CWG 2022 Hockey: ರೋಚಕ ಪಂದ್ಯದಲ್ಲಿ ಕೆನಡಾವನ್ನು ಮಣಿಸಿ ಸೆಮಿಫೈನಲ್ ಪ್ರವೇಶಿಸಿದ ಭಾರತ ಮಹಿಳಾ ಹಾಕಿ ತಂಡ

CWG 2022 Hockey: ‘ಬಿ’ ಗುಂಪಿನ ಈ ಪಂದ್ಯ ಭಾರತ ಹಾಗೂ ಕೆನಡಾ ಪಾಲಿಗೆ ಮಹತ್ವದ್ದಾಗಿತ್ತು. ಈ ಪಂದ್ಯವನ್ನು ಗೆಲ್ಲುವ ಮೂಲಕ ಎರಡೂ ತಂಡಗಳಿಗೆ ಸೆಮಿಫೈನಲ್ ಪ್ರವೇಶಿಸುವ ಅವಕಾಶವಿದ್ದು, ಪಂದ್ಯ ಸಮಬಲದಿಂದ ಕೂಡಿತ್ತು.

CWG 2022 Hockey: ರೋಚಕ ಪಂದ್ಯದಲ್ಲಿ ಕೆನಡಾವನ್ನು ಮಣಿಸಿ ಸೆಮಿಫೈನಲ್ ಪ್ರವೇಶಿಸಿದ ಭಾರತ ಮಹಿಳಾ ಹಾಕಿ ತಂಡ
Follow us
TV9 Web
| Updated By: ಪೃಥ್ವಿಶಂಕರ

Updated on:Aug 03, 2022 | 7:03 PM

ಒಂದು ದಿನದ ಹಿಂದೆ ಇಂಗ್ಲೆಂಡ್ ವಿರುದ್ಧದ ಸೋಲಿನಿಂದ ಚೇತರಿಸಿಕೊಂಡ ನಂತರ ಭಾರತೀಯ ಮಹಿಳಾ ಹಾಕಿ ತಂಡ (Indian women’s hockey team) ಬಲವಾದ ಪುನರಾಗಮನವನ್ನು ಮಾಡಿದೆ ಮತ್ತು ಬರ್ಮಿಂಗ್ಹ್ಯಾಮ್ ಕಾಮನ್ವೆಲ್ತ್ ಗೇಮ್ಸ್ 2022 (Birmingham Commonwealth Games 2022)ರ ಸೆಮಿಫೈನಲ್‌ಗೆ ಪ್ರವೇಶಿಸಿದೆ. ಆಗಸ್ಟ್ 3 ಬುಧವಾರ ನಡೆದ ಪೂಲ್ ಹಂತದ ಪಂದ್ಯದಲ್ಲಿ ಭಾರತ ತಂಡ ಕಠಿಣ ಸವಾಲಿನ ಪಂದ್ಯದಲ್ಲಿ ಕೆನಡಾವನ್ನು 3-2 ಗೋಲುಗಳ ಮೂಲಕ ರೋಚಕ ಶೈಲಿಯಲ್ಲಿ ಸೋಲಿಸಿತು. ಈ ಮೂಲಕ ಭಾರತ ತಂಡ ಐದನೇ ಬಾರಿಗೆ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಕಳೆದ ವರ್ಷ ಟೋಕಿಯೊ ಒಲಿಂಪಿಕ್ಸ್‌ ಕ್ವಾರ್ಟರ್ ಫೈನಲ್‌ನಲ್ಲಿ ಸೋತಿದ್ದ ಆಸ್ಟ್ರೇಲಿಯಾವನ್ನು ಸೆಮಿಫೈನಲ್‌ನಲ್ಲಿ ಭಾರತ ಎದುರಿಸಲಿದೆ.

