
ಸೊಳ್ಳೆ (mosquitoes), ಕೀಟಗಳ ಕಾಟ ಪ್ರತಿ ಮನೆಯಲ್ಲೂ ಇದ್ದಿದ್ದೆ. ಇವುಗಳ ಕಚ್ಚಿ ಕಿರಿಕಿರಿಯನ್ನು ಉಂಟು ಮಾಡುವುದರ ಜೊತೆಗೆ ರಾತ್ರಿ ನಿದ್ರೆಗೂ ಭಂಗ ತರುತ್ತವೆ. ಹಾಗಾಗಿ ಇವುಗಳ ಕಾಟದಿಂದ ಮುಕ್ತಿ ಪಡೆಯಲು ರಾಸಾಯನಿಕಯುಕ್ತ ಸ್ಪ್ರೇ, ಸೊಳ್ಳೆ ಕಾಯಿಲ್‌ಗಳನ್ನು ಹೆಚ್ಚಿನವರು ಬಳಕೆ ಮಾಡುತ್ತಾರೆ. ಇವುಗಳ ಬಳಕೆಯಿಂದ ಶಾಶ್ವತವಾಗಿ ಸೊಳ್ಳೆಗಳ ಕಾಟದಿಂದ ಮುಕ್ತಿ ಪಡೆಯಲು ಸಾಧ್ಯವಿಲ್ಲ ಜೊತೆಗೆ ನಮ್ಮ ಆರೋಗ್ಯದ ದೃಷ್ಟಿಯಿಂದ ಇವುಗಳ ಬಳಕೆ ಅಷ್ಟು ಸೂಕ್ತವಲ್ಲ. ಹೀಗಿರುವಾಗ ಸೊಳ್ಳೆ, ಕೀಟಗಳ ಹಾವಳಿಯಿಂದ ಶಾಶ್ವತ ಪರಿಹಾರವನ್ನು ಪಡೆಯಲು ಆಲಂ ಕಲ್ಲು (ಪಟಿಕ) ಮತ್ತು ನಿಂಬೆರಸವನ್ನು ನೆಲ ಒರೆಸುವ ನೀರಿಗೆ ಸೇರಿಸಿ. ಈ ಎರಡು ವಸ್ತುಗಳನ್ನು ನೆಲ ಒರೆಸುವ ನೀರಿಗೆ ಸೇರಿಸಿ ಮನೆಯನ್ನು ಕ್ಲೀನ್ ಮಾಡುವುದರಿಂದ ಸೊಳ್ಳೆ, ಕೀಟಗಳು ಎಂದಿಗೂ ಮನೆಯನ್ನು ಪ್ರವೇಶಿಸುವುದಿಲ್ಲ.
ನಿಂಬೆ ರಸ ಮತ್ತು ಪಟಿಕ ಎರಡೂ ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರನಾಶಕ ಗುಣಗಳನ್ನು ಹೊಂದಿದ್ದು, ಇವು ಬ್ಯಾಕ್ಟೀರಿಯಾ, ಸೂಕ್ಷ್ಮಜೀವಿಗಳು, ಸೊಳ್ಳೆಗಳು ಮತ್ತು ನೊಣಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ನಿಂಬೆಯ ರಿಫ್ರೆಶ್ ಆಮ್ಲೀಯ ಗುಣಗಳು ಸೊಳ್ಳೆಗಳು ಮತ್ತು ನೋಣಗಳನ್ನು ಮನೆಯಿಂದ ದೂರವಿಡುವಲ್ಲಿ ಪರಿಣಾಮಕಾರಿಯಾಗಿದೆ. ಆದರೆ ಪಟಿಕದ ಕೀಟನಾಶಕ ಗುಣಗಳು ಅವುಗಳನ್ನು ಮನೆಯಿಂದ ಹೊರಗಿಡಲು ಸಹಾಯ ಮಾಡುತ್ತದೆ. ಈ ಎರಡೂ ವಸ್ತುಗಳನ್ನು ನೆಲ ಒರೆಸುವ ನೀರಿಗೆ ಸೇರಿಸಿ ಮನೆ ಕ್ಲೀನ್ ಮಾಡುವುದರಿಂದ ಸೊಳ್ಳೆ, ಕೀಟಗಳ ಕಾಟದಿಂದ ಮುಕ್ತಿ ಪಡೆಯಬಹುದು.
ಇದನ್ನೂ ಓದಿ: ಮನೆಯಲ್ಲಿ ಲಭ್ಯವಿರುವ ಈ ವಸ್ತುಗಳನ್ನು ಬಳಸಿ ನಿಮಿಷಗಳಲ್ಲಿ ಗ್ಯಾಸ್ ಸ್ಟೌವ್ ಕ್ಲೀನ್ ಮಾಡಬಹುದು
ಈ ಮನೆಮದ್ದು ಸೊಳ್ಳೆಗಳ ಕಾಟದಿಂದ ಮುಕ್ತಿ ನೀಡುವುದು ಮಾತ್ರವಲ್ಲ, ನೊಣಗಳು ಮತ್ತು ಸಣ್ಣ ಕೀಟಗಳನ್ನು ಸಹ ಕಡಿಮೆ ಮಾಡುತ್ತದೆ. ಮನೆಗೆ ತಾಜಾ ಮತ್ತು ಸ್ವಚ್ಛವಾದ ಸುವಾಸನೆಯನ್ನು ನೀಡುತ್ತದೆ. ಸೊಳ್ಳೆ ನಿವಾರಕ ಸ್ಪ್ರೇಗಳನ್ನು ಪದೇ ಪದೇ ಬಳಸಿ, ಯಾವುದೇ ರಿಸಲ್ಟ್ ಸಿಕ್ಕಿಲ್ಲ ಎಂದಾದ್ರೆ, ಸೊಳ್ಳೆಗಳನ್ನು ಓಡಿಸಲು ಒಮ್ಮೆ ಈ ಮನೆಮದ್ದನ್ನು ಟ್ರೈ ಮಾಡಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