AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶೇಂಗಾ ತಿಂದ್ರೆ ತೂಕ ಕಡಿಮೆಯಾಗುತ್ತಾ ಅಥವಾ ಹೆಚ್ಚಾಗುತ್ತಾ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

ಕಡಲೆಕಾಯಿ ಚಳಿಗಾಲದ ಸೂಪರ್‌ಫುಡ್. ಈ ಸಮಯದಲ್ಲಿ ಯಥೇಚ್ಛವಾಗಿ ಸೇವನೆ ಮಾಡುವುದು ಆರೋಗ್ಯಕ್ಕೆ ಪ್ರಯೋಜನಕಾರಿ. ಆದರೆ ಕಡಲೆಕಾಯಿ ತಿನ್ನುವುದರಿಂದ ತೂಕ ಹೆಚ್ಚಾಗುತ್ತದೆ ಎಂಬುದು ಕೆಲವರ ನಂಬಿಕೆ, ಇನ್ನು ಕೆಲವರು ಇದು ತೂಕ ಕಡಿಮೆಮಾಡಿಕೊಳ್ಳಲು ಸಹಾಯ ಮಾಡುತ್ತದೆ ಎನ್ನುತ್ತಾರೆ. ಇವೆರಡರಲ್ಲಿ ಯಾವುದು ಸತ್ಯ? ಇದು ತೂಕ ಹೆಚ್ಚಾಗುವುದಕ್ಕೆ ಸಹಾಯ ಮಾಡುತ್ತದೆಯೋ ಅಥವಾ ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆಯೋ, ಜೊತೆಗೆ ಯಾರು ಇದನ್ನು ಸೇವನೆ ಮಾಡಬಾರದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಶೇಂಗಾ ತಿಂದ್ರೆ ತೂಕ ಕಡಿಮೆಯಾಗುತ್ತಾ ಅಥವಾ ಹೆಚ್ಚಾಗುತ್ತಾ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ
How Peanuts Affect Your Weight
ಪ್ರೀತಿ ಭಟ್​, ಗುಣವಂತೆ
|

Updated on: Jan 08, 2026 | 3:56 PM

Share

ಚಳಿಗಾಲದಲ್ಲಿ ಕಡಲೆಕಾಯಿ ಅಥವಾ ಶೇಂಗಾ (Peanuts) ಸೇವನೆಯನ್ನು ಯಥೇಚ್ಛವಾಗಿ ಮಾಡುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು ಎನ್ನಲಾಗುತ್ತದೆ. ಈ ವಾತಾವರಣಕ್ಕೆ ಮಾತ್ರವಲ್ಲ, ಎಲ್ಲಾ ಕಾಲಕ್ಕೂ ಇದು ಒಳ್ಳೆಯದು. ಆದರೆ ಕಡಲೆಕಾಯಿ ತಿನ್ನುವುದರಿಂದ ತೂಕ ಹೆಚ್ಚಾಗುತ್ತದೆ ಎಂಬುದು ಕೆಲವರ ನಂಬಿಕೆ, ಇನ್ನು ಕೆಲವರು ಇದು ತೂಕ ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ ಎನ್ನುತ್ತಾರೆ. ಇವೆರಡರಲ್ಲಿ ಯಾವುದು ಸತ್ಯ! ಕಡಲೆಕಾಯಿ ಅಥವಾ ಶೇಂಗಾದಲ್ಲಿರುವ ಕ್ಯಾಲೊರಿಗಳು, ತೂಕ (Weight) ಹೆಚ್ಚಾಗುವುದಕ್ಕೆ ಸಹಾಯ ಮಾಡುತ್ತದೆಯೋ ಅಥವಾ ಕಡಿಮೆ ಮಾಡುತ್ತದೆಯೋ, ಜೊತೆಗೆ ಯಾರು ಇದನ್ನು ಸೇವನೆ ಮಾಡಬಾರದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ. ಸಂಪೂರ್ಣ ಮಾಹಿತಿ ಇಲ್ಲಿದೆ.

ಶೇಂಗಾ ಸೇವನೆಯಿಂದ ತೂಕ ಕಡಿಮೆಯಾಗುತ್ತಾ ಅಥವಾ ಹೆಚ್ಚುತ್ತಾ?

