ಅತಿಯಾಗಿ ಸ್ವೀಟ್ ತಿನ್ನುವ ಬಯಕೆಯನ್ನು ನಿಯಂತ್ರಿಸಲು ಇಲ್ಲಿದೆ ಸಿಂಪಲ್ ಐಡಿಯಾ
ಸಾಮಾನ್ಯವಾಗಿ ಚಳಿಗಾಲದಲ್ಲಿ ಜನರ ಆಹಾರ ಪದ್ಧತಿ ಬದಲಾಗುತ್ತದೆ. ಸಿಹಿತಿಂಡಿ ಅಥವಾ ವಿವಿಧ ಭಕ್ಷ್ಯಗಳಿಗೆ ಮನಸ್ಸು ವಾಲುತ್ತದೆ. ಅದರಲ್ಲಿಯೂ ಸ್ವೀಟ್ ಸೇರಿದಂತೆ ಕರಿದ ತಿನಿಸುಗಳ ಸವಿಯುವ ಒಲವು ಹೆಚ್ಚಾಗುತ್ತದೆ. ಎಲ್ಲರಂತೆ ಮಧುಮೇಹ ರೋಗಿಗಳು ಸಹ ಸಿಹಿತಿನ್ನಲು ಬಯಸುತ್ತಾರೆ. ಹಾಗಾಗಿ ಇಂತಹ ಸಂದರ್ಭಗಳಲ್ಲಿ, ಆಹಾರ ಕ್ರಮದಲ್ಲಿ ಯಾವ ರೀತಿ ಬದಲಾವಣೆ ಮಾಡಿಕೊಳ್ಳುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬಹುದು ಎಂಬುದನ್ನು ಪ್ರತಿಯೊಬ್ಬರೂ ತಿಳಿದುಕೊಂಡಿರಬೇಕಾಗುತ್ತದೆ. ಹಾಗಾದರೆ ಸ್ವೀಟ್ ತಿನ್ನಬೇಕು ಎನಿಸಿದಾಗ ಏನು ಮಾಡಬೇಕು, ಈ ರೀತಿ ಬಯಕೆಯನ್ನು ತಡೆಯುವುದು ಹೇಗೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಸಾಮಾನ್ಯವಾಗಿ ಚಳಿಗಾಲದಲ್ಲಿ ಜನರ ಆಹಾರ ಪದ್ಧತಿ ಕೊಂಚ ಬದಲಾಗುತ್ತದೆ. ಸಿಹಿತಿಂಡಿ ಅಥವಾ ವಿವಿಧ ಭಕ್ಷ್ಯಗಳಿಗೆ ಮನಸ್ಸು ವಾಲುತ್ತದೆ. ಅದರಲ್ಲಿಯೂ ಸ್ವೀಟ್ ಸೇರಿದಂತೆ ಕರಿದ ತಿನಿಸುಗಳ ಸವಿಯುವ ಒಲವು ಹೆಚ್ಚಾಗುತ್ತದೆ. ಇದು ಮಧುಮೇಹೀಗಳಿಗೂ (Diabetes) ಹೊರತಾಗಿಲ್ಲ. ಸಿಹಿ ತಿನ್ನಬೇಕು ಎಂಬ ಹಂಬಲ ಎಲ್ಲರಿಗಿಂತ ಅವರಿಗೆ ಹೆಚ್ಚಾಗುತ್ತದೆ. ಆದರೆ ಅವುಗಳನ್ನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಇಂತಹ ಸಂದರ್ಭಗಳಲ್ಲಿ, ಆಹಾರ ಕ್ರಮದಲ್ಲಿ ಯಾವ ರೀತಿ ಬದಲಾವಣೆ ಮಾಡಿಕೊಳ್ಳುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬಹುದು ಎಂಬುದನ್ನು ಪ್ರತಿಯೊಬ್ಬರೂ ತಿಳಿದುಕೊಂಡಿರಬೇಕಾಗುತ್ತದೆ. ಇದರಿಂದ ಸಿಹಿ ತಿನ್ನುವ ಬಯಕೆ ಕಡಿಮೆಯಾಗುತ್ತವೆ ಮತ್ತು ಸಕ್ಕರೆ ಮಟ್ಟ ನಿಯಂತ್ರಣದಲ್ಲಿರುತ್ತವೆ. ಹಾಗಾದರೆ ಸ್ವೀಟ್ ತಿನ್ನಬೇಕು ಎನಿಸಿದಾಗ ಏನು ಮಾಡಬೇಕು, ಈ ರೀತಿ ಬಯಕೆಯನ್ನು ತಡೆಯುವುದು ಹೇಗೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಚಳಿಗಾಲದಲ್ಲಿ, ದೇಹವು ಕಾರ್ಬೋಹೈಡ್ರೇಟ್- ಭರಿತ ಆಹಾರಗಳನ್ನು ಬಯಸುತ್ತದೆ. ಪರಿಣಾಮವಾಗಿ, ಜನ ಸಿಹಿತಿಂಡಿಗಳಿಗಾಗಿ ಹಂಬಲಿಸುತ್ತಾರೆ. ಆದರೆ ಮಧುಮೇಹ ರೋಗಿಗಳಿಗೆ, ಸಿಹಿ ಆಹಾರಗಳು ಇದ್ದಕ್ಕಿದ್ದಂತೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಬಹುದು. ಇದು ಹೃದಯ ಸಂಬಂಧಿ ಕಾಯಿಲೆ ಮತ್ತು ಮೂತ್ರಪಿಂಡದ ಹಾನಿಯ ಜೊತೆಗೆ ಸಕ್ಕರೆ ಮಟ್ಟವನ್ನು ಹೆಚ್ಚಿಸಬಹುದು. ಹಾಗಾಗಿ, ಚಳಿಗಾಲದಲ್ಲಿ, ಮಧುಮೇಹ ರೋಗಿಗಳು ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ತಮ್ಮ ಆಹಾರಕ್ರಮದ ಬಗ್ಗೆ ಹೆಚ್ಚುವರಿ ಗಮನ ಹರಿಸಬೇಕಾಗುತ್ತದೆ.
