ಚಿಕ್ಕಬಳ್ಳಾಪುರ: ಈಗಿನ ಕಾಲದಲ್ಲಿ, ಮದ್ವೆ ವಯಸ್ಸಿನ ಹುಡುಗರಿಗೆ, ಹೆಣ್ ಸಿಗೋದೇ ಕಷ್ಟ ಆಗ್ಬಿಟ್ಟಿದೆ. ವಧುವಿನ ಕಡೆಯವ್ರ ಕಂಡೀಷನ್ಸ್ಗೆ ವರನ ಮನೆಯವ್ರು ಕಕ್ಕಾಬಿಕ್ಕಿ ಆಗ್ತಿದ್ದಾರೆ. ಅದ್ರಲ್ಲೂ, ಇಲ್ಲೊಂದು ಬಡಾವಣೆಯ ಹುಡುಗರಿಗೆ ಎಷ್ಟೇ ಬೇಡಿಕೊಂಡ್ರೂ ಕನ್ಯಾ ಸಿಗ್ತಿಲ್ಲ.
ಕುಡಿಯುವ ನೀರಿಲ್ಲ. ಚರಂಡಿ ವ್ಯವಸ್ಥೆ ಸರಿಯಿಲ್ಲ. ಕರೆಂಟ್ ಯಾವಾಗ ಹೋಗುತ್ತೆ, ಯಾವಾಗ ಬರುತ್ತೆ ಗೊತ್ತಾಗಲ್ಲ. ಸಾಲು ಸಾಲಾಗಿರೋ ಈ ಮನೆಗಳ ಸಾಲಿನಷ್ಟೇ ಸಮಸ್ಯೆಗಳಿವೆ.
ಎಸ್.. ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ಹೊರವಲಯದಲ್ಲಿರೋ ರಾಜೀವ್ ಗಾಂಧಿ ಆಶ್ರಯ ಬಡಾವಣೆ ಇದು. ಬಡವರಿಗೆ ಅಂತಲೇ, ದಶಕದ ಹಿಂದೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಮನೆಗಳನ್ನ ನಿರ್ಮಿಸಲಾಯ್ತು. ಆದ್ರೆ, ಮೂಲಭೂತ ಸೌಕರ್ಯಗಳಿಲ್ಲದೆ ಜನ ಪರದಾಡ್ತಿದ್ದಾರೆ. ಇದ್ರಿಂದ, ಬಡಾವಣೆಯ ಯುವಕರಿಗೆ ಕನ್ಯೆಯರನ್ನು ಕೊಡ್ತಿಲ್ವಂತೆ.
ಅಂದಹಾಗೇ, ನಗರದಿಂದ 5 ಕಿಲೋಮೀಟರ್ ದೂರದಲ್ಲಿ ಈ ಬಡಾವಣೆ ಇದೆ. ಕುಡಿಯುವ ನೀರು, ಚರಂಡಿ, ರಸ್ತೆ, ವಿದ್ಯುತ್ ಪೂರೈಕೆ ಸೇರಿದಂತೆ ಸರಿಯಾದ ಸೌಲಭ್ಯಗಳಿಲ್ಲ. ರೇಷ್ಮೆ ನೂಲು ತೆಗೆಯೋ ಕಾರ್ಖಾನೆಗಳು ಇರೋದರಿಂದ ಗಬ್ಬು ವಾಸನೆಯಲ್ಲಿ ಜನ ಬಾಳುವಂತಾಗಿದೆ. ಸಂಬಂಧಿಕರು ಕೂಡ ಏರಿಯಾಗೆ ಬರಲು ಹಿಂದೇಟು ಹಾಕ್ತಾರಂತೆ. ಒಟ್ನಲ್ಲಿ, ಸೂರಿಗಾಗಿ ಸೊರಗಿದ್ದ ಬಡವರಿಗೆ ನೆಲೆಯೇನೋ ಸಿಕ್ಕಿದೆ. ಆದ್ರೆ, ಸೌಕರ್ಯಗಳಿಲ್ಲದೆ ಆ ನೆಲೆಯೇ ಜನರಿಗೆ ನರಕದಂತೆ ಭಾಸವಾಗ್ತಿದೆ.
Published On - 12:37 pm, Wed, 26 February 20