Chahal dhanashree meet Yash Radhika ಬೆಂಗಳೂರಲ್ಲಿ ಯಶ್​-ರಾಧಿಕಾ ದಂಪತಿಯ ಭೇಟಿ ಮಾಡಿದ ಚಹಾಲ್​-ಧನಶ್ರೀ

Yuzvendra Chahal dhanashree Verma meet KGF star Yash and wife Radhika Pandit ಬೆಂಗಳೂರಿನ ಖಾಸಗಿ ಹೋಟೆಲ್​ ಒಂದರಲ್ಲಿ ಯಶ್​ ಹಾಗೂ ರಾಧಿಕಾ ಅವರನ್ನು ಯಜುವೇಂದ್ರ ಚಹಾಲ್​ ಹಾಗೂ ಅವರ ಪತ್ನಿ ಧನಶ್ರೀ ವರ್ಮಾ ಭೇಟಿ ಮಾಡಿದ್ದಾರೆ.

Chahal dhanashree meet Yash Radhika ಬೆಂಗಳೂರಲ್ಲಿ ಯಶ್​-ರಾಧಿಕಾ ದಂಪತಿಯ ಭೇಟಿ ಮಾಡಿದ ಚಹಾಲ್​-ಧನಶ್ರೀ
ಯಶ್​ ದಂಪತಿ ಜತೆ ಚಹಾಲ್​ ದಂಪತಿ
Edited By: ಸಾಧು ಶ್ರೀನಾಥ್​

Updated on: Feb 08, 2021 | 5:43 PM

ಕೆಜಿಎಫ್​ ಚಾಪ್ಟರ್​-2 ಟೀಸರ್​ ತೆರೆಕಂಡಾಗ ಟೀಂ ಇಂಡಿಯಾ ಸ್ಪಿನ್ನರ್ ಯಜುವೇಂದ್ರ ಚಹಾಲ್​​ ಇನ್​​ಸ್ಟಾಗ್ರಾಂನಲ್ಲಿ ಈ ಬಗ್ಗೆ ಸ್ಟೇಟಸ್​  ಒಂದನ್ನು ಹಾಕಿದ್ದರು. ಅದರಲ್ಲಿ, ಕೆಜಿಎಫ್​-2ಗಾಗಿ ನಾನು ಕಾಯುತ್ತಿದ್ದೇನೆ ಎಂದು ಬರೆದುಕೊಂಡಿದ್ದರು. ಈಗ ವಿಶೇಷ ಎಂಬಂತೆ ಚಹಾಲ್​ ದಂಪತಿ ರಾಕಿಂಗ್​ ಸ್ಟಾರ್​ ದಂಪತಿಯನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಅಷ್ಟೇ ಅಲ್ಲ, ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ​. (Yuzvendra Chahal dhanashree Verma meet KGF star Yash and wife Radhika Pandit)

ಬೆಂಗಳೂರಿನ ಖಾಸಗಿ ಹೋಟೆಲ್​ ಒಂದರಲ್ಲಿ ಯಶ್​ ಹಾಗೂ ರಾಧಿಕಾ ಅವರನ್ನು ಯಜುವೇಂದ್ರ ಚಹಾಲ್​ ಹಾಗೂ ಅವರ ಪತ್ನಿ ಧನಶ್ರೀ ವರ್ಮಾ ಭೇಟಿ ಮಾಡಿದ್ದಾರೆ. ಯಶ್​ ಹಾಗೂ ರಾಧಿಕಾ ಫಾರ್ಮಲ್​ ಉಡುಗೆಯಲ್ಲಿ ಮಿಂಚಿದರೆ, ಚಹಾಲ್​ ಹಾಗೂ ಧನಶ್ರೀ​ ಸಾಮಾನ್ಯ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಐಪಿಎಲ್​ನಲ್ಲಿ ಚಹಾಲ್ ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ತಂಡದ ಪರವಾಗಿ ಆಡುತ್ತಿದ್ದಾರೆ. ಹೀಗಾಗಿ ಅವರು ಬೆಂಗಳೂರು ಹಾಗೂ ಕನ್ನಡ ಭಾಷೆ ಬಗ್ಗೆ ವಿಶೇಷ ಗೌರವ ಹೊಂದಿದ್ದಾರೆ. ಅಷ್ಟೇ ಅಲ್ಲ, ಕೆಜಿಎಫ್​ ಮೊದಲ ಚಾಪ್ಟರ್​ ನೋಡಿರುವ ಚಹಾಲ್​, ತುಂಬಾನೇ ಮೆಚ್ಚಿಕೊಂಡಿದ್ದಾರಂತೆ. ಚಹಾಲ್​ ಯಶ್​ ಅವರ ದೊಡ್ಡ ಅಭಿಮಾನಿ ಕೂಡ ಹೌದು. ಇದೇ ಕಾರಣಕ್ಕೆ ಯಶ್​ ಭೇಟಿ ಮಾಡಿದ್ದಾರೆ ಚಹಾಲ್.

ಕೆಜಿಎಫ್​ ಚಾಪ್ಟರ್​ 2 ರಿಲೀಸ್​ ದಿನಾಂಕ ಇತ್ತೀಚೆಗಷ್ಟೇ ಘೋಷಣೆ ಆಗಿತ್ತು. ಜುಲೈ 16ರಂದು ಸಿನಿಮಾ ವಿಶ್ವಾದ್ಯಂತ ತೆರೆಗೆ ಬರುತ್ತಿದೆ. ಯಶ್​ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡರೆ, ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಚಾಪ್ಟರ್​ 2ನಲ್ಲಿ ಬಾಲಿವುಡ್​ ನಟ ಸಂಜಯ್​ ದತ್​ ಪ್ರಮುಖ ಖಳನಾಗಿ ಕಾಣಿಸಿಕೊಳ್ಳಲಿದ್ದಾರೆ. ​ ಯಶ್​ ಜನ್ಮದಿನದ ಪ್ರಯುಕ್ತ ತೆರೆಕಂಡಿದ್ದ ಕೆಜಿಎಫ್​-2 ಟೀಸರ್​ ಸಾಕಷ್ಟು ಹೊಸ ದಾಖಲೆಗಳನ್ನು ಸೃಷ್ಟಿ ಮಾಡಿದೆ.

ಜುಲೈ 16 ಅನ್ನು ನ್ಯಾಷನಲ್ ಹಾಲಿಡೇ ಆಗಿ ಘೋಷಿಸಿ -ಪ್ರಧಾನಿ ಮೋದಿಗೆ ಯಶ್ ಅಭಿಮಾನಿಗಳ​ ಮನವಿ

Published On - 5:43 pm, Mon, 8 February 21

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us