ್ ಮಾತನಾಡಿ, ‘ಈ ಘಟನೆಯು ತುಂಬಾ ನಿರಾಶಾದಾಯಕವಾಗಿದೆ. ಎಲ್ಲಾ ಅಥ್ಲೀಟ್‌ಗಳು ತಮ್ಮ ಪಾಸ್‌ಪೋರ್ಟ್‌ಗಳನ್ನು ಗೇಮ್ಸ್ ವಿಲೇಜ್‌ನಲ್ಲಿರುವ ಅಧಿಕಾರಿಗಳ ಬಳಿ ಠೇವಣಿ ಇಡುವಂತೆ ನಾವು ಕೇಳಿದ್ದೇವೆ. ಈ ದೇಶ ಬಿಟ್ಟು ಬೇರೆಲ್ಲೂ ಹೋಗದಂತೆ ಪೊಲೀಸರು ಅವರನ್ನು ಹುಡುಕುತ್ತಿದ್ದಾರೆ ಎಂದರು. ಶ್ರೀಲಂಕಾ ಜೂಡೋ ತಂಡವು ಮೂವರು ಪುರುಷರು ಮತ್ತು ಇಬ್ಬರು ಮಹಿಳೆಯರನ್ನು ಒಳಗೊಂಡಿದೆ. ಮಹಿಳಾ ಜೂಡೋಕಾ ಕಾಣೆಯಾಗಿದ್ದಾರೆ. ಜೂಡೋ ಮತ್ತು ಕುಸ್ತಿ ಪಂದ್ಯಗಳು ಬರ್ಮಿಂಗ್ಹ್ಯಾಮ್‌ನಿಂದ ಸ್ವಲ್ಪ ದೂರದಲ್ಲಿರುವ ಕೊವೆಂಟ್ರಿ ಪ್ರದೇಶದಲ್ಲಿ ನಡೆಯುತ್ತವೆ. ಕಳೆದ ವರ್ಷ ನಡೆದ ಟೋಕಿಯೊ ಒಲಿಂಪಿಕ್ಸ್‌ನಲ್ಲೂ ಇಂತಹದ್ದೆ ಘಟನೆ ನಡೆದಿತ್ತು. ಅಲ್ಲಿ ಉಗಾಂಡಾದ ಅಥ್ಲೀಟ್ ಕ್ರೀಡಾ ಗ್ರಾಮದಿಂದ ಕಣ್ಮರೆಯಾಗಿದ್ದರು. ಸ್ವಲ್ಪ ಸಮಯದ ನಂತರ ಪೊಲೀಸರು ಆತನನ್ನು ಹುಡುಕಿ ಆತನ ದೇಶಕ್ಕೆ ವಾಪಸ್ ಕಳುಹಿಸಿದ್ದರು.

ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು