CWG 2022: ಹೀಟ್‌ನಲ್ಲಿ ಮೊದಲ ಸ್ಥಾನ; 200 ಮೀಟರ್ ಓಟದಲ್ಲಿ ಸೆಮಿಫೈನಲ್​ಗೇರಿದ ಹಿಮಾ ದಾಸ್

Hima Das: ಹಿಮಾ ದಾಸ್ ತನ್ನ ಹೀಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಸೆಮಿಫೈನಲ್‌ನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಹಿಮಾ 200 ಮೀಟರ್ ಓಟವನ್ನು 23.42 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿದರು.

CWG 2022: ಹೀಟ್‌ನಲ್ಲಿ ಮೊದಲ ಸ್ಥಾನ; 200 ಮೀಟರ್ ಓಟದಲ್ಲಿ ಸೆಮಿಫೈನಲ್​ಗೇರಿದ ಹಿಮಾ ದಾಸ್
Hima Das
TV9kannada Web Team

| Edited By: pruthvi Shankar

Aug 04, 2022 | 4:59 PM

ಭಾರತದ ಹಿಮಾ ದಾಸ್ (Hima Das) ಕಾಮನ್‌ವೆಲ್ತ್ ಗೇಮ್ಸ್ 2022 (Commonwealth Games 2022)ರ 200 ಮೀಟರ್ ಓಟದ ಸೆಮಿಫೈನಲ್‌ಗೆ ಪ್ರವೇಶಿಸಿದ್ದಾರೆ. ಹಿಮಾ ದಾಸ್ ತನ್ನ ಹೀಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಸೆಮಿಫೈನಲ್‌ನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಹಿಮಾ 200 ಮೀಟರ್ ಓಟವನ್ನು 23.42 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿದರು. 1ನೇ ಸುತ್ತಿನಲ್ಲಿ ಹಿಮಾ ದಾಸ್ ಜಾಂಬಿಯಾದ ರೋಜಾ ನೊಟ್‌ಬುವು ಮತ್ತು ಉಗಾಂಡದ ಜೆಸ್ಸೆಂಟ್ ಅವರನ್ನು ಹಿಂದಿಕ್ಕಿದರು. ಇನ್ನು ಹಿಮಾ ಶುಕ್ರವಾರ ಅಂದರೆ ಇಂದು ತಡರಾತ್ರಿ 12.15ಕ್ಕೆ ಸೆಮಿಫೈನಲ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.

ಹಿಮಾ ದಾಸ್‌ಗೆ ಸುಲಭ ಗೆಲುವು

ಹಿಮಾ ದಾಸ್ ತನ್ನ ಹೀಟ್ ರೇಸ್​ನಲ್ಲಿ ಬಹಳ ಸುಲಭವಾಗಿ ಗೆದ್ದರು. 200 ಮೀಟರ್ ಓಟದಲ್ಲಿ ಹಿಮಾ ದಾಸ್ ಕಳೆದ ವರ್ಷ 22.88 ವೈಯಕ್ತಿಕ ಅತ್ಯುತ್ತಮ ಸಾಧನೆ ಮಾಡಿದ್ದಾರೆ ಎಂಬುದು ಗಮನಿಸಬೇಕಾದ ವಿಚಾರ. ಈಗ ಬರ್ಮಿಂಗ್‌ಹ್ಯಾಮ್‌ನಲ್ಲಿ ಪದಕ ಗೆಲ್ಲಲು ಹಿಮಾ ದಾಸ್ ತಮ್ಮ ಕೈಲಾದಷ್ಟು ಪ್ರಯತ್ನ ಮಾಡಬೇಕಿದೆ.