ಸಿಹಿತಿಂಡಿ ತಿನ್ನಬೇಕೆಂಬ ಹಂಬಲವನ್ನು ನಿಯಂತ್ರಿಸುವುದು ಹೇಗೆ?
ನಿಮಗೆ ಮಧುಮೇಹವಿದ್ದು ಸಿಹಿ ತಿನ್ನುವ ಹಂಬಲವಿದ್ದರೆ, ನಿಮ್ಮ ವೈದ್ಯರ ಸಲಹೆಯೊಂದಿಗೆ ನೀವು ಸ್ವಲ್ಪ ಬೆಲ್ಲವನ್ನು ಸೇವಿಸಬಹುದು. ಇದಲ್ಲದೆ, ಸೇಬು, ಪೇರಳೆ ಮತ್ತು ಕಡಿಮೆ ಗ್ಲೈಸೆಮಿಕ್ ಹಣ್ಣುಗಳನ್ನು ಸೇವಿಸಬಹುದು. ಜೊತೆಗೆ ದಿನಕ್ಕೆ ಒಂದು ಖರ್ಜೂರವನ್ನು ಸಹ ಸೇವನೆ ಮಾಡಬಹುದು. ಇಂತಹ ಆಹಾರಗಳ ಜೊತೆಗೆ, ಪ್ರೋಟೀನ್ ಅಂಶವಿರುವ ಆಹಾರಗಳನ್ನು ಸೇವನೆ ಮಾಡಲು ಮರೆಯದಿರಿ. ಬೇಳೆ, ಕಡಲೆ ಮತ್ತು ಸಲಾಡ್‌ಗಳನ್ನು ಹೆಚ್ಚೆಚ್ಚು ಸೇವಿಸಿ. ಪ್ರತಿ ಮೂರು ಗಂಟೆಗಳಿಗೊಮ್ಮೆ ಲಘುವಾಗಿ ಏನನ್ನಾದರೂ ಸೇವನೆ ಮಾಡಿ. ಒಂದೇ ಸಲ ರಾಶಿ ರಾಶಿ ಸೇವನೆ ಮಾಡಬೇಡಿ. ಹೊಟ್ಟೆಯಲ್ಲಿ ಸ್ವಲ್ಪ ಜಾಗವನ್ನು ಖಾಲಿಯಾಗಿ ಇರಿಸಿಕೊಳ್ಳಿ. ದಿನವಿಡೀ ಕನಿಷ್ಠ ಏಳು ಗ್ಲಾಸ್ ನೀರು ಕುಡಿಯಿರಿ.
ಇದನ್ನೂ ಓದಿ: ಪಾದಗಳು ತಣ್ಣಗಾಗುವುದಕ್ಕೆ ಮಧುಮೇಹ ಕಾರಣವೇ? ಇಲ್ಲಿದೆ ಸ್ಪಷ್ಟ ಮಾಹಿತಿ
ಈ ಸಲಹೆಗಳನ್ನು ತಪ್ಪದೆ ಪಾಲಿಸಿ
- ಪ್ರತಿ ಎರಡು ದಿನಗಳಿಗೊಮ್ಮೆ ಸಕ್ಕರೆ ಮಟ್ಟವನ್ನು ಪರಿಶೀಲಿಸಿ.
- ಔಷಧಿಗಳನ್ನು ಸಮಯಕ್ಕೆ ಸರಿಯಾಗಿ ತೆಗೆದುಕೊಳ್ಳಿ.
- ಕನಿಷ್ಠ 7 ಗಂಟೆ ನಿದ್ದೆ ಮಾಡಿ.
- ಪ್ರತಿದಿನ ಕನಿಷ್ಠ 15 ನಿಮಿಷ ವ್ಯಾಯಾಮ ಮಾಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
