AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಿಳೆ ಮೇಲೆ ಹಲ್ಲೆಗೈದಿದ್ದ ಜೊಮ್ಯಾಟೊ ಫುಡ್ ಡೆಲಿವರಿ ಬಾಯ್ ಕಾಮರಾಜು ಅರೆಸ್ಟ್​

ಹಿತೇಶಾ ಚಂದ್ರಾಣಿ ಎಂಬ ಯುವತಿ ಒಂಟಿಯಾಗಿ ಮನೆಯಲ್ಲಿ ನೆಲೆಸಿದ್ದು, ಮಧ್ಯಾಹ್ನ ಹಸಿವಾದಾಗ 3.30ರ ಸುಮಾರಿಗೆ ಜೊಮ್ಯಾಟೋ ಆ್ಯಪ್​ ಮೂಲಕ ಊಟ ತರಿಸಿಕೊಳ್ಳಲು ಬುಕ್ಕಿಂಗ್ ಮಾಡಿದ್ದಾರೆ.

ಮಹಿಳೆ ಮೇಲೆ ಹಲ್ಲೆಗೈದಿದ್ದ ಜೊಮ್ಯಾಟೊ ಫುಡ್ ಡೆಲಿವರಿ ಬಾಯ್ ಕಾಮರಾಜು ಅರೆಸ್ಟ್​
ಡೆಲಿವರಿ ಬಾಯ್​ ಕಾಮರಾಜ್​-ಯುವತಿ ಹಿತೇಶಾ ಚಂದ್ರಾಣಿ
ರಾಜೇಶ್ ದುಗ್ಗುಮನೆ
|

Updated on: Mar 10, 2021 | 7:57 PM

Share

ಬೆಂಗಳೂರು: ಆನ್​ಲೈನ್​ ಮೂಲಕ ಊಟ ಆರ್ಡರ್ ಮಾಡಿದ್ದ ಯುವತಿ ಮೇಲೆ ಹಲ್ಲೆ ಮಾಡಿದ್ದ ಜೊಮ್ಯಾಟೊ ಫುಡ್ ಡೆಲಿವರಿ ಬಾಯ್ ಕಾಮರಾಜ್​ನನ್ನು ಪೊಲೀಸರು ಬಂಧಿಸಿದ್ದಾರೆ. ನಗರದ ಎಲೆಕ್ಟ್ರಾನಿಕ್ ಸಿಟಿ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. ಜೊಮ್ಯಾಟೊ ಫುಡ್ ಡೆಲಿವರಿ ಬಾಯ್ ಕಾಮರಾಜ್​ ಎಂಬಾತ ಹಿತೇಶಾ ಚಂದ್ರಾಣಿ ಎಂಬ ಯುವತಿಯ ಮೇಲೆ ಹಲ್ಲೆ ನಡೆಸಿದ್ದ. ಇದರಿಂದ ಆಘಾತಕ್ಕೊಳಗಾಗಿರುವ ಯುವತಿ ಘಟನಾವಳಿಯ ವಿವರಗಳನ್ನು ಇಂದು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದರು. ಇದು ಭಾರೀ ಚರ್ಚೆ ಹುಟ್ಟುಹಾಕಿತ್ತು. 

