Kannada News Lifestyle Ants Problem : Natural ways to get rid of ants in your house Lifestyle Tips in kannada
Ants Problem : ಮನೆಯಲ್ಲಿ ಇರುವೆ ಕಾಟವೇ? ಹೀಗೆ ಮಾಡಿ
ಹೆಚ್ಚಿನವರ ಮನೆಯಲ್ಲಿ ಈ ಇರುವೆಗಳ ಕಾಟ ಇದ್ದೆ ಇರುತ್ತದೆ. ತಿಂಡಿ ತಿನಿಸುಗಳನ್ನು ಇಟ್ಟರೆ ಸಾಕು ಇರುವೆಗಳು ಮುತ್ತಿಕೊಳ್ಳುತ್ತವೆ. ಅದಲ್ಲದೇ, ಈ ಕಾಪಟಿನಲ್ಲಿಟ್ಟಿರುವ ಬಟ್ಟೆಗಳನ್ನು ಈ ಇರುವೆಗಳು ಬಿಡುವುದಿಲ್ಲ. ಈ