CWG 2022: ಭಾರತಕ್ಕೆ 14ನೇ ಪದಕ; ವೇಟ್‌ಲಿಫ್ಟಿಂಗ್‌ನಲ್ಲಿ ಕಂಚು ಗೆದ್ದ ಲವ್‌ಪ್ರೀತ್ ಸಿಂಗ್
CWG 2022: ಪುರುಷರ 109 ಕೆಜಿ ತೂಕ ವಿಭಾಗದಲ್ಲಿ ಭಾರತದ ಲವ್‌ಪ್ರೀತ್ ಸಿಂಗ್ ಭಾರತಕ್ಕೆ ಮತ್ತೊಂದು ಪದಕ ತಂದುಕೊಟ್ಟಿದ್ದಾರೆ. ಲವ್‌ಪ್ರೀತ್ ಒಟ್ಟು 355 ಕೆಜಿ ಭಾರ ಎತ್ತುವ ಮೂಲಕ ಕಂಚು ಗೆದ್ದರು.
ಪುರುಷರ 109 ಕೆಜಿ ತೂಕ ವಿಭಾಗದಲ್ಲಿ ಭಾರತದ ಲವ್‌ಪ್ರೀತ್ ಸಿಂಗ್ (Lovepreet Singh) ಭಾರತಕ್ಕೆ ಮತ್ತೊಂದು ಪದಕ ತಂದುಕೊಟ್ಟಿದ್ದಾರೆ. ಲವ್‌ಪ್ರೀತ್ ಒಟ್ಟು 355 ಕೆಜಿ ಭಾರ ಎತ್ತುವ ಮೂಲಕ ಕಂಚು ಗೆದ್ದರು. ಅವರು ಸ್ನ್ಯಾಚ್‌ನಲ್ಲಿ 163 ಕೆಜಿ ಮತ್ತು ಕ್ಲೀನ್ ಮತ್ತು ಜರ್ಕ್‌ನಲ್ಲಿ 192 ಕೆಜಿ ಎತ್ತಿದರು. ಇದು ಭಾರತಕ್ಕೆ 14ನೇ ಪದಕವಾಗಿದೆ. ಅದೇ ಸಮಯದಲ್ಲಿ, ಇದು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ (Commonwealth Games 2022) ಲವ್‌ಪ್ರೀತ್‌ಗೆ ಮೊದಲ ಪದಕವಾಗಿದೆ. ಕಳೆದ ವರ್ಷ ಕಾಮನ್‌ವೆಲ್ತ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು.
ಒಂದು ಹಂತದಲ್ಲಿ ಕಂಚಿನ ಪದಕವೂ ಭಾರತದ ಕೈಯಿಂದ ಜಾರುವ ಹಂತದಲ್ಲಿತ್ತು. ವಾಸ್ತವವಾಗಿ, ಲವ್‌ಪ್ರೀತ್ ಸಿಂಗ್ ಕ್ಲೀನ್ ಮತ್ತು ಜರ್ಕ್ನಲ್ಲಿ ತಮ್ಮ ಮೂರು ಪ್ರಯತ್ನಗಳನ್ನು ಪೂರ್ಣಗೊಳಿಸಿ ಮೂರನೇ ಸ್ಥಾನದಲ್ಲಿದ್ದರು. ಆದರೆ ನಂತರ ಆಸ್ಟ್ರೇಲಿಯಾದ ಜಾಕ್ಸನ್ ತಮ್ಮ ಎರಡನೇ ಪ್ರಯತ್ನದಲ್ಲಿ 202 ಕೆಜಿ ಎತ್ತಿದರು ಮತ್ತು ಮೂರನೇ ಪ್ರಯತ್ನದಲ್ಲಿ 211 ಕೆಜಿ ಎತ್ತುವ ತಯಾರಿಯಲ್ಲಿದ್ದರು. ಇದು ಭಾರತೀಯ ಅಭಿಮಾನಿಗಳ ಆತಂಕವನ್ನು ಹೆಚ್ಚಿಸಿತು. ಆದರೆ, ಮೂರನೇ ಪ್ರಯತ್ನದಲ್ಲಿ ಆಸ್ಟ್ರೇಲಿಯಾದ ಜಾಕ್ಸನ್ 211 ಕೆಜಿ ಎತ್ತುವಲ್ಲಿ ವಿಫಲರಾದರು.
Congratulations to our weightlifter Lovepreet Singh for a solid performance and bagging bronze at the CWG’22 in Birmingham. Our weightlifters have been having a great run and Lovepreet’s phenomenal performance keeps that run going. The entire nation is proud of you.#CWG2022 pic.twitter.com/Cm33nFBsFG
— Jagat Prakash Nadda (@JPNadda) August 3, 2022
ಈಗ ಭಾರತ 5 ಚಿನ್ನ, 5 ಬೆಳ್ಳಿ ಮತ್ತು 4 ಕಂಚಿನ ಪದಕಗಳನ್ನು ಹೊಂದಿದೆ. 2019 ರಲ್ಲಿ ಲವ್‌ಪ್ರೀತ್ ಅವರ ವೃತ್ತಿಜೀವನವು ದೊಡ್ಡ ಹಿನ್ನಡೆಯನ್ನು ಅನುಭವಿಸಿತು. ವಾಸ್ತವವಾಗಿ ಆ ಸಮಯದಲ್ಲಿ ಅವರು ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಡೋಪ್ ಪರೀಕ್ಷೆಯಲ್ಲಿ ವಿಫಲರಾಗಿದ್ದರು. ಹೀಗಾಗಿ ಅವರನ್ನು ಚಾಂಪಿಯನ್ಶಿಪ್ನಿಂದ ಅಮಾನತುಗೊಳಿಸಲಾಯಿತು. ಲವ್‌ಪ್ರೀತ್ ಕಳೆದ ವರ್ಷವೇ ಪುನರಾಗಮನ ಮಾಡಿದರು ಮತ್ತು ಅಂದಿನಿಂದ ಅವರ ಅದ್ಭುತ ಯಾನ ಮುಂದುವರಿಯುತ್ತದೆ.
ಭಾರತದ ವೇಟ್‌ಲಿಫ್ಟರ್‌ಗಳು ಕಾಮನ್‌ವೆಲ್ತ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಮೀರಾಬಾಯಿ ಚಾನು, ಜೆರೆಮಿ ಲಾಲ್ರಿನ್ನುಂಗಾ ಮತ್ತು ಅಚಿಂತ್ ಶ್ಯೋಲಿ ಇದುವರೆಗೆ ವೇಟ್‌ಲಿಫ್ಟಿಂಗ್‌ನಲ್ಲಿ ಭಾರತಕ್ಕೆ ಚಿನ್ನ ಗೆದ್ದಿದ್ದಾರೆ. ಮತ್ತೊಂದೆಡೆ, ಸಂಕೇತ್ ಸರ್ಗರ್, ಬಿಂದಿಯಾರಾಣಿ ದೇವಿ, ವಿಕಾಸ್ ಠಾಕೂರ್ ಬೆಳ್ಳಿ ಪದಕಗಳನ್ನು ಭಾರತದ ಚೀಲಕ್ಕೆ ಹಾಕಿದರು. ಗುರುರಾಜ ಪೂಜಾರಿ, ಹರ್ಜಿಂದರ್ ಕೌರ್ ಮತ್ತು ಲವ್‌ಪ್ರೀತ್ ಕಂಚು ಗೆದ್ದರು.
Published On - 4:10 pm, Wed, 3 August 22