AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೊಮೆಟೊ ಫ್ರಿಡ್ಜ್ ನಲ್ಲಿಟ್ಟರೆ ಏನಾಗುತ್ತೆ ಗೊತ್ತಾ? ಈ ವಿಷಯ ತಿಳಿದ್ರೆ ನಿಜವಾಗಲೂ ಶಾಕ್ ಆಗುತ್ತೆ!

ಟೊಮೆಟೊ ಇಲ್ಲದೆ ಯಾವುದೇ ಅಡುಗೆಯಾಗಲಿ ಅದು ಪೂರ್ಣವಾಗುವುದಿಲ್ಲ. ಚಟ್ನಿಯಿಂದ ಸಾಂಬಾರ್ ವರೆಗೆ, ಪ್ರತಿಯೊಂದು ಖಾದ್ಯಕ್ಕೂ ಟೊಮೆಟೊ ಬೇಕಾಗುತ್ತದೆ. ಆದರೆ, ಮಾರುಕಟ್ಟೆಯಿಂದ ಖರೀದಿಸಿ ತಂದ ಟೊಮೆಟೊಗಳನ್ನು ನೇರವಾಗಿ ಫ್ರಿಡ್ಜ್‌ನಲ್ಲಿ ಇಡುತ್ತೇವೆ. ಇದು ನಮಗೆ ತಿಳಿಯದಂತೆ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹೌದು, ಈ ರೀತಿಯ ಅಭ್ಯಾಸ ಅನಾರೋಗ್ಯವನ್ನು ನಾವಾಗಿಯೇ ಕರೆದುಕೊಂಡು ಬಂದ ಹಾಗೆ ಆಗಬಹುದು. ಈ ವಿಷಯ ಕೆಲವರಿಗೆ ತಿಳಿದಿರುವುದಿಲ್ಲ. ಹಾಗಾದರೆ ಟೊಮೆಟೊಗಳು ಹಾಳಾಗದಂತೆ ಸರಿಯಾಗಿ ಸಂಗ್ರಹಿಸುವುದು ಹೇಗೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಟೊಮೆಟೊ ಫ್ರಿಡ್ಜ್ ನಲ್ಲಿಟ್ಟರೆ ಏನಾಗುತ್ತೆ ಗೊತ್ತಾ? ಈ ವಿಷಯ ತಿಳಿದ್ರೆ ನಿಜವಾಗಲೂ ಶಾಕ್ ಆಗುತ್ತೆ!
Storing Tomatoes Right Health Tips
ಪ್ರೀತಿ ಭಟ್​, ಗುಣವಂತೆ
|

Updated on: Jan 09, 2026 | 8:46 PM

Share

ಟೊಮೆಟೊ (Tomatoes) ಇಲ್ಲದೆ ಅಡುಗೆ ಮಾಡುವುದು ಅಷ್ಟು ಸುಲಭವಲ್ಲ. ಚಟ್ನಿಯಿಂದ ಸಾಂಬಾರ್ ವರೆಗೆ, ಪ್ರತಿಯೊಂದು ಖಾದ್ಯಕ್ಕೂ ಟೊಮೆಟೊ ಬೇಕಾಗುತ್ತದೆ. ಆದರೆ, ನಾವು ಮಾರುಕಟ್ಟೆಯಿಂದ ಖರೀದಿಸುವ ಟೊಮೆಟೊಗಳನ್ನು ನೇರವಾಗಿ ತಂದು ಫ್ರಿಡ್ಜ್‌ನಲ್ಲಿ ಇಡುತ್ತೇವೆ. ಈ ರೀತಿ ರೆಫ್ರಿಜರೇಟರ್‌ನಲ್ಲಿ ಟೊಮೆಟೊಗಳನ್ನು ಸಂಗ್ರಹಿಸುವುದರಿಂದ ಅವುಗಳ ರುಚಿ ಬದಲಾಗುವುದಲ್ಲದೆ ಆರೋಗ್ಯಕ್ಕೂ ಹಾನಿಕಾರಕವಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಹಾಗಾದರೆ ಟೊಮೆಟೊಗಳು ಹಾಳಾಗದಂತೆ ಸರಿಯಾಗಿ ಸಂಗ್ರಹಿಸುವುದು ಹೇಗೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಚೆನ್ನಾಗಿ ಮಾಗಿದ ಟೊಮೆಟೊಗಳನ್ನು ಫ್ರಿಡ್ಜ್‌ನಲ್ಲಿ ಇಡಬಹುದು, ಆದರೆ ಆರೋಗ್ಯ ತಜ್ಞರು ಹೇಳುವ ಪ್ರಕಾರ, ಐದು ದಿನಗಳಿಗಿಂತ ಹೆಚ್ಚು ಕಾಲ ಇಡಬಾರದು. ಅತ್ಯಂತ ತಂಪಾದ ತಾಪಮಾನ ಟೊಮೆಟೊಗಳಲ್ಲಿನ ಜೀವಕೋಶ ರಚನೆಯನ್ನು ಹಾನಿಗೊಳಿಸುತ್ತದೆ, ಇದು ಅವುಗಳ ಗುಣಮಟ್ಟವನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಅವುಗಳನ್ನು ಎರಡು ಅಥವಾ ಮೂರು ದಿನಗಳಲ್ಲಿ ಬಳಸುವುದಾದರೆ ಫ್ರಿಡ್ಜ್‌ನಲ್ಲಿ ಇಡಬಹುದು ಇಲ್ಲವಾದಲ್ಲಿ ಅದನ್ನು ಹೊರಗೆ ಇಡುವುದು ಉತ್ತಮ. ಈ ರೀತಿ ಮಾಡುವುದರಿಂದ ನೀವು ಟೊಮೆಟೊಗಳಿಂದ ಸಿಗುವ ಸಂಪೂರ್ಣ ಪ್ರಯೋಜನಗಳನ್ನು ಪಡೆಯಬಹುದು.