ದೆಹಲಿಯ ಜಿಟಿಬಿ ಆಸ್ಪತ್ರೆಯ ಮಾಜಿ ಆಹಾರ ತಜ್ಞೆ ಡಾ. ಅನಾಮಿಕಾ ಗೌರ್ ತಿಳಿಸಿರುವ ಮಾಹಿತಿ ಅನುಸಾರ, ಶೇಂಗಾದಲ್ಲಿ ಪ್ರೋಟೀನ್ ಅಧಿಕವಾಗಿದ್ದು ಸಂಶೋಧನೆಗಳ ಪ್ರಕಾರ, ಪ್ರೋಟೀನ್ ಹೆಚ್ಚಿರುವ ಆಹಾರ ಸೇವನೆಯಿಂದ ತೂಕ ಹೆಚ್ಚಾಗುವುದಿಲ್ಲ. ಅದರಲ್ಲಿಯೂ ಕಡಲೆಕಾಯಿಯಲ್ಲಿರುವ ಸುಮಾರು 25% ಕ್ಯಾಲೊರಿಗಳು ಪ್ರೋಟೀನ್‌ನಿಂದ ಬರುತ್ತವೆ. ಸಸ್ಯ ಆಧಾರಿತ ಪ್ರೋಟೀನ್ ದೇಹವನ್ನು ಪ್ರವೇಶಿಸಿದಾಗ, ಅದು ಹೊಟ್ಟೆ ತುಂಬಿದ ಭಾವನೆಯನ್ನು ಉಂಟುಮಾಡುತ್ತದೆ. ಹೀಗಾಗಿ ಹಸಿವು ಕಡಿಮೆಯಾಗಿ, ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ. ಇದು ತೂಕ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಶೇಂಗಾದಲ್ಲಿ ಫೈಬರ್ ಅಂಶವಿದ್ದು ಇದು ಹೊಟ್ಟೆಗೂ ಒಳ್ಳೆಯದು. ಆದರೆ ತುಪ್ಪ ಅಥವಾ ಎಣ್ಣೆಯಲ್ಲಿ ಹುರಿದ ಕಡಲೆಕಾಯಿಯನ್ನು ತಿಂದರೆ ತೂಕ ಹೆಚ್ಚಾಗುತ್ತದೆ.

ಬೆಲ್ಲದೊಂದಿಗೆ ಶೇಂಗಾ ಸೇವನೆ ಮಾಡಿ:

ಸಾಮಾನ್ಯವಾಗಿ ಬೆಲ್ಲದೊಂದಿಗೆ ಕಡಲೆಕಾಯಿ ಅಥವಾ ಶೇಂಗಾ ತಿನ್ನುವ ಅಭ್ಯಾಸ ದೇಹಕ್ಕೆ ಸಾಕಷ್ಟು ಪ್ರಯೋಜನಕಾರಿ. ಬೆಲ್ಲದಲ್ಲಿ ಉತ್ಕರ್ಷಣ ನಿರೋಧಕಗಳಿವೆ ಮತ್ತು ಶೇಂಗಾದಲ್ಲಿ ಪ್ರೋಟೀನ್ ಇರುತ್ತದೆ. ಹಾಗಾಗಿ ಈ ಸಂಯೋಜನೆ ಆರೋಗ್ಯಕ್ಕೆ ಒಳ್ಳೆಯದು. ಆದರೆ ಕೆಲವರು ಮಾತ್ರ ಶೇಂಗಾ ತಿನ್ನುವುದನ್ನು ಕಡಿಮೆ ಮಾಡಬೇಕು. ಅಲ್ಲದೆ, ದಿನಕ್ಕೆ 25 ಗ್ರಾಂ ಗಿಂತ ಹೆಚ್ಚು ತಿನ್ನಬಾರದು.

ಇದನ್ನೂ ಓದಿ: ಸುಲಭವಾಗಿ ತೂಕ ಇಳಿಸಿಕೊಳ್ಳಲು ಬಯಸಿದರೆ ಪ್ರತಿದಿನ ಬೆಳಗ್ಗೆ ಈ ನಾಲ್ಕು ಕೆಲಸಗಳನ್ನು ಮಾಡಿ

ಶೇಂಗಾ ಯಾರಿಗೆ ಒಳ್ಳೆಯದಲ್ಲ:

  • ಮಲಬದ್ಧತೆ ಸಮಸ್ಯೆ ಇರುವವರಿಗೆ.
  • ಕಡಲೆಕಾಯಿಂದ ಅಲರ್ಜಿ ಇರುವವರಿಗೆ.
  • ತುಂಬಾ ಕಡಿಮೆ ತೂಕ ಇರುವವರಿಗೆ.
  • ಅಧಿಕ ರಕ್ತದೊತ್ತಡ ಮತ್ತು ಮೂತ್ರಪಿಂಡ ಕಾಯಿಲೆ ಇರುವ ರೋಗಿಗಳಿಗೆ ಒಳ್ಳೆಯದಲ್ಲ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