CWG 2022 Badminton: ಎದುರಾಳಿಗಳನ್ನು ಸುಲಭವಾಗಿ ಸೋಲಿಸಿ ಮುಂದಿನ ಸುತ್ತಿಗೆ ಲಗ್ಗೆ ಇಟ್ಟ ಸಿಂಧು ಮತ್ತು ಶ್ರೀಕಾಂತ್

CWG 2022 Badminton: ಎರಡು ಬಾರಿ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದಿರುವ ಸಿಂಧು 32ರ ಸುತ್ತಿನ ಪಂದ್ಯದಲ್ಲಿ ಮಾಲ್ಡೀವ್ಸ್‌ನ ಫಾತಿಮಾ ನಬಾಹ ಅಬ್ದುಲ್ ರಜಾಕ್ ಅವರನ್ನು 21-4 21-11 ಸೆಟ್‌ಗಳಿಂದ ಸೋಲಿಸಿದರು. ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಶ್ರೀಕಾಂತ್ 21-9 21-9ರಲ್ಲಿ ಉಗಾಂಡದ ಡೇನಿಯಲ್ ವನಗಾಲಿಯಾ ಅವರನ್ನು ಸೋಲಿಸಿದರು.

CWG 2022 Badminton: ಎದುರಾಳಿಗಳನ್ನು ಸುಲಭವಾಗಿ ಸೋಲಿಸಿ ಮುಂದಿನ ಸುತ್ತಿಗೆ ಲಗ್ಗೆ ಇಟ್ಟ ಸಿಂಧು ಮತ್ತು ಶ್ರೀಕಾಂತ್
ಸಿಂಧು
Follow us
TV9 Web
| Updated By: ಪೃಥ್ವಿಶಂಕರ

Updated on:Aug 04, 2022 | 8:01 PM

ಭಾರತದ ಬ್ಯಾಡ್ಮಿಂಟನ್ ತಾರೆಗಳಿಂದ ಭಾರತ ಏನನ್ನು ನಿರೀಕ್ಷಿಸಿತ್ತೋ ಅದು ನಿಜವಾಗುತ್ತಿದೆ. ವಿಶ್ವದ ಅತ್ಯುತ್ತಮ ಮಹಿಳಾ ಆಟಗಾರ್ತಿಯರಲ್ಲಿ ಒಬ್ಬರಾದ ಪಿವಿ ಸಿಂಧು (PV Sindhu) ತಮ್ಮ ಖ್ಯಾತಿಗೆ ಅನುಗುಣವಾಗಿ ಆಟವನ್ನು ತೋರಿಸಿದರೆ, ಪುರುಷ ಆಟಗಾರ ಕಿಡಂಬಿ ಶ್ರೀಕಾಂತ್ (Kidambi Srikanth) ಅದೇ ಕೆಲಸವನ್ನು ಮಾಡಿದರು. ಇಬ್ಬರೂ ತಮ್ಮ ತಮ್ಮ ಪಂದ್ಯಗಳನ್ನು ಸುಲಭವಾಗಿ ಗೆದ್ದಿದ್ದಾರೆ. ಕಾಮನ್‌ವೆಲ್ತ್‌ ಗೇಮ್ಸ್‌-2022 (Commonwealth Games-2022)ರ ಸಿಂಗಲ್ಸ್‌ ಪಂದ್ಯಾವಳಿಯನ್ನು ಗೆಲ್ಲುವ ಮೂಲಕ ಇಬ್ಬರೂ ಪ್ರಿ-ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದ್ದಾರೆ.

ಎರಡು ಬಾರಿ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದಿರುವ ಸಿಂಧು 32ರ ಸುತ್ತಿನ ಪಂದ್ಯದಲ್ಲಿ ಮಾಲ್ಡೀವ್ಸ್‌ನ ಫಾತಿಮಾ ನಬಾಹ ಅಬ್ದುಲ್ ರಜಾಕ್ ಅವರನ್ನು 21-4 21-11 ಸೆಟ್‌ಗಳಿಂದ ಸೋಲಿಸಿದರು. ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಶ್ರೀಕಾಂತ್ 21-9 21-9ರಲ್ಲಿ ಉಗಾಂಡದ ಡೇನಿಯಲ್ ವನಗಾಲಿಯಾ ಅವರನ್ನು ಸೋಲಿಸಿದರು.

ಸಿಂಧುಗೆ ಸುಲಭ ಗೆಲುವು

ಇದನ್ನೂ ಓದಿ
Image
CWG 2022: ಹೀಟ್‌ನಲ್ಲಿ ಮೊದಲ ಸ್ಥಾನ; 200 ಮೀಟರ್ ಓಟದಲ್ಲಿ ಸೆಮಿಫೈನಲ್​ಗೇರಿದ ಹಿಮಾ ದಾಸ್
Image
CWG 2022: ಕಾಮನ್​ವೆಲ್ತ್ ಗೇಮ್ಸ್​ನಲ್ಲಿ ನೀಡುವ ಚಿನ್ನದ ಪದಕದಲ್ಲಿ ಎಷ್ಟು ಗ್ರಾಂ ಚಿನ್ನವಿರುತ್ತೆ ಗೊತ್ತಾ?
Image
CWG 2022 Squash: ಸ್ಕ್ವಾಷ್​ನಲ್ಲಿ ಕಂಚು ಗೆದ್ದು ಇತಿಹಾಸ ನಿರ್ಮಿಸಿದ ಸೌರವ್ ಘೋಷಾಲ್..!

