ಕಿತ್ತಳೆಯ ಏಳು ಪಟ್ಟು ಪ್ರಯೋಜನ 100 ಗ್ರಾಂ ನುಗ್ಗೆ ಸೊಪ್ಪಿನಲ್ಲಿದೆ ಎಂದ್ರೆ ನಂಬುತ್ತೀರಾ?
ನುಗ್ಗೆ ಸೊಪ್ಪು ಪೋಷಕಾಂಶಗಳಿಂದ ಸಮೃದ್ಧವಾಗಿರುವ ಗಣಿ ಎಂದರೆ ತಪ್ಪಾಗಲಾರದು. ಇದರಲ್ಲಿ ಹಲವಾರು ರೀತಿಯ ಔಷಧೀಯ ಗುಣಗಳಿದ್ದು ಆರೋಗ್ಯ ಕಾಪಾಡಿಕೊಳ್ಳಲು ಪ್ರಯೋಜನಕಾರಿಯಾಗಿದೆ. ಅದಕ್ಕಾಗಿಯೇ ಅವುಗಳನ್ನು ನಿಯಮಿತವಾಗಿ ಸೇವಿಸುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಬಹುತೇಕ ಎಲ್ಲಾ ಋತುಗಳಲ್ಲಿ ಲಭ್ಯವಿರುವ ನುಗ್ಗೆ ಸೊಪ್ಪು ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಜೀವಸತ್ವ, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಹಾಗಾದರೆ ಇದರ ಸೇವನೆಯಿಂದ ಯಾವ ರೀತಿಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು? ಯಾವ ಸಮಸ್ಯೆಗೆ ರಾಮಬಾಣ ಎಂಬುದನ್ನು ತಿಳಿದುಕೊಳ್ಳಿ.

ನುಗ್ಗೆ ಸೊಪ್ಪು (ಮೊರಿಂಗ) ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಎಂಬುದು ನಿಮಗೆ ತಿಳಿದಿರಬಹುದು. ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ಈ ಎಲೆಗಳನ್ನು ನಿಯಮಿತವಾಗಿ ಸೇವನೆ ಮಾಡುವುದು ಬಹಳ ಒಳ್ಳೆಯದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಬಹುತೇಕ ಎಲ್ಲಾ ಋತುಗಳಲ್ಲಿ ಲಭ್ಯವಿರುವ ನುಗ್ಗೆಕಾಯಿ ಮತ್ತು ಅವುಗಳ ಸೊಪ್ಪು ಆರೋಗ್ಯಕ್ಕೆ ಅಗತ್ಯವಿರುವಂತಹ ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ನೀಡುತ್ತದೆ. ಸೂಪ್‌ಗಳಿಂದ ಹಿಡಿದು ಸಾಂಬಾರ್, ಪಲ್ಯ ಹೀಗೆ ನಾನಾ ರೀತಿಯ ಭಕ್ಷ್ಯಗಳಲ್ಲಿ ಉಪಯೋಗ ಮಾಡಬಹುದಾಗಿದೆ. ಆಯುರ್ವೇದದ ಪ್ರಕಾರ, ನುಗ್ಗೆ ಸೊಪ್ಪಿನ (Moringa Leaves) ಸೇವನೆಯಿಂದ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಬಹುದು. ಹಾಗಾದರೆ ಇದರ ಸೇವನೆಯಿಂದ ಯಾವ ರೀತಿಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು? ಯಾವ ಸಮಸ್ಯೆಗೆ ರಾಮಬಾಣ ಎಂಬುದನ್ನು ತಿಳಿದುಕೊಳ್ಳಿ.
ನುಗ್ಗೆ ಸೊಪ್ಪಿನ ಆರೋಗ್ಯ ಪ್ರಯೋಜನ:
- ನುಗ್ಗೆ ಸೊಪ್ಪು ಪೋಷಕಾಂಶಗಳ ಶಕ್ತಿ ಕೇಂದ್ರ. ಕೇವಲ 100 ಗ್ರಾಂ ಸೊಪ್ಪಿನಲ್ಲಿ ಕಿತ್ತಳೆಗಿಂತ ಏಳು ಪಟ್ಟು ಹೆಚ್ಚು ವಿಟಮಿನ್ ಸಿ ಅಂಶವಿದ್ದು ಮೆಗ್ನೀಸಿಯಮ್, ವಿಟಮಿನ್ ಕೆ ಮತ್ತು ಇ ಗಳಿಂದಲೂ ಸಮೃದ್ಧವಾಗಿವೆ.
- ಟೈಫಾಯಿಡ್ ಜ್ವರದಿಂದ ಬಳಲುತ್ತಿರುವವರು ನುಗ್ಗೆ ಸೊಪ್ಪಿನ ಜೊತೆಗೆ ಅವುಗಳ ಬೇರುಗಳನ್ನು ನೀರಿನಲ್ಲಿ ಕುದಿಸಿ ಕುಡಿಯುವುದರಿಂದ ಜ್ವರ ಬೇಗನೆ ಕಡಿಮೆಯಾಗುತ್ತದೆ.
- ತೀವ್ರ ತಲೆನೋವು ಇದ್ದಲ್ಲಿ ನುಗ್ಗೆ ಸೊಪ್ಪಿನ ಎಲೆಗಳನ್ನು ಪುಡಿಮಾಡಿ ತಲೆಗೆ ಹಚ್ಚುವುದರಿಂದ ನೋವು ಕ್ರಮೇಣ ಕಡಿಮೆಯಾಗುತ್ತದೆ.
- ನುಗ್ಗೆ ಮರದ ಬೇರುಗಳು ಕೂಡ ಆರೋಗ್ಯಕ್ಕೆ ಪ್ರಯೋಜನಕಾರಿ. ಗಂಟಲು ನೋವು ಇದ್ದರೆ, ಅದರ ಕಾಂಡಗಳಿಂದ ಕಷಾಯ ಮಾಡಿ ಬಾಯಿ ಮುಕ್ಕಳಿಸುವುದರಿಂದ ನೋವು ಶಮನವಾಗುತ್ತದೆ.
- ನುಗ್ಗೆ ಸೊಪ್ಪನ್ನು ನೆನೆಸಿ ಅಥವಾ ಅದನ್ನು ಕುದಿಸಿ ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು.
- ದೈಹಿಕ ದೌರ್ಬಲ್ಯ ಅಥವಾ ಆಯಾಸದಿಂದ ಬಳಲುತ್ತಿದ್ದರೆ, ಹೂವು ಮತ್ತು ನುಗ್ಗೆ ಸೊಪ್ಪನ್ನು ನೀರಿನಲ್ಲಿ ಕುದಿಸಿ ಕುಡಿಯಬಹುದು. ಇದು ಸಂಧಿವಾತ ನೋವಿನಿಂದ ಪರಿಹಾರ ನೀಡುತ್ತದೆ.
- ನುಗ್ಗೆ ಸೊಪ್ಪು ಯಕೃತ್ತಿನ ಆಂತರಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ. ಆದರೆ ಇದನ್ನು ಸೇವನೆ ಮಾಡುವ ಮೊದಲು ವೈದ್ಯರನ್ನು ಸಂಪರ್ಕಿಸಿ ಆ ಬಳಿಕ ಸೇವನೆ ಮಾಡುವುದು ಬಹಳ ಒಳ್ಳೆಯದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




