ಬೆಂಗಳೂರು: ಬೆಂಗಳೂರಿನಲ್ಲಿ ಕೊರೊನಾ ಸೋಂಕಿಗೆ ಯುವಕನೋರ್ವ ಬಲಿಯಾಗಿದ್ದಾನೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 28 ವರ್ಷದ ಯುವಕ ಇಂದು ಸಾವನ್ನಪ್ಪಿದ್ದಾನೆ. ಈತನನ್ನು ಇತ್ತೀಚೆಗಷ್ಟೇ ಬೌರಿಂಗ್ ಆಸ್ಪತ್ರೆಯಿಂದ ವಿಕ್ಟೋರಿಯಾಗೆ ಶಿಫ್ಟ್ ಮಾಡಲಾಗಿತ್ತು.
ಆದ್ರೆ ಈ ಯುವಕನ ಸಾವು ವಿಕ್ಟೋರಿಯಾ ಆಸ್ಪತ್ರೆ ವೈದ್ಯರಿಗೇ ಆತಂಕ, ಆಘಾತ ತಂದಿದೆ. ಇದಕ್ಕೆ ಕಾರಣ ಮೃತ ಯುವಕನಿಗೆ ಬೇರಾವುದೇ ಕಾಯಿಲೆಗಳಿರಲಿಲ್ಲ. ಹೀಗಾಗಿ ಬೇರಾವುದೇ ಕಾಯಿಲೆಗಳಿಲ್ಲದೇ, ಕೇವಲ ಕೊರೊನಾ ವೈರಸ್‌ನಿಂದಾಗಿ ಸಾವಿಗೀಡಾದ ಮೊದಲ ವ್ಯಕ್ತಿ ಈತ ಎಂಬಂತಾಗಿದೆ.
ಮೃತ ಯುವಕ ಗಟ್ಟಿಮುಟ್ಟಾಗಿದ್ದು, ಇನ್ನಾವುದೇ ಖಾಯಿಲೆ ಇರದೇ ಕೇವಲ ಕೊರೊನಾದಿಂದಾಗಿ ಸಾವಿಗೀಡಾಗಿದ್ದು ಆತಂಕದ ಬೆಳವಣಿಗೆಯಾಗಿದೆ. ಯಾಕಂದ್ರೆ ಅಲ್ಲೊಂದು ಇಲ್ಲೊಂದು ಸಾವಿನ ಘಟನೆಗಳಿಂದ ಈಗ ದಿನನಿತ್ಯದ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ. ಅದ್ರಲ್ಲೂ ಬೆಂಗಳೂರಿನ ಯುವಕನ ಸಾವಿನ ಬೆಳವಣಿಗೆ ಆತಂಕಕಾರಿಯಾಗಿದ್ದು ಮುಂಬರುವ ದಿನಗಳ ಬಗ್ಗೆ ವೈದ್ಯಲೋಕ ಆತಂಕಕ್ಕೊಳಗಾಗಿದೆ.
Published On - 5:50 pm, Fri, 12 June 20