ಮೊದಲು ಅಂಗಳ ಪ್ರವೇಶಿಸಿದ ಹಿಂದಿನ ಹಂತದ ಬೆಳ್ಳಿ ಪದಕ ವಿಜೇತೆ ಸಿಂಧು, ಪಂದ್ಯದಲ್ಲಿ ಸ್ವಲ್ಪವೂ ಬೆವರು ಸುರಿಸಲಿಲ್ಲ, ಆದರೆ ಫಾತಿಮಾ ಸಾಕಷ್ಟು ಸಂಕಷ್ಟ ಎದುರಿಸಿದ್ದರು. ಮೊದಲ ಗೇಮ್‌ನಲ್ಲಿ ಸಿಂಧು ಮಾಲ್ಡೀವ್ಸ್ ಎದುರಾಳಿ ವಿರುದ್ಧ ದಾಳಿ ನಡೆಸದೆ ಡ್ರಾಪ್ ಶಾಟ್‌ಗಳನ್ನು ಬಳಸಿ ಪಾಯಿಂಟ್ಸ್ ಕಲೆಹಾಕಿದರು. ಎರಡನೇ ಗೇಮ್‌ನಲ್ಲಿ, ಫಾತಿಮಾ ಆರಂಭದಲ್ಲಿ ಸ್ವಲ್ಪ ಸವಾಲನ್ನು ನೀಡಿದರು ಮತ್ತು ಭಾರತೀಯ ಆಟಗಾರ್ತಿ ಸರಳ ತಪ್ಪುಗಳ ಮೂಲಕ ಪಾಯಿಂಟ್‌ಗಳನ್ನು ಬಿಟ್ಟುಕೊಟ್ಟಿದ್ದರಿಂದ ಅವರು ಸಿಂಧು ಅವರೊಂದಿಗೆ 9-9 ರಲ್ಲಿ ಸಮಬಲಗೊಂಡರು. ಆದರೆ ನಂತರ ಸಿಂಧು ವಿರಾಮದವರೆಗೂ 11-9 ಮುನ್ನಡೆ ಸಾಧಿಸಿದರು. ಇದರ ನಂತರ, ಎದುರಾಳಿ ಕೇವಲ ಎರಡು ಅಂಕಗಳನ್ನು ಗಳಿಸಲಾಗಿದ್ದರೆ, ಸಿಂಧು ಆರಾಮದಾಯಕವಾಗಿ ಪಾಯಿಂಟ್ ಕಲೆಹಾಕುವ ಮೂಲಕ ಕೊನೆಯ 16 ರಲ್ಲಿ ಸ್ಥಾನ ಪಡೆದರು.

ಅದ್ಭುತ ಆಟ ಪ್ರದರ್ಶಿಸಿದ ಶ್ರೀಕಾಂತ್

ಮಿಶ್ರ ತಂಡ ಪಂದ್ಯಾವಳಿಯ ಫೈನಲ್‌ನಲ್ಲಿ ಶ್ರೀಕಾಂತ್ ತಮ್ಮ ಕೆಳ ಶ್ರೇಯಾಂಕದ ಮಲೇಷ್ಯಾದ ಜೆ ಯೋಂಗ್ ಆನ್ ವಿರುದ್ಧ ಸೋತು ತೀವ್ರ ನಿರಾಶೆಗೊಂಡಿದ್ದರು. ಆದರೆ ವಿಶ್ವದ 13 ನೇ ಶ್ರೇಯಾಂಕಿತ ಆಟಗಾರ ತನ್ನ ಎದುರಾಳಿ ಉಗಾಂಡದ ಡೇನಿಯಲ್ ವನಗಾಲಿಯಾ ಅವರನ್ನು ಸೋಲಭವಾಗಿ ಸೋಲಿಸಿದರು. ಆದರೆ ಉಗಾಂಡ ಆಟಗಾರ, ಶ್ರೀಕಾಂತ್ ಅವರ ಕೆಲವು ತಪ್ಪುಗಳಿಂದ ಹೆಚ್ಚಿನ ಅಂಕಗಳನ್ನು ಪಡೆದರು

ಮಿಶ್ರ ಡಬಲ್ಸ್‌ನಲ್ಲಿ ಸೋಲು

ಆದರೆ ಮಿಶ್ರ ಡಬಲ್ಸ್‌ನಲ್ಲಿ ಭಾರತ ಸೋತಿದೆ. 32ರ ಸುತ್ತಿನಲ್ಲಿ ಭಾರತದ ಅಶ್ವಿನಿ ಪೊನ್ನಪ್ಪ ಮತ್ತು ಸುಮಿತ್ ರೆಡ್ಡಿ ಇಂಗ್ಲೆಂಡ್ ಜೋಡಿ ಎದುರು 18-21, 16-21 ಅಂತರದಲ್ಲಿ ಸೋತರು.

Published On - 8:00 pm, Thu, 4 August 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್