ಘಟನೆಯ ಹಿನ್ನೆಲೆ ಹಿತೇಶಾ ಚಂದ್ರಾಣಿ ಎಂಬ ಯುವತಿ ಒಂಟಿಯಾಗಿ ಮನೆಯಲ್ಲಿ ನೆಲೆಸಿದ್ದು, ಮಧ್ಯಾಹ್ನ ಹಸಿವಾದಾಗ 3.30ರ ಸುಮಾರಿಗೆ ಜೊಮ್ಯಾಟೋ ಆ್ಯಪ್​ ಮೂಲಕ ಊಟ ತರಿಸಿಕೊಳ್ಳಲು ಬುಕ್ಕಿಂಗ್ ಮಾಡಿದ್ದಾರೆ. ಆ್ಯಪ್​ ಲೆಕ್ಕಾಚಾರದ ಪ್ರಕಾರ 4.30ರ ಒಳಗಾಗಿ ಊಟ ತಲುಪಬೇಕಿತ್ತು. ಆದರೆ, ನಿಗದಿತ ಸಮಯಕ್ಕೆ ಆಹಾರ ಬಾರದಿದ್ದಾಗ ಯುವತಿ ಗ್ರಾಹಕ ಸೇವಾ ಕೇಂದ್ರದ ಸಿಬ್ಬಂದಿಗೆ ಕರೆ ಮಾಡಿ ಸಮಸ್ಯೆಯ ಬಗ್ಗೆ ಹೇಳಿಕೊಂಡು, ತಡವಾಗುತ್ತಿರುವ ಕಾರಣ ಆರ್ಡರ್ ಕ್ಯಾನ್ಸಲ್ ಮಾಡಬಹುದಾ ಎಂದು ಕೇಳಿದ್ದಾರೆ. ಇದೆಲ್ಲಾ ಆಗುವಾಗ ಡೆಲಿವರಿ ಬಾಯ್ ಮನೆಗೆ ಆಗಮಿಸಿದ್ದಾನೆ. ಮೊದಲೇ ತಡವಾಗಿದ್ದ ಕಾರಣ ಅಸಮಾಧಾನಗೊಂಡ ಯುವತಿ, ಜೊಮ್ಯಾಟೋ ಟೀಂ ಜೊತೆ ಮಾತಾಡಿದ್ದೇನೆ. ಈಗ ನನಗೆ ಯಾವುದೇ ಖರ್ಚಿಲ್ಲದೇ ಊಟ ಕೊಡ್ತೀರಾ? ನಿಮ್ಮ ಕಡೆಯವರಿಂದ ಉತ್ತರ ಬರುವ ತನಕ ಕಾದು ನಿಲ್ಲಲು ಸೂಚಿಸಿದ್ದಾರೆ. ಆದರೆ, ಯುವತಿ ಹೇಳುವ ಪ್ರಕಾರ ಮೊದಲೇ ಸಿಡಿಮಿಡಿ ಎನ್ನುತ್ತಿದ್ದ ಡೆಲಿವರಿ ಬಾಯ್, ಕಾಯಲು ಹೇಳಿದಾಕ್ಷಣ ಬಾಯಿಗೆ ಬಂದಂತೆ ಮಾತನಾಡಿ ನಾನೇನು ನಿಮ್ಮ ಆಳಾ? ಎಂದು ಕೂಗಾಡಿದ್ದಾನೆ. ಭಯಗೊಂಡ ಯುವತಿ ಬಾಗಿಲು ಹಾಕಿಕೊಳ್ಳಲು ಮುಂದಾದಾಗ ಜೋರಾಗಿ ಬಾಗಿಲು ತಳ್ಳಿದಾತ ಸೀದಾ ಒಳನುಗ್ಗಿ ಟೇಬಲ್ಲಿನ ಮೇಲಿಟ್ಟಿದ್ದ ಪೊಟ್ಟಣವನ್ನು ಕಿತ್ತುಕೊಂಡಿದ್ದಲ್ಲದೇ, ಮುಷ್ಠಿಯಿಂದ ಯುವತಿಯ ಮುಖಕ್ಕೆ ಬಲವಾಗಿ ಗುದ್ದಿ ಓಡಿ ಹೋಗಿದ್ದಾನೆ.

ಡೆಲಿವರಿ ಬಾಯ್​ನಿಂದ ಹಲ್ಲೆಗೊಳಗಾದ ಯುವತಿಯ ಮೂಗಿನಿಂದ ರಕ್ತ ಸುರಿಯಲಾರಂಭಿಸಿದ್ದು, ಕಂಗಾಲಾಗಿ ಘಟನೆಯ ಬಗ್ಗೆ ವಿಡಿಯೋ ಮಾಡಿದ್ದಾರೆ. ನಂತರ ಆಸ್ಪತ್ರೆಗೂ ತೆರಳಿದ ಯುವತಿ ಚಿಕಿತ್ಸೆ ಪಡೆದಿದ್ದಾರೆ. ಯುವತಿ ವಿಡಿಯೋದಲ್ಲಿ ತಿಳಿಸಿರುವಂತೆ ಮೂಗಿನ ಮೂಳೆಗೆ ಬಲವಾದ ಹೊಡೆತ ಬಿದ್ದಿರುವ ಕಾರಣ ಅದರಲ್ಲಿ ಬಿರುಕು ಮೂಡಿದ್ದು, ಸರ್ಜರಿ ಮಾಡಿಸಿಕೊಳ್ಳಬೇಕಾಗಿದೆ. ಸದ್ಯ ಈ ಕುರಿತು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಯುವತಿಗೆ ನ್ಯಾಯ ಕೊಡಿಸುವ ಧೈರ್ಯದ ಮಾತುಗಳನ್ನಾಡಿದ್ದಾರೆ. ಯುವತಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರು ಆಕೆಗೆ ಬೆಂಬಲ ಸೂಚಿಸಿದ್ದಾರೆ.