ಸೆಮಿಫೈನಲ್‌ನಲ್ಲಿ ಕಠಿಣ ಸವಾಲು ಎದುರಾಗಲಿದೆ

ಹಿಮಾ ಹೀಟ್ 2 ಅನ್ನು ಗೆದ್ದರು ಆದರೆ ಹೀಟ್ 1 ರಲ್ಲಿ ನೈಜೀರಿಯಾದ ಫೇವ್ರೆ ಒಫಿಲಿ (22.71 ಸೆ) ಮತ್ತು ಹೀಟ್ 5 ರಲ್ಲಿ ಎಲೈನ್ ಥಾಂಪ್ಸನ್ ಹೇರಾ (22.80 ಸೆ) ಹಿಮಾಗಿಂತ ವೇಗವಾಗಿ ಓಟ ಪೂರ್ಣಗೊಳಿಸಿದ್ದಾರೆ. ಹಿಮಾಗೆ ಹೋಲಿಸಿದರೆ, 6 ಆಟಗಾರರು ಹಿಮಾಗಿಂತ ವೇಗವಾಗಿ ಓಟ ಪೂರ್ಣಗೊಳಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಭಾರತದ ಈ ಆಟಗಾರ್ತಿಗೆ ಫೈನಲ್ ಸುಲಭವಲ್ಲ.

ಕಳೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಹಿಮಾ ಸಾಧನೆ

ಈ ಭಾರತೀಯ ಓಟಗಾರ್ತಿ ಕಳೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 400 ಮೀಟರ್ ಓಟ ಮತ್ತು 400 ಮೀಟರ್ ರಿಲೇಯಲ್ಲಿ ಭಾಗವಹಿಸಿದ್ದರು. ಆದರೆ, ಅವರಿಗೆ ಯಾವುದೇ ಯಶಸ್ಸು ಸಿಗಲಿಲ್ಲ. ಆದರೆ ಈ ಬಾರಿ ಹಿಮಾ ಅವರಿಂದ ಸಾಕಷ್ಟು ನಿರೀಕ್ಷೆಗಳಿವೆ. ಈ ಬಾರಿ ಟ್ರ್ಯಾಕ್ ಮತ್ತು ಫೀಲ್ಡ್‌ನಲ್ಲಿ ನೀರಜ್ ಚೋಪ್ರಾ ಇಲ್ಲ. ಗಾಯದಿಂದಾಗಿ ಅವರು ಬರ್ಮಿಂಗ್ಹ್ಯಾಮ್‌ಗೆ ಬಂದಿಲ್ಲ. ಅಂದಹಾಗೆ, ಬರ್ಮಿಂಗ್‌ಹ್ಯಾಮ್‌ನಲ್ಲಿ ಭಾರತಕ್ಕೆ ಟ್ರ್ಯಾಕ್ ಮತ್ತು ಫೀಲ್ಡ್‌ನಲ್ಲಿ ಮೊದಲ ಪದಕ ಲಭಿಸಿದೆ. ತೇಜಸ್ವಿನ್ ಶಂಕರ್ ಅವರು ಬುಧವಾರ ಹೈಜಂಪ್ ನಲ್ಲಿ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದರು. ಈಗ ಹಿಮಾ ದಾಸ್ ಕೂಡ ಅದ್ಭುತ ಪ್ರದರ್ಶನ ನೀಡುವ ನಿರೀಕ್ಷೆ ಇದೆ.

2010ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ ಎರಡು ಚಿನ್ನ, ಮೂರು ಬೆಳ್ಳಿ ಮತ್ತು ಏಳು ಕಂಚಿನ ಪದಕಗಳನ್ನು ಗೆಲ್ಲುವ ಮೂಲಕ ಅಥ್ಲೆಟಿಕ್ಸ್‌ನಲ್ಲಿ ತನ್ನ ಅತ್ಯುತ್ತಮ ಸಾಧನೆ ಮಾಡಿದೆ. ಇದಾದ ನಂತರ ಭಾರತ 2014 ಮತ್ತು 2018ರಲ್ಲಿ ಅಥ್ಲೆಟಿಕ್ಸ್‌ನಲ್ಲಿ ಒಂದು ಚಿನ್ನ, ಒಂದು ಬೆಳ್ಳಿ ಮತ್ತು ಒಂದು ಕಂಚು ಪಡೆದಿತ್ತು.

ಇದನ್ನೂ ಓದಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada