
ಘಟನೆ ಎಷ್ಟೇ ಗಂಭೀರವಾಗಿರಲಿ ಅಥವಾ ಎಷ್ಟೇ ಹಾಸ್ಯಾಸ್ಪದವಾಗಿರಲಿ. ಸಾಮಾಜಿಕ ಜಾಲತಾಣದಲ್ಲಿ ಮೀಮ್ಗಳಂತೂ ಹರಿದಾಡೇ ಹರಿದಾಡುತ್ತವೆ. ಬೆಂಗಳೂರಿನಲ್ಲಿ ನಡೆದ ಜೊಮ್ಯಾಟೊ ವಿವಾದ ಕೂಡ ಅಷ್ಟೇ. ಡೆಲಿವರಿ ಬಾಯ್ ಹೊಡೆದ ರಭಸಕ್ಕೆ ಹುಡುಗಿಯ ಮೂಗಲ್ಲಿ ರಕ್ತ ಸೋರುತ್ತಿತ್ತು. ಈ ಬಗ್ಗೆ ಕೆಲವರು ವಿಷಾದ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಿದ್ದಾರೆ. ಇನ್ನೂ ಕೆಲವರು ಊಟ ಕೊಡ್ರಪ್ಪಾ, ಹೊಡೀಬೇಡಿ ಎಂದು ಜೊಮ್ಯಾಟೊಗೆ ಪಾಠ ಮಾಡಿದ್ದಾರೆ.
ಬೆಂಗಳೂರಿನ ಹಿತೇಶಾ ಚಂದ್ರಾಣಿ ಎಂಬ ಯುವತಿ ಒಂಟಿಯಾಗಿ ಮನೆಯಲ್ಲಿ ನೆಲೆಸಿದ್ದು, ಹಸಿವಾದಾಗ ಮಧ್ಯಾಹ್ನ 3.30ರ ಸುಮಾರಿಗೆ ಜೊಮ್ಯಾಟೋ ಆ್ಯಪ್ ಮೂಲಕ ಊಟ ತರಿಸಿಕೊಳ್ಳಲು ಬುಕ್ ಮಾಡಿದ್ದರು. ಆ್ಯಪ್ನಲ್ಲಿ ತೋರಿಸಿದ ಸಮಯದ ಪ್ರಕಾರ ಊಟ ಮಧ್ಯಾಹ್ನ 4:30ಕ್ಕೆ ಬರಬೇಕಿತ್ತು. ಆದರೆ, ಊಟ ಬರೋದು ವಿಳಂಬವಾಗಿತ್ತು. ಈ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದಿದೆ. ನಂತರ ಡೆಲಿವರಿ ಬಾಯ್ ಮುಷ್ಠಿಯಿಂದ ಯುವತಿಯ ಮುಖಕ್ಕೆ ಬಲವಾಗಿ ಗುದ್ದಿ ಓಡಿ ಹೋಗಿದ್ದಾನೆ. ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. ಈಗ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಸಾಕಷ್ಟು ಟ್ವೀಟ್ಗಳು ಹರಿದಾಡಿವೆ.
ಈ ಬಗ್ಗೆ ರಾಜು ಎನ್ನುವ ವ್ಯಕ್ತಿ ಟ್ವೀಟ್ ಒಂದನ್ನು ಮಾಡಿದ್ದಾರೆ. ಜೊಮ್ಯಾಟೊದವರು ಮೊದಲು ನಿಮ್ಮ ಡೆಲಿವರಿ ಬಾಯ್ಗಳಿಗೆ ಮಹಿಳೆಯರಿಗೆ ಗೌರವ ನೀಡುವುದನ್ನು ಕಲಿಸಿ. ಆಹಾರ ನೀಡಿ, ಹೊಡೆತವನ್ನಲ್ಲ ಎಂದು ಬರೆದುಕೊಂಡಿದ್ದಾರೆ. ಇನ್ನೂ ಒಂದಿಷ್ಟು ಜನರು ತಮಗೆ ತೋಚಿದಂತೆ ಈ ಪ್ರಕರಣಕ್ಕೆ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ಮಹಿಳೆ ಮೇಲೆ ಹಲ್ಲೆಗೈದಿದ್ದ ಜೊಮ್ಯಾಟೊ ಫುಡ್ ಡೆಲಿವರಿ ಬಾಯ್ ಕಾಮರಾಜು ಅರೆಸ್ಟ್
ನಿಗದಿತ ಸಮಯಕ್ಕೆ ಬಾರದ ಊಟ; ಪ್ರಶ್ನಿಸಿದ್ದಕ್ಕೆ ಯುವತಿಯ ಮೂಗು ಮುರಿದ ಜೊಮ್ಯಾಟೋ ಡೆಲಿವರಿ ಬಾಯ್