ಇದನ್ನೂ ಓದಿ: ನಿಗದಿತ ಸಮಯಕ್ಕೆ ಬಾರದ ಊಟ; ಪ್ರಶ್ನಿಸಿದ್ದಕ್ಕೆ ಯುವತಿಯ ಮೂಗು ಮುರಿದ ಜೊಮ್ಯಾಟೋ ಡೆಲಿವರಿ ಬಾಯ್​

Follow Us
ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’ ನಟಿ ಹೇಳಿದ್ದೇನು
ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’ ನಟಿ ಹೇಳಿದ್ದೇನು
‘ರಾಮಾಯಣ’ದಲ್ಲಿ ಯಶ್ ಲುಕ್, ಚಿತ್ರ ಸಾಹಿತಿ ಪ್ರಹ್ಲಾದ್ ವಿಶ್ಲೇಷಣೆ
‘ರಾಮಾಯಣ’ದಲ್ಲಿ ಯಶ್ ಲುಕ್, ಚಿತ್ರ ಸಾಹಿತಿ ಪ್ರಹ್ಲಾದ್ ವಿಶ್ಲೇಷಣೆ
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ
ಕರ್ನಾಟಕ ಬಂದ್​ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್
ಕರ್ನಾಟಕ ಬಂದ್​ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್
ಧಾರಾಕಾರ ಮಳೆಗೆ ನಲುಗಿದ ಮಲೆನಾಡು: ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ
ಧಾರಾಕಾರ ಮಳೆಗೆ ನಲುಗಿದ ಮಲೆನಾಡು: ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ
ಉದ್ಯೋಗದ ಕನಸು: ಅಮ್ಮನ ಜತೆ ಪರೀಕ್ಷೆಗೆ ಬಂದ ಕಂದನಿಗೆ ಲಾಲಿ ಹಾಡಿದ ಪೊಲೀಸ್ರು
ಉದ್ಯೋಗದ ಕನಸು: ಅಮ್ಮನ ಜತೆ ಪರೀಕ್ಷೆಗೆ ಬಂದ ಕಂದನಿಗೆ ಲಾಲಿ ಹಾಡಿದ ಪೊಲೀಸ್ರು
ಕಾವೇರಿ ವಿವಾದ: ಊರ್ವಶಿ ಚಿತ್ರಮಂದಿರದಲ್ಲಿ ‘ಜನ ನಾಯಗನ್’ ಬದಲಿಗೆ ‘ಕರಾವಳಿ’
ಕಾವೇರಿ ವಿವಾದ: ಊರ್ವಶಿ ಚಿತ್ರಮಂದಿರದಲ್ಲಿ ‘ಜನ ನಾಯಗನ್’ ಬದಲಿಗೆ ‘ಕರಾವಳಿ’
ನಶಾ ಮುಕ್ತ ಭಾರತ ಅಭಿಯಾನ, ಪ್ರಧಾನಿ ಮೋದಿ ಏನಂದ್ರು ನೋಡಿ
ನಶಾ ಮುಕ್ತ ಭಾರತ ಅಭಿಯಾನ, ಪ್ರಧಾನಿ ಮೋದಿ ಏನಂದ್ರು ನೋಡಿ
ಕಬಿನಿ ಜಲಾಶಯ ಸಂಪೂರ್ಣ ಭರ್ತಿ
ಕಬಿನಿ ಜಲಾಶಯ ಸಂಪೂರ್ಣ ಭರ್ತಿ