AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ “ಅಮೆಜಾನ್ ಸ್ನೇಕ್ ಕ್ಯಾಟ್”ನ ಅಸಲಿಯತ್ತೇನು?

ಅಮೆಜಾನ್​ನಂತಹ ದಟ್ಟ ಕಾನನದಲ್ಲಿ ಅಡಗಿದೆ ಎನ್ನಲಾದ ಅಪರೂಪದ "ಅಮೆಜಾನ್ ಸ್ನೇಕ್ ಕ್ಯಾಟ್" ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಅಮೆಜಾನ್ ಸ್ನೇಕ್ ಕ್ಯಾಟ್ನ ಅಸಲಿಯತ್ತೇನು?
ಅಮೆಜಾನ್ ಸ್ನೇಕ್ ಕ್ಯಾಟ್
Follow us
ಆಯೇಷಾ ಬಾನು
|

Updated on: Mar 19, 2023 | 3:33 PM

ಡಿಜಿಟಲ್ ಯುಗದಲ್ಲಿ ಚಿಕ್ಕದೊಂದು ಸುದ್ದಿಯನ್ನು ಇಡೀ ಪ್ರಪಂಚಕ್ಕೆ ಸುಲಭವಾಗಿ ತಲುಪಿಸಬಹುದು, ಹಾಗೇ ಒಂದು ಸುಳ್ಳು ಸುದ್ದಿಯನ್ನೂ ಕೂಡ. ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಚಿತ್ರಗಳು, ವಿಡಿಯೋಗಳು ಕ್ಷಣ ಮಾತ್ರದಲ್ಲಿ ವೈರಲ್ ಆಗುತ್ತವೆ. ಜನರಲ್ಲಿ ಚರ್ಚೆಗಳನ್ನು ಹುಟ್ಟು ಹಾಕುತ್ತವೆ. ಈ ರೀತಿ ಚರ್ಚೆಗಳನ್ನು ಹುಟ್ಟು ಹಾಕುವ ಅದೆಷ್ಟೂ ಸಂಗತಿಗಳು ಸುಳ್ಳು ಕೂಡ ಆಗಿರುತ್ತವೆ. ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ “ಅಮೆಜಾನ್ ಸ್ನೇಕ್ ಕ್ಯಾಟ್” ಚಿತ್ರವನ್ನು ನೋಡಿದವರು ಸೃಷ್ಟಿಯ ಅದ್ಭುತಕ್ಕೆ ಮಾರಿ ಹೋಗಿದ್ದರು. ಅಮೆಜಾನ್​ನಂತಹ ದಟ್ಟ ಕಾನನದಲ್ಲಿ ಅಡಗಿದ್ದ ಅಪರೂಪದ ಪ್ರಾಣಿಯ ನೋಡಿ ಅಚ್ಚರಿ ಪಟ್ಟಿದ್ದರು. ಆದ್ರೆ ಈ ಚಿತ್ರ ಸುಳ್ಳು. ಫೋಟೋಶಾಪ್ ಮೂಲಕ ಎಡಿಟ್ ಮಾಡಲಾಗಿದೆ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸದ್ಯ “ಅಮೆಜಾನ್ ಸ್ನೇಕ್ ಕ್ಯಾಟ್” ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆ ಶುರುವಾಗಿದೆ.

“ಅಮೆಜಾನ್ ಸ್ನೇಕ್ ಕ್ಯಾಟ್” ʼಸರ್ಪನ್ಸ್ ಕ್ಯಾಟಸ್ʼ ಎಂದು ಕರೆಯಲಾಗುತ್ತದೆ. ಇದು ಭೂಮಿಯ ಮೇಲಿನ ಅತ್ಯಂತ ಅಪರೂಪದ ಬೆಕ್ಕಿನ ಜಾತಿಯಾಗಿದೆ. ಈ ಪ್ರಾಣಿಗಳು ಅಮೆಜಾನ್ ಮಳೆಕಾಡಿನಲ್ಲಿ ಮನುಷ್ಯರೂ ಸಹ ತಲುಪಲು ಕಷ್ಟವಾಗುವ ಪ್ರದೇಶಗಳಲ್ಲಿ ವಾಸಿಸುತ್ತವೆ. ಆದ್ದರಿಂದ ಅವುಗಳು ಮಾನವರ ಕಣ್ಣಿಗೆ ಬಿಳುವುದು ಅತಿ ಕಡಿವೆ. ಹೀಗಾಗಿ ಇವುಗಳ ಅಧ್ಯಯನವೂ ಕಡಿಮೆ. “ಅಮೆಜಾನ್ ಸ್ನೇಕ್ ಕ್ಯಾಟ್” ಮೊದಲ ಚಿತ್ರ 2020 ರಲ್ಲಿ ಕಾಣಲು ಸಿಕ್ಕಿತ್ತು ಎಂದು ಟ್ವಿಟರ್ ಬಳಕೆದಾರರೊಬ್ಬರು ಚಿತ್ರ ಫೋಸ್ಟ್ ಮಾಡಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಆಸ್ಟ್ರೇಲಿಯದ ಡಾರ್ಲಿಂಗ್ ನದಿಯಲ್ಲಿ ಲಕ್ಷಾಂತರ ಮೀನುಗಳು ಸಾವು; ವಿಡಿಯೋ ವೈರಲ್!