ಇದನ್ನೂ ಓದಿ: ಕಿತ್ತಳೆಯ ಏಳು ಪಟ್ಟು ಪ್ರಯೋಜನ 100 ಗ್ರಾಂ ನುಗ್ಗೆ ಸೊಪ್ಪಿನಲ್ಲಿದೆ ಎಂದ್ರೆ ನಂಬುತ್ತೀರಾ?

ಟೊಮೆಟೊಗಳನ್ನು ಒಂದು ವಾರಕ್ಕಿಂತ ಹೆಚ್ಚು ಫ್ರಿಡ್ಜ್‌ನಲ್ಲಿ ಇಟ್ಟರೆ ಏನಾಗುತ್ತೆ?

ಸಾಮಾನ್ಯವಾಗಿ ಟೊಮೆಟೊಗಳನ್ನು ಒಂದು ವಾರಕ್ಕಿಂತ ಹೆಚ್ಚು ಕಾಲ ಫ್ರಿಡ್ಜ್‌ನಲ್ಲಿ ಇಟ್ಟರೆ, ಅವು ಹೊರಗೆ ಚೆನ್ನಾಗಿ ಕಾಣಿಸಬಹುದು ಆದರೆ ಒಳಗಿನಿಂದ ಕೊಳೆಯಲು ಪ್ರಾರಂಭಿಸಬಹುದು. ಅಡುಗೆಯಲ್ಲಿ ಅಂತಹ ಟೊಮೆಟೊಗಳನ್ನು ಬಳಸುವುದರಿಂದ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ರೆಫ್ರಿಜರೇಟರ್‌ನಲ್ಲಿನ ಹೆಚ್ಚುವರಿ ತೇವಾಂಶವು ನಮಗೆ ಅರಿವಿಲ್ಲದೆಯೇ ಟೊಮೆಟೊಗಳು ಹಾಳಾಗಲು ಕಾರಣವಾಗಬಹುದು. ಅಂತಹ ಟೊಮೆಟೊಗಳನ್ನು ತಿನ್ನುವುದು ಅನಾರೋಗ್ಯ, ವಾಂತಿ, ಅತಿಸಾರಕ್ಕೆ ಕಾರಣವಾಗಬಹುದು ಮತ್ತು ದುರ್ಬಲ ರೋಗನಿರೋಧಕ ಶಕ್ತಿ ಮತ್ತು ಸೋಂಕುಗಳ ಅಪಾಯವನ್ನು ಹೆಚ್ಚಿಸಬಹುದು. ಟೊಮೆಟೊಗಳನ್ನು ತಾಜಾವಾಗಿಡಲು ಬಯಸಿದರೆ, ಖರೀದಿಸಿದ ತಕ್ಷಣ ಅವುಗಳನ್ನು ಬಳಸಲು ಪ್ರಯತ್ನಿಸಿ. ಫ್ರಿಜ್‌ನಲ್ಲಿ ಸಂಗ್ರಹಿಸಿದರೂ ಸಹ, ತರಕಾರಿಗಳಿಗಾಗಿ ಗೊತ್ತುಪಡಿಸಿದ ಡ್ರಾಯರ್‌ನಲ್ಲಿ ಇರಿಸಿ. ಒಳಗೆ ಕಪ್ಪು ಕಲೆಗಳು ಅಥವಾ ಕೆಟ್ಟ ವಾಸನೆ ಇರುವ ಟೊಮೆಟೊಗಳನ್ನು ಬಳಸಬೇಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