CWG 2022 Squash: ಸ್ಕ್ವಾಷ್ನಲ್ಲಿ ಕಂಚು ಗೆದ್ದು ಇತಿಹಾಸ ನಿರ್ಮಿಸಿದ ಸೌರವ್ ಘೋಷಾಲ್..!
CWG 2022 Squash: ಘೋಷಾಲ್ ಅವರು ಬರ್ಮಿಂಗ್ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್ 2022 ರ ಪುರುಷರ ಸಿಂಗಲ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಈ ಮೂಲಕ ಅವರು CWG ಇತಿಹಾಸದಲ್ಲಿ ಸಿಂಗಲ್ಸ್ ಪದಕವನ್ನು ಗೆದ್ದ ಭಾರತದ ಮೊದಲ ಸ್ಕ್ವಾಷ್ ಆಟಗಾರರಾಗಿದ್ದಾರೆ.
ಭಾರತದ ಸ್ಟಾರ್ ಸ್ಕ್ವಾಷ್ ಆಟಗಾರ ಸೌರವ್ ಘೋಷಾಲ್ ( squash player Saurav Ghoshal) ಇತಿಹಾಸ ನಿರ್ಮಿಸಿದ್ದಾರೆ. ಭಾರತದ ಅತ್ಯಂತ ಅನುಭವಿ ಆಟಗಾರರಲ್ಲಿ ಒಬ್ಬರಾದ ಘೋಷಾಲ್ ಅವರು ಬರ್ಮಿಂಗ್ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್ 2022 (Birmingham Commonwealth Games 2022)ರ ಪುರುಷರ ಸಿಂಗಲ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಈ ಮೂಲಕ ಅವರು CWG ಇತಿಹಾಸದಲ್ಲಿ ಸಿಂಗಲ್ಸ್ ಪದಕವನ್ನು ಗೆದ್ದ ಭಾರತದ ಮೊದಲ ಸ್ಕ್ವಾಷ್ ಆಟಗಾರರಾಗಿದ್ದಾರೆ. ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಸೌರವ್ ಆತಿಥೇಯ ಇಂಗ್ಲೆಂಡ್ ಆಟಗಾರನನ್ನು 3-0 ಅಂತರದಿಂದ ಸೋಲಿಸಿದರು. ಇದರೊಂದಿಗೆ ಪ್ರಸಕ್ತ ಕ್ರೀಡಾಕೂಟದಲ್ಲಿ ಭಾರತದ ಪದಕಗಳ ಸಂಖ್ಯೆ 15ಕ್ಕೆ ಏರಿಕೆಯಾಗಿದೆ.
1998 ರಲ್ಲಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಮೊದಲ ಬಾರಿಗೆ ಸ್ಕ್ವಾಷ್ ಅನ್ನು ಸೇರಿಸಲಾಯಿತು, ಆದರೆ ಭಾರತ ಅದರಲ್ಲಿ ಕೇವಲ 4 ಪದಕಗಳನ್ನು ಮಾತ್ರ ಪಡೆದುಕೊಂಡಿದೆ. ಇದರಲ್ಲಿ ಕೊನೆಯ ಮೂರು ಪದಕಗಳು ಬಂದಿದ್ದು ಡಬಲ್ಸ್‌ನಲ್ಲಿ ಮಾತ್ರ. ಈ ಮೂಲಕ ಮೊದಲ ಬಾರಿಗೆ ಸಿಂಗಲ್ಸ್‌ನಲ್ಲಿ ಭಾರತದ ಬ್ಯಾಗ್‌ನಲ್ಲಿ ಈ ಪದಕ ಬಂದಿದ್ದು, 35 ವರ್ಷದ ಸೌರವ್ ಘೋಷಾಲ್ ಅವರ ಈ ಗೆಲುವು ವಿಶೇಷವಾಗಿದೆ. ಭಾರತದ ನಂಬರ್ ಒನ್ ಸ್ಕ್ವಾಷ್ ಆಟಗಾರ ಘೋಷಾಲ್ ಈ ಹಿಂದೆಯೂ ಹಲವು ಬಾರಿ ಪದಕದಿಂದ ವಂಚಿತರಾಗಿದ್ದರು.
BRONZE FOR SAURAV! ?
Our talented Squash player @SauravGhosal ? clinches Bronze after getting past James Willstrop of England 3-0 (11-6, 11-1, 11-4) in the Bronze medal match ??
Way to go Saurav ?
Congratulations! ??’s 1st medal in Squash this #CWG2022 ?#Cheer4India pic.twitter.com/At5VcvRfH0
— SAI Media (@Media_SAI) August 3, 2022
ಮಂಗಳವಾರದ ಸೆಮಿಫೈನಲ್‌ನಲ್ಲಿ ಘೋಸಲ್ ನ್ಯೂಜಿಲೆಂಡ್ ಆಟಗಾರನ ವಿರುದ್ಧ ಸೋತಿದ್ದರು, ಆ ಮೂಲಕ ಚಿನ್ನದ ಪದಕವನ್ನು ಪಡೆಯುವ ಅವಕಾಶವನ್ನು ಕಳೆದುಕೊಂಡರು. ಆದರೆ ಅನುಭವಿ ಭಾರತೀಯ ಆಟಗಾರ ನಿರಾಸೆಯನ್ನು ತನ್ನಲ್ಲಿ ಮುಳುಗಿಸಲು ಬಿಡಲಿಲ್ಲ. ಆಗಸ್ಟ್ 3 ಬುಧವಾರ, ಅವರು ಇತಿಹಾಸವನ್ನು ರಚಿಸಲು ಮತ್ತೊಂದು ಅವಕಾಶವನ್ನು ಹೊಂದಿದ್ದರು ಮತ್ತು ಈ ಬಾರಿ ಅವರು ಯಾವುದೇ ತಪ್ಪು ಮಾಡಲಿಲ್ಲ. ಇಂಗ್ಲೆಂಡಿನ ಸ್ಟಾರ್ ಆಟಗಾರ ಮತ್ತು 2018ರ ಗೋಲ್ಡ್ ಕೋಸ್ಟ್ ಗೇಮ್ಸ್ ಸಿಂಗಲ್ಸ್ ಚಾಂಪಿಯನ್ ವಿಲ್‌ಸ್ಟ್ರೋಪ್ ಅವರನ್ನು ಘೋಷಾಲ್ 11-6, 11-1, 11-4 ಅಂಕಗಳೊಂದಿಗೆ ಸುಲಭವಾಗಿ ಗೆದ್ದು ಐತಿಹಾಸಿಕ ಕಂಚಿನ ಪದಕವನ್ನು ಪಡೆದರು.
Published On - 10:56 pm, Wed, 3 August 22