ಈ ಫೋಟೋವನ್ನು ಅಪ್‌ಲೋಡ್ ಮಾಡಿದ ಕೆಲ ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಬೆಕ್ಕಿನ ಜಾತಿಯನ್ನು “ಸರ್ಪನ್ಸ್ ಕ್ಯಾಟಸ್” ಎಂದು ಕರೆದಿದ್ದಾರೆ. ಇದರರ್ಥ “ಸರ್ಪ” ಮತ್ತು ಲ್ಯಾಟಿನ್ ಭಾಷೆಯಲ್ಲಿ “ತಿಳಿವಳಿಕೆ, ಬುದ್ಧಿವಂತ, ಚಾಣಾಕ್ಷ, ಬುದ್ಧಿವಂತ, ವಿವೇಕಯುತ ಅಥವಾ ಜಾಗರೂಕ”. ಇನ್ನು ಮತ್ತೊಂದೆಡೆ ಕೆಲ ನೆಟ್ಟಿಗರು ಇದು ಬೆಕ್ಕುಗಳ ಜಾತಿಗೆ ಸೇರಿದಲ್ಲ. ಇದು ಫೋಟೋಶಾಪ್​ನಿಂದ ಡಿಸೈನ್ ಮಾಡಲಾಗಿದೆ. ಈ ಚಿತ್ರ ನಕಲಿ ಎಂದಿದ್ದಾರೆ. ಇದು ಫೋಟೋಶಾಪ್​ನ ಮ್ಯಾಜಿಕ್ ಮತ್ತು ಪ್ರಕೃತಿಯ ಅದ್ಭುತವಲ್ಲ ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ಮತ್ತೊಬ್ಬರು ಈ ಚಿತ್ರಕ್ಕೆ ಹೋಲುವ ನಿಜವಾದ ಹಾವು ಚಿನ್ನದ ಉಂಗುರದ ಬೆಕ್ಕು ಹಾವು, ಇದು ಆಗ್ನೇಯ ಏಷ್ಯಾದಲ್ಲಿ ಕಂಡು ಬರುವ ವಿಷಕಾರಿ ಹಾವಿನ ಜಾತಿಯಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಇದು ಬೆಕ್ಕಿನ ತಲೆಯನ್ನು ಹಾವಿನ ದೇಹಕ್ಕೆ ಜೋಡಿಸಿ ಹೊಂದಿಕೆಯಾಗುವಂತೆ ಬಣ್ಣ ಹಚ್ಚಲಾಗಿದೆ. ಅದು ಸಾಕಷ್ಟು ದೊಡ್ಡ ಮತ್ತು ಉದ್ದವಾದ ಹಾವು ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಈ ಚಿತ್ರಕ್ಕೆ ಸಂಬಂಧಿಸಿ ಅನೇಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ರಸ್ತೆಯಲ್ಲಿ ಹೋಗುತ್ತಿದ್ದ ಬಾಲಕನ ತುಟಿಗೆ ಕಚ್ಚಿದ ಹುಚ್ಚುನಾಯಿ
ರಸ್ತೆಯಲ್ಲಿ ಹೋಗುತ್ತಿದ್ದ ಬಾಲಕನ ತುಟಿಗೆ ಕಚ್ಚಿದ ಹುಚ್ಚುನಾಯಿ
ಕೆಂಡದಂಥ ಬಿಸಲಿನಿಂದ ರಕ್ಷಿಸಲು ವಿನೂತನ ಕ್ರಮ: ಪೊಲೀಸ್ ಕಮೀಷನರ್
