ನೆಲಮಂಗಲ: ಯುವಕನೊರ್ವನನ್ನು ಆತನ ಸಹವರ್ತಿಗಳೇ ಅಟ್ಟಾಡಿಸಿಕೊಂಡು ಹೊಡೆದ ಘಟನೆ ಬೆಂಗಳೂರು ಉತ್ತರ ತಾಲೂಕಿನನಲ್ಲಿ ಸಂಭವಿಸಿದೆ.
ಬೆಂಗಳೂರು ಉತ್ತರ ತಾಲೂಕಿನ ತೋಟದ ಗುಡ್ಡದಹಳ್ಳಿಯ ಕೆಲ ಯುವಕರು ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡತ್ತಿದ್ದರು. ಕೊರೊನಾ ಸಂಕಷ್ಟದಿಂದಾಗಿ ಕೆಲವರನ್ನು ಕೆಲಸದಿಂದಾಗಿ ತೆಗೆದು ಹಾಕಲಾಗಿತ್ತು. ಆದ್ರೆ ಇನ್ನುಳಿದ ಕೆಲವರನ್ನು ಕೆಲಸದಲ್ಲಿ ಮುಂದುವರಿಸಲಾಗಿತ್ತು.
ಆದ್ರೆ ಕೆಲಸ ಕಳೆದುಕೊಂಡ ಯುವಕರು ಇನ್ನೂ ಕೆಲಸದಲ್ಲಿದ್ದ ಯುವಕನೊರ್ವನಿಗೆ ನಮ್ಮನ್ನು ಕೆಲಸದಿಂದ ತೆಗೆದಿದ್ದಾರೆ. ನೀನೂ ಕೆಲಸಕ್ಕೆ ಹೋಗಬಾರದೆಂದು ತಾಕೀತು ಮಾಡಿದ್ದಾರೆ.
ಆದ್ರೂ ಆ ಯುವಕ ಕೆಲಸಕ್ಕೆ ಹೋಗಿದ್ದನ್ನು ಕಂಡು ಆತನನ್ನು ಅಟ್ಟಾಡಿಸಿಕೊಂಡು ಹೊಡೆದಿದ್ದಾರೆ. ಹಲ್ಲೇಕೊರರಿಂದ ತಪ್ಪಿಸಿಕೊಳ್ಳಲು ಆ ಯುವಕ ರಸ್ತೆಯಲ್ಲಿ ಓಡುತ್ತಿರುವ ದೃಶ್ಯವನ್ನು ಕೆಲ ಸ್ಥಳೀಯರು ಮೊಬೈಲ್‌ನಲ್ಲಿ ರಿಕಾರ್ಡ್ ಮಾಡಿದ್ದಾರೆ.
ಮಾದನಾಯಕನಹಳ್ಳಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಕುದರೆಗೆರೆ ಗ್ರಾಮದ ಹರೀಶ್ ಪೂಜಾರಿ ಮತ್ತು ಸಹಚರರ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.