AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

CWG 2022: ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಪದಕ ಖಚಿತ..!

CWG 2022: ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ ಮತ್ತೊಂದು ಪದಕವನ್ನು ಖಚಿತಪಡಿಸಿಕೊಂಡಿದೆ. ಲಾನ್ ಬಾಲ್ ಸ್ಪರ್ಧೆಯ ಮಹಿಳಾ ಫೋರ್ಸ್, ನ್ಯೂಜಿಲೆಂಡ್ ತಂಡವನ್ನು 16-13 ರಿಂದ ಸೋಲಿಸುವ ಮೂಲಕ ಪದಕವನ್ನು ಖಚಿತಪಡಿಸಿಕೊಂಡಿದೆ.

CWG 2022: ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಪದಕ ಖಚಿತ..!
TV9 Web
| Updated By: ಪೃಥ್ವಿಶಂಕರ|

Updated on:Aug 01, 2022 | 5:29 PM

Share

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ (Commonwealth Games 2022) ಭಾರತ ಮತ್ತೊಂದು ಪದಕವನ್ನು ಖಚಿತಪಡಿಸಿಕೊಂಡಿದೆ. ಲಾನ್ ಬಾಲ್ ಸ್ಪರ್ಧೆಯ ಮಹಿಳಾ ಫೋರ್ಸ್, ನ್ಯೂಜಿಲೆಂಡ್ ತಂಡವನ್ನು 16-13 ರಿಂದ ಸೋಲಿಸುವ ಮೂಲಕ ಪದಕವನ್ನು ಖಚಿತಪಡಿಸಿಕೊಂಡಿದೆ. ಲವ್ಲಿ ಚೌಬೆ, ಪಿಂಕಿ, ನಯನ್ಮೋನಿ ಸೈಕಿಯಾ ಮತ್ತು ರೂಪಾ ರಾಣಿ ಟಿರ್ಕಿ ಅವರ ಕ್ವಾರ್ಟೆಟ್ ಈಗ ಚಿನ್ನದ ಪದಕಕ್ಕಾಗಿ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ಲಾನ್ ಬಾಲ್​ನಲ್ಲಿ ಭಾರತಕ್ಕೆ ಇಲ್ಲಿಯವರೆಗೆ ಪದಕ ಗೆಲ್ಲಲು ಸಾಧ್ಯವಾಗಿಲ್ಲ. ಇದೇ ಮೊದಲ ಬಾರಿಗೆ ಭಾರತ ಪದಕ ಖಚಿತಪಡಿಸಿಕೊಂಡಿದೆ. ಭಾರತ ತಂಡದ ಪದಕದ ಬಣ್ಣ ತಿಳಿಯಲು ಸದ್ಯ ಮಂಗಳವಾರದ ತನಕ ಕಾಯಬೇಕಿದೆ.

ಭಾರತೀಯ ಕ್ವಾರ್ಟೆಟ್ ಧಮಾಲ್

ಸೆಲಿನಾ ಗೊಡ್ಡಾರ್ಡ್ (ಲೀಡ್), ನಿಕೋಲ್ ಟೂಮಿ (ದ್ವಿತೀಯ), ಟೆಲ್ ಬ್ರೂಸ್ (ತೃತೀಯ) ಮತ್ತು ವೇಲ್ ಸ್ಮಿತ್ (ಸ್ಕಿಪ್) ಅವರ ನ್ಯೂಜಿಲೆಂಡ್ ತಂಡದ ವಿರುದ್ಧ ಎರಡನೇ ಲೆಗ್ ನಂತರ ಭಾರತ ತಂಡವು 0-5 ರಿಂದ ಪ್ರಬಲವಾದ ಪುನರಾಗಮನವನ್ನು ಮಾಡಿತು. ಒಂಬತ್ತನೇ ಲೆಗ್‌ನ ನಂತರ ಎರಡೂ ತಂಡಗಳು 7-7ರಲ್ಲಿ ಸಮಬಲ ಸಾಧಿಸಿದರೆ, 10ನೇ ಲೆಗ್‌ನ ನಂತರ ಭಾರತ 10-7ರಲ್ಲಿ ಮುನ್ನಡೆ ಸಾಧಿಸಿತು. ಈ ನಿಕಟ ಪಂದ್ಯದಲ್ಲಿ, ನ್ಯೂಜಿಲೆಂಡ್ ತಂಡ 14 ನೇ ಲೆಗ್ ನಂತರ 13-12 ಅಂತರದ ಮುನ್ನಡೆ ಸಾಧಿಸಲು ಸಾಧ್ಯವಾಯಿತು. ಇದಾದ ಬಳಿಕ ರೂಪಾ ರಾಣಿ ಬಾರಿಸಿದ ಅದ್ಭುತ ಹೊಡೆತದಿಂದ ಭಾರತ 16-13 ಅಂಕಗಳ ಅಂತರದಿಂದ ಜಯ ಸಾಧಿಸಿತು. ಭಾನುವಾರ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಉತ್ತರ ಐರ್ಲೆಂಡ್ ವಿರುದ್ಧ 8-26 ಅಂತರದಿಂದ ಸೋಲನುಭವಿಸುವ ಮೂಲಕ ಭಾರತದ ಪುರುಷರ ಜೋಡಿ ಸ್ಪರ್ಧೆಯಿಂದ ಹೊರಬಿದ್ದಿದೆ.

ನಾಲ್ಕನೇ ದಿನ ಕಾಮನ್‌ವೆಲ್ತ್‌ ಕ್ರೀಡಾಕೂಟದ ಅಂಗವಾಗಿ ವೇಟ್‌ಲಿಫ್ಟಿಂಗ್‌ನಲ್ಲಿ ಪುರುಷರ 81 ಕೆಜಿ ವಿಭಾಗದ ಫೈನಲ್‌ನಲ್ಲಿ ಭಾರತ ಸೋಲನನುಭವಿಸಿತು. ಭಾರತದ ಅಜಯ್ ಸಿಂಗ್ ಕ್ಲೀನ್ ಮತ್ತು ಜರ್ಕ್‌ನಲ್ಲಿ ಮೊದಲ ಪ್ರಯತ್ನದಲ್ಲಿ 172 ಕೆಜಿ ಎತ್ತಿದರು. ಇದಕ್ಕೂ ಮುನ್ನ ಅವರು ಸ್ನ್ಯಾಚ್‌ನಲ್ಲಿ ಗರಿಷ್ಠ 143 ಕೆಜಿ ಭಾರ ಎತ್ತಿದ್ದರು. ಈ ಮೂಲಕ 315 ಕೆಜಿ ಭಾರ ಎತ್ತಿ ಪದಕದ ಓಟದಲ್ಲಿದ್ದರು. ಸ್ನ್ಯಾಚ್ ಮೊದಲ ಪ್ರಯತ್ನದಲ್ಲಿ 138 ಕೆಜಿ, ಎರಡನೇ ಪ್ರಯತ್ನದಲ್ಲಿ 140 ಕೆಜಿ ಮತ್ತು ಮೂರನೇ ಪ್ರಯತ್ನದಲ್ಲಿ 143 ಕೆಜಿ ಎತ್ತಿದರು. ಆದರೆ ಅಂತಿಮವಾಗಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.

Published On - 4:01 pm, Mon, 1 August 22