ಭಾರತಕ್ಕೆ ಬಲಿಷ್ಠ ಆರಂಭ

‘ಬಿ’ ಗುಂಪಿನ ಈ ಪಂದ್ಯ ಭಾರತ ಹಾಗೂ ಕೆನಡಾ ಪಾಲಿಗೆ ಮಹತ್ವದ್ದಾಗಿತ್ತು. ಈ ಪಂದ್ಯವನ್ನು ಗೆಲ್ಲುವ ಮೂಲಕ ಎರಡೂ ತಂಡಗಳಿಗೆ ಸೆಮಿಫೈನಲ್ ಪ್ರವೇಶಿಸುವ ಅವಕಾಶವಿದ್ದು, ಪಂದ್ಯ ಸಮಬಲದಿಂದ ಕೂಡಿತ್ತು. ಭಾರತ ಬಲಿಷ್ಠವಾಗಿ ಆರಂಭಗೊಂಡು ಎರಡನೇ ಕ್ವಾರ್ಟರ್‌ ವೇಳೆಗೆ 2-0 ಮುನ್ನಡೆ ಸಾಧಿಸಿತು. ಪಂದ್ಯದ ಮೂರನೇ ನಿಮಿಷದಲ್ಲಿ ಸಲೀಮಾ ಟೆಟೆ ಭಾರತದ ಪೆನಾಲ್ಟಿ ಕಾರ್ನರ್‌ನಿಂದ ಉತ್ತಮ ಆರಂಭ ಗಳಿಸಿದರು. ನಂತರ ಎರಡನೇ ಕ್ವಾರ್ಟರ್​ನಲ್ಲಿ ನವನೀತ್ ಕೌರ್ 22ನೇ ನಿಮಿಷದಲ್ಲಿ ಮುನ್ನಡೆಯನ್ನು ದ್ವಿಗುಣಗೊಳಿಸಿದರು.

ಇದನ್ನೂ ಓದಿ
Image
Asia Cup 2022: ಕೊಹ್ಲಿ, ರಾಹುಲ್ ರೀ ಎಂಟ್ರಿ; ಏಷ್ಯಾಕಪ್​ಗೆ ಸಂಭಾವ್ಯ ಟೀಂ ಇಂಡಿಯಾ ಹೀಗಿದೆ
Image
CWG 2022: ಭಾರತಕ್ಕೆ 14ನೇ ಪದಕ; ವೇಟ್‌ಲಿಫ್ಟಿಂಗ್​ನಲ್ಲಿ ಕಂಚು ಗೆದ್ದ ಲವ್‌ಪ್ರೀತ್ ಸಿಂಗ್
Image
CWG 2022 Indian Medal Winners: 6ನೇ ಸ್ಥಾನದಲ್ಲಿ ಭಾರತ, ವೇಟ್​ಲಿಫ್ಟರ್​ಗಳ ಪಾರುಪತ್ಯ; ಇದು ಪದಕ ವಿಜೇತರ ಸಂಪೂರ್ಣ ಪಟ್ಟಿ

ಕೆನಡಾದ ಅತ್ಯುತ್ತಮ ಪುನರಾಗಮನ

ಭಾರತ ತಂಡವು ಪಂದ್ಯದಲ್ಲಿ ಪ್ರಾಬಲ್ಯ ತೋರಿತು, ಆದರೆ ನಂತರ ಕೆನಡಾ ಮೊದಲ ಪೆನಾಲ್ಟಿ ಕಾರ್ನರ್ ಪಡೆದುಕೊಂಡು ಗೋಲು ಗಳಿಸಿತು. ಭಾರತದ ಎರಡನೇ ಗೋಲಿನ ಕೆಲವೇ ನಿಮಿಷದಲ್ಲಿ ಬ್ರಿಯಾನ್ ಸ್ಟೀಯರ್ಸ್ ಕೆನಡಾ ಪರ ಮೊದಲ ಗೋಲು ಗಳಿಸಿದರು. ಇಲ್ಲಿಂದ ಭಾರತ ತಂಡ ತನ್ನ ವೇಗವನ್ನು ಕಳೆದುಕೊಳ್ಳಲಾರಂಭಿಸಿತು ಮತ್ತು ಮೂರನೇ ಕ್ವಾರ್ಟರ್‌ನಲ್ಲಿ ಕೆನಡಾ ಅದರ ಲಾಭವನ್ನು ಪಡೆದುಕೊಂಡಿತು. ಮತ್ತೊಮ್ಮೆ ಪೆನಾಲ್ಟಿ ಕಾರ್ನರ್ ತಂಡಕ್ಕೆ ನೆರವಾಯಿತು. 39ನೇ ನಿಮಿಷದಲ್ಲಿ ಕಂಡುಬಂದ ಈ ಪಿಸಿಯಲ್ಲಿ ಕೆನಡಾ ನೇರ ಡ್ರ್ಯಾಗ್ ಫ್ಲಿಕ್ ಬದಲಿಗೆ ಸಂಯೋಜನೆಯ ಪಾಸ್ ಅನ್ನು ಬಳಸಿತು ಮತ್ತು ಹಾನಾ ಹಾನ್ ಸ್ಕೋರ್ 2-2 ರಿಂದ ಸಮಬಲಗೊಳಿಸಿದರು.

ಲಾಲ್ರೆಮ್ಸಿಯಾಮಿ ಪಂದ್ಯವನ್ನು ಕಸಿದುಕೊಂಡರು

ಕೊನೆಯ ಕ್ವಾಟರ್​ನಲ್ಲಿ, ಭಾರತ ಮತ್ತೊಮ್ಮೆ ಪ್ರಚಂಡ ಪುನರಾಗಮನವನ್ನು ಮಾಡಿತು. ಈ ಬಾರಿ ಭಾರತ ಸಂಪೂರ್ಣವಾಗಿ ಪ್ರಾಬಲ್ಯ ಸಾಧಿಸಿತು. ಟೀಮ್ ಇಂಡಿಯಾ ಔಟಾದರೂ ನೇಹಾ ಗೋಯಲ್ ಅವರ ಉತ್ತಮ ಫೀಲ್ಡ್ ಗೋಲ್ ಕೂಡ ಉತ್ಸಾಹವನ್ನು ಕುಗ್ಗಿಸಲಿಲ್ಲ. 51 ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಪಡೆದರು. ಸ್ಟಾರ್ ಡ್ರ್ಯಾಗ್-ಫ್ಲಿಕ್ಕರ್ ಗುರ್ಜಿತ್ ಕೌರ್ ಅವರ ಹೊಡೆತವನ್ನು ಕೆನಡಾದ ರಕ್ಷಣಾ ವಿಭಾಗದವರು ಉಳಿಸಿದರು, ಆದರೆ ಗೋಲು ಬಳಿಯ ಗೊಂದಲದ ನಡುವೆ, ಲಾಲ್ರೆಮ್ಸಿಯಾಮಿ ಚೆಂಡನ್ನು ಗೋಲಿನೊಳಗೆ ಸೇರಿಸಿದರು ಮತ್ತು ಭಾರತಕ್ಕೆ ನಿರ್ಣಾಯಕ ಮುನ್ನಡೆ ನೀಡಿದರು. ಆದಾಗ್ಯೂ, ಕೆಲವು ನಿಮಿಷಗಳ ನಂತರ ಲಾಲ್ರೆಮ್ಸಿಯಾಮಿ ಗಾಯಗೊಂಡು ಸಹಾಯಕ ಸಿಬ್ಬಂದಿಯ ಸಹಾಯದಿಂದ ಹೊರನಡೆಯಬೇಕಾಯಿತು, ಆದರೆ ಅವರ ಗೋಲು ಅಂತಿಮವಾಗಿ ಭಾರತವನ್ನು ಸೆಮಿಫೈನಲ್‌ಗೆ ತಳ್ಳಿತು.

Published On - 7:00 pm, Wed, 3 August 22

ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಪತ್ನಿ ಗರ್ಭಿಣಿಯಾಗಿದ್ದಾಗ ಪತಿ ಈ ತಪ್ಪುಗಳನ್ನು ಮಾಡಬಾರದು
ಪತ್ನಿ ಗರ್ಭಿಣಿಯಾಗಿದ್ದಾಗ ಪತಿ ಈ ತಪ್ಪುಗಳನ್ನು ಮಾಡಬಾರದು
Daily horoscope: ಈ ರಾಶಿಯವರು ಇಂದು ಕೆಲಸಗಳಲ್ಲಿ ಯಶಸ್ಸು ಕಾಣುವರು
Daily horoscope: ಈ ರಾಶಿಯವರು ಇಂದು ಕೆಲಸಗಳಲ್ಲಿ ಯಶಸ್ಸು ಕಾಣುವರು