- Kannada News Photo gallery cwg 2022 day 5 schedule lawn bowls gold medal badminton mixed final weightlifting match
CWG 2022 Day 5, Schedule: 5ನೇ ದಿನ ಭಾರತಕ್ಕೆ ಇನ್ನೂ ನಾಲ್ಕು ಚಿನ್ನ? ಹೀಗಿದೆ ವೇಳಾಪಟ್ಟಿ
CWG 2022 Day 5, Schedule: ಕಾಮನ್‌ವೆಲ್ತ್ ಗೇಮ್ಸ್ 2022 ರ 5 ನೇ ದಿನದಂದು, ಭಾರತ ಲಾನ್ ಬಾಲ್‌ಗಳಲ್ಲಿ ಚಿನ್ನ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಲು ನೋಡುತ್ತಿದೆ. ಅದೇ ಸಮಯದಲ್ಲಿ, ವೇಟ್‌ಲಿಫ್ಟಿಂಗ್‌ನಲ್ಲಿ ಇನ್ನೂ ಹೆಚ್ಚಿನ ಪದಕಗಳ ಮಳೆಯಾಗಲಿವೆ.
Updated on: Aug 02, 2022 | 7:01 AM

ಕಾಮನ್‌ವೆಲ್ತ್ ಗೇಮ್ಸ್ 2022 ರ 5 ನೇ ದಿನದಂದು, ಭಾರತ ಲಾನ್ ಬಾಲ್‌ಗಳಲ್ಲಿ ಚಿನ್ನ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಲು ನೋಡುತ್ತಿದೆ. ಅದೇ ಸಮಯದಲ್ಲಿ, ವೇಟ್‌ಲಿಫ್ಟಿಂಗ್‌ನಲ್ಲಿ ಇನ್ನೂ ಹೆಚ್ಚಿನ ಪದಕಗಳ ಮಳೆಯಾಗಲಿವೆ. ವೇಟ್‌ಲಿಫ್ಟಿಂಗ್‌ನಲ್ಲಿ ಭಾರತ ಇದುವರೆಗೆ 3 ಚಿನ್ನ, 2 ಬೆಳ್ಳಿ ಮತ್ತು ಒಂದು ಕಂಚಿನ ಪದಕಗಳನ್ನು ಗೆದ್ದಿದೆ. ಇದಲ್ಲದೇ ಈಜು, ಬಾಕ್ಸಿಂಗ್, ಅಥ್ಲೆಟಿಕ್ಸ್, ಹಾಕಿಯಲ್ಲಿಯೂ ಭಾರತದ ಶಕ್ತಿ ಎದ್ದು ಕಾಣಲಿದೆ.

ಕಾಮನ್‌ವೆಲ್ತ್ ಗೇಮ್ಸ್‌ನ ಐದನೇ ದಿನ ಭಾರತ ಲಾನ್ ಬಾಲ್‌ನಲ್ಲಿ ಚಿನ್ನದ ಪದಕಕ್ಕಾಗಿ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ಭಾರತ ಈ ಮೊದಲು ಕಾಮನ್‌ವೆಲ್ತ್‌ನಲ್ಲಿ ಲಾನ್ ಬಾಲ್‌ನಲ್ಲಿ ಯಾವುದೇ ಪದಕ ಗೆದ್ದಿರಲಿಲ್ಲ. ಪಂದ್ಯ ಮಧ್ಯಾಹ್ನ 1 ಗಂಟೆಗೆ ಆರಂಭವಾಗಲಿದೆ.

ವೇಟ್ ಲಿಫ್ಟಿಂಗ್ನಲ್ಲಿ ಭಾರತ ಉತ್ತಮ ಪ್ರದರ್ಶನ ಮುಂದುವರಿಸಿದೆ. ಮಂಗಳವಾರ ಮಹಿಳೆಯರ 76 ಕೆಜಿ ವಿಭಾಗದಲ್ಲಿ ಪೂನಂ ಯಾದವ್, ಪುರುಷರ 96 ಕೆಜಿಯಲ್ಲಿ ವಿಕಾಸ್ ಠಾಕೂರ್ ಅವರನ್ನು ಇಡೀ ದೇಶವೇ ನಿರೀಕ್ಷಿಸುತ್ತಿದೆ. ಪೂನಂ ಅವರ ಪಂದ್ಯ ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿದ್ದು, ವಿಕಾಸ್ ಅವರ ಪಂದ್ಯ ಸಂಜೆ 6.30ಕ್ಕೆ ಆರಂಭವಾಗಲಿದೆ.

50 ಮೀಟರ್ ಬ್ಯಾಕ್‌ಸ್ಟ್ರೋಕ್‌ನ ಫೈನಲ್‌ನಲ್ಲಿ ಭಾರತದ ಸ್ಟಾರ್ ಈಜುಗಾರ ಶ್ರೀಹರಿ ನಟರಾಜ್ ಸವಾಲು ಹಾಕಲಿದ್ದಾರೆ. ಅದೇ ಸಮಯದಲ್ಲಿ, ನಟರಾಜ್ ಪುರುಷರ 200 ಮೀಟರ್ ಬ್ಯಾಕ್‌ಸ್ಟ್ರೋಕ್ ಹೀಟ್‌ನಲ್ಲಿ ಮಧ್ಯಾಹ್ನ 3 ಗಂಟೆಗೆ ಇಳಿಯಲಿದ್ದಾರೆ. ಬ್ಯಾಡ್ಮಿಂಟನ್ ಮಿಶ್ರ ತಂಡದ ಫೈನಲ್ ಪಂದ್ಯವೂ ನಡೆಯಲಿದ್ದು, ಅದಕ್ಕೂ ಮುನ್ನ ಭಾರತ ಸಿಂಗಾಪುರವನ್ನು ಸೋಲಿಸಬೇಕಿದೆ.

ಮುರಳಿ ಶ್ರೀಶಂಕರ್ ಮತ್ತು ಮೊಹಮ್ಮದ್ ಅನಾಸ್ ಅವರು ಪುರುಷರ ಲಾಂಗ್ ಜಂಪ್ ಅರ್ಹತಾ ಸುತ್ತಿನ ಎ ಮತ್ತು ಬಿ ನಲ್ಲಿ ಮಧ್ಯಾಹ್ನ 2.30 ಕ್ಕೆ ಸ್ಪರ್ಧಿಸಲಿದ್ದಾರೆ. ಬಾಕ್ಸಿಂಗ್‌ನಲ್ಲಿ ಆಶಿಶ್ ಕುಮಾರ್ ಪುರುಷರ 75 ಕೆಜಿ ಮೇಲ್ಪಟ್ಟ ವಿಭಾಗದಲ್ಲಿ ಪ್ರೀ ಕ್ವಾರ್ಟರ್‌ಫೈನಲ್‌ನಲ್ಲಿ ಸವಾಲು ಹಾಕಲಿದ್ದಾರೆ. ಹಾಕಿಯಲ್ಲಿ ಭಾರತ ಮಹಿಳಾ ತಂಡ ಸಂಜೆ 6.30ಕ್ಕೆ ನಡೆಯುವ ಗುಂಪಿನ ಪಂದ್ಯದಲ್ಲಿ ಇಂಗ್ಲೆಂಡ್ ಸವಾಲನ್ನು ಎದುರಿಸಲಿದೆ.




