Updated on: Aug 04, 2022 | 7:05 AM
ಪ್ರಸ್ತುತ ಕಾಮನ್‌ವೆಲ್ತ್ ಕ್ರೀಡಾಕೂಟ ನಡೆಯುತ್ತಿದೆ. ಇದರಲ್ಲಿ ಭಾರತದ ಆಟಗಾರರೂ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆಲ್ಲುತ್ತಿದ್ದಾರೆ. ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕಂಡುಬರುವ ಪದಕಗಳ ಗಾತ್ರ, ತೂಕ ಮತ್ತು ಇತರ ಹಲವು ವಿಷಯಗಳ ಬಗ್ಗೆ ತಿಳಿದುಕೊಳ್ಳೋಣ.
ಕಾಮನ್‌ವೆಲ್ತ್ ಕ್ರೀಡಾಕೂಟದ ಪದಕಗಳನ್ನು ವಿದ್ಯಾರ್ಥಿಗಳಾದ ಅಂಬರ್ ಎಲ್ಲಿಸ್, ಫ್ರಾನ್ಸೆಸ್ಕಾ ವಿಲ್ಕಾಕ್ಸ್ ಮತ್ತು ಕತ್ರಿನಾ ರೋಡ್ರಿಗಸ್ ಕೈರೋ ವಿನ್ಯಾಸಗೊಳಿಸಿದ್ದಾರೆ. ಜೊತೆಗೆ ಅದಕ್ಕಾಗಿ ರಿಬ್ಬನ್ ಮತ್ತು ಬಾಕ್ಸ್ ಗಳನ್ನೂ ವಿನ್ಯಾಸ ಮಾಡಿದ್ದಾರೆ.
ಚಿನ್ನದ ಪದಕಗಳನ್ನು ಚಿನ್ನದಿಂದ ಮಾಡಲಾಗಿಲ್ಲ, ಅವುಗಳನ್ನು ತಯಾರಿಸಲು 1.45 ಪ್ರತಿಶತ ಚಿನ್ನ, 6 ಪ್ರತಿಶತ ಕಂಚು ಮತ್ತು 92.5 ಪ್ರತಿಶತ ಬೆಳ್ಳಿಯನ್ನು ಬಳಸಲಾಗುತ್ತದೆ. ಬೆಳ್ಳಿ ಪದಕಗಳನ್ನು ಶುದ್ಧ ಬೆಳ್ಳಿಯಿಂದ ತಯಾರಿಸಲಾಗುತ್ತದೆ.
ಈ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಒಟ್ಟು 1875 ಪದಕಗಳನ್ನು ನೀಡಲಾಗುತ್ತದೆ. ಇದನ್ನು 283 ಸ್ಪರ್ಧೆಗಳಲ್ಲಿ ನೀಡಲಾಗುತ್ತದೆ.
ಚಿನ್ನದ ಪದಕ 150 ಗ್ರಾಂ, ಬೆಳ್ಳಿ ಪದಕವೂ 150 ಗ್ರಾಂ, ಕಂಚಿನ ಪದಕ 130 ಗ್ರಾಂ. ಇರಲಿದ್ದು, ಈ ಪದಕದ ವ್ಯಾಸವು 63 ಮಿ.ಮೀ. ಇರುತ್ತದೆ.