ಘಟಪ್ರಭಾ ನದಿಯಲ್ಲಿ ಈಜಿಗಿಳಿದಿದ್ದ ಯುವಕ ನೀರುಪಾಲು

| Updated By: ಸಾಧು ಶ್ರೀನಾಥ್​

Updated on: Oct 08, 2020 | 10:28 AM

ಬೆಳಗಾವಿ: ಘಟಪ್ರಭಾ ನದಿಯಲ್ಲಿ ಈಜಿಗಿಳಿದಿದ್ದ ಯುವಕ ನೀರುಪಾಲಾಗಿರುವ ಘಟನೆ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಚಿಗಡೊಳ್ಳಿ ಗ್ರಾಮದ ಬ್ರಿಡ್ಜ್ ಕಂ ಬ್ಯಾರೇಜ್‌ ಬಳಿ ನಡೆದಿದೆ. ನೀರುಪಾಲಾದ ಯುವಕನನ್ನು ಮೆಳವಂಕಿಯ ರುದ್ರಪ್ಪ ವಕ್ಕುಂದ(19) ಎಂದು ಗುರುತಿಸಲಾಗಿದೆ. ಮೂಡಲಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇನ್ನು ಘಟನೆ ಬೆಳಕಿಗೆ ಬರುತ್ತಿದ್ದಂತೆ ಸ್ಥಳದಲ್ಲಿ ಬೀಡು ಬಿಟ್ಟಿರುವ NDRF ಹಾಗೂ ಅಗ್ನಿ ಶಾಮಕ ದಳ ಸಿಬ್ಬಂದಿ ಶೋಧಕಾರ್ಯ ನಡೆಸುತ್ತಿದ್ದಾರೆ.

ಘಟಪ್ರಭಾ ನದಿಯಲ್ಲಿ ಈಜಿಗಿಳಿದಿದ್ದ ಯುವಕ ನೀರುಪಾಲು
Follow us on

ಬೆಳಗಾವಿ: ಘಟಪ್ರಭಾ ನದಿಯಲ್ಲಿ ಈಜಿಗಿಳಿದಿದ್ದ ಯುವಕ ನೀರುಪಾಲಾಗಿರುವ ಘಟನೆ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಚಿಗಡೊಳ್ಳಿ ಗ್ರಾಮದ ಬ್ರಿಡ್ಜ್ ಕಂ ಬ್ಯಾರೇಜ್‌ ಬಳಿ ನಡೆದಿದೆ. ನೀರುಪಾಲಾದ ಯುವಕನನ್ನು ಮೆಳವಂಕಿಯ ರುದ್ರಪ್ಪ ವಕ್ಕುಂದ(19) ಎಂದು ಗುರುತಿಸಲಾಗಿದೆ.

ಮೂಡಲಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇನ್ನು ಘಟನೆ ಬೆಳಕಿಗೆ ಬರುತ್ತಿದ್ದಂತೆ ಸ್ಥಳದಲ್ಲಿ ಬೀಡು ಬಿಟ್ಟಿರುವ NDRF ಹಾಗೂ ಅಗ್ನಿ ಶಾಮಕ ದಳ ಸಿಬ್ಬಂದಿ ಶೋಧಕಾರ್ಯ ನಡೆಸುತ್ತಿದ್ದಾರೆ.