ಕೆಂಡದಂಥ ಬಿಸಲಿನಿಂದ ರಕ್ಷಿಸಲು ವಿನೂತನ ಕ್ರಮ: ಪೊಲೀಸ್ ಕಮೀಷನರ್
ಸೋನು ನಿಗಮ್ ಬದಲಿಗೆ ಕನ್ನಡದ ಗಾಯಕನಿಗೆ ಅವಕಾಶ ಕೊಟ್ಟ ನಿರ್ಮಾಪಕ
ಸೋನು ನಿಗಮ್ ಬದಲಿಗೆ ಕನ್ನಡದ ಗಾಯಕನಿಗೆ ಅವಕಾಶ ಕೊಟ್ಟ ನಿರ್ಮಾಪಕ
ರೆಡ್ಡಿ ಜೈಲು ಸೇರುವಂತಾಗುವಲ್ಲಿ ಸಿಬಿಐ ಅಧಿಕಾರಿಗಳ ಪಾತ್ರ ದೊಡ್ಡದು: ಹಿರೇಮಠ
ರೆಡ್ಡಿ ಜೈಲು ಸೇರುವಂತಾಗುವಲ್ಲಿ ಸಿಬಿಐ ಅಧಿಕಾರಿಗಳ ಪಾತ್ರ ದೊಡ್ಡದು: ಹಿರೇಮಠ
ಉಗ್ರರ ದಾಳಿ ಖಂಡಿಸಿ ಜರ್ಮನಿಯಲ್ಲಿ ಅನಿವಾಸಿ ಭಾರತೀಯರಿಂದ ಮೆರವಣಿಗೆ
ಉಗ್ರರ ದಾಳಿ ಖಂಡಿಸಿ ಜರ್ಮನಿಯಲ್ಲಿ ಅನಿವಾಸಿ ಭಾರತೀಯರಿಂದ ಮೆರವಣಿಗೆ
ಅಪಾಯ ಉಂಟಾದಾಗ ಪಾರಾಗಲು ಮಾಕ್ ಡ್ರಿಲ್ ವೇಳೆ ಜಮ್ಮು ಶಾಲೆಯ ಮಕ್ಕಳಿಗೆ ತರಬೇತಿ
ಅಪಾಯ ಉಂಟಾದಾಗ ಪಾರಾಗಲು ಮಾಕ್ ಡ್ರಿಲ್ ವೇಳೆ ಜಮ್ಮು ಶಾಲೆಯ ಮಕ್ಕಳಿಗೆ ತರಬೇತಿ
ಸಿನಿಮಾದಿಂದ ಸೋನು ನಿಗಂ ಹಾಡು ಡ್ರಾಪ್, ನಿರ್ದೇಶಕ ಹೇಳಿದ್ದಿಷ್ಟು?
ಸಿನಿಮಾದಿಂದ ಸೋನು ನಿಗಂ ಹಾಡು ಡ್ರಾಪ್, ನಿರ್ದೇಶಕ ಹೇಳಿದ್ದಿಷ್ಟು?
ನನ್ನ ಮೇಲೆ ಹಲ್ಲೆ, ತಾತನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಲಾಗಿತ್ತು: ಗಣೇಶ್
ನನ್ನ ಮೇಲೆ ಹಲ್ಲೆ, ತಾತನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಲಾಗಿತ್ತು: ಗಣೇಶ್
ಮನೆಯೆದುರು ಮಕ್ಕಳು ಆಡುವಾಗ ಚಿರತೆ ಪ್ರತ್ಯಕ್ಷ; ಶಾಕಿಂಗ್ ವಿಡಿಯೋ ವೈರಲ್
ಮನೆಯೆದುರು ಮಕ್ಕಳು ಆಡುವಾಗ ಚಿರತೆ ಪ್ರತ್ಯಕ್ಷ; ಶಾಕಿಂಗ್ ವಿಡಿಯೋ ವೈರಲ್
ಪಾಕಿಸ್ತಾನೀಯರ ಬೆಂಬಲ ಭಾರತಕ್ಕಾ?
ಪಾಕಿಸ್ತಾನೀಯರ ಬೆಂಬಲ ಭಾರತಕ್ಕಾ?