ಜುಲೈ 16 ಅನ್ನು ನ್ಯಾಷನಲ್ ಹಾಲಿಡೇ ಆಗಿ ಘೋಷಿಸಿ -ಪ್ರಧಾನಿ ಮೋದಿಗೆ ಯಶ್ ಅಭಿಮಾನಿಗಳ​ ಮನವಿ

ರಾಕಿಂಗ್​ ಸ್ಟಾರ್​ ಅವರ ಕೆಲವು ಫ್ಯಾನ್ಸ್​ ತಮ್ಮ ಬಾಸ್​ನ ಸಿನಿಮಾವನ್ನು ಬಿಡುಗಡೆಯಾದ ದಿನವೇ ನೋಡಲು ಹಾತೊರೆಯುತ್ತಿದ್ದಾರೆ. ಹಾಗಾಗಿ, ಸಿನಿಮಾ ಬಿಡುಗಡೆಯಾಗುವ ದಿನಾಂಕವಾದ ಜುಲೈ 16ಅನ್ನು ರಜಾ ದಿನವಾಗಿ ಅದರಲ್ಲೂ ನ್ಯಾಷನಲ್ ಹಾಲಿಡೇ ಆಗಿ ಘೋಷಿಸಲು ಪ್ರಧಾನಿ ಮೋದಿಗೆ ಮನವಿ ಮಾಡಿದ್ದಾರೆ.

ಜುಲೈ 16 ಅನ್ನು ನ್ಯಾಷನಲ್ ಹಾಲಿಡೇ ಆಗಿ ಘೋಷಿಸಿ -ಪ್ರಧಾನಿ ಮೋದಿಗೆ ಯಶ್ ಅಭಿಮಾನಿಗಳ​ ಮನವಿ
‘ಜುಲೈ 16ಅನ್ನು ನ್ಯಾಷನಲ್ ಹಾಲಿಡೇ ಆಗಿ ಘೋಷಿಸಿ’
Follow us
KUSHAL V
|

Updated on:Jan 30, 2021 | 7:47 PM

ಬೆಂಗಳೂರು: ರಾಕಿಂಗ್​ ಸ್ಟಾರ್​ ಯಶ್ ಅಭಿನಯದ ಬಹುನಿರೀಕ್ಷಿತ KGF ಚಾಪ್ಟರ್​ 2 ಸಿನಿಮಾದ ಟೀಸರ್​ ಹವಾ ಸೃಷ್ಟಿಸಿದ್ದ ಬೆನ್ನಲ್ಲೇ ಚಿತ್ರದ ಬಿಡುಗಡೆ ದಿನಾಂಕದ ಬಗ್ಗೆ ಸಹ ಸಾಕಷ್ಟು ಕುತೂಹಲವಿತ್ತು. ಇದೀಗ, ಸಿನಿಮಾ ಜುಲೈ 16ರಂದು ರಿಲೀಸ್​ ಆಗ್ತಿದೆ ಎಂಬ ಮಾಹಿತಿ ಸಿಕ್ಕಿರುವ ಬೆನ್ನಲ್ಲೇ ಯಶ್​ ಅಭಿಮಾನಿಗಳ ಸಂತೋಷಕ್ಕೆ ಪಾರವೇ ಇಲ್ಲ.

ಈ ನಡುವೆ, ರಾಕಿಂಗ್​ ಸ್ಟಾರ್​ ಅವರ ಕೆಲವು ಫ್ಯಾನ್ಸ್​ ತಮ್ಮ ಬಾಸ್​ನ ಸಿನಿಮಾವನ್ನು ಬಿಡುಗಡೆಯಾದ ದಿನವೇ ನೋಡಲು ಹಾತೊರೆಯುತ್ತಿದ್ದಾರೆ. ಹಾಗಾಗಿ, ಸಿನಿಮಾ ಬಿಡುಗಡೆಯಾಗುತ್ತಿರುವ ದಿನಾಂಕವಾದ ಜುಲೈ 16 ಅನ್ನು ರಜಾ ದಿನವಾಗಿ ಅದರಲ್ಲೂ ನ್ಯಾಷನಲ್ ಹಾಲಿಡೇ ಆಗಿ ಘೋಷಿಸಲು ಪ್ರಧಾನಿ ಮೋದಿಗೆ ಮನವಿ ಮಾಡಿದ್ದಾರೆ. ಹೌದು, ಟ್ವಿಟರ್ ಮೂಲಕ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ಪ್ರಧಾನಿಗೆ ಈ ಡಿಫರೆಂಟ್​ ಬೇಡಿಕೆಯಿಟ್ಟಿದ್ದಾರೆ.

KGF Chapter 2 ಜುಲೈ 16ರಂದೇ ತೆರೆ ಕಾಣ್ತಿರೋದೇಕೆ? ಆ ದಿನಕ್ಕೇನಾದರೂ ಇದೆಯಾ ವಿಶೇಷತೆ?

Published On - 7:42 pm, Sat, 30 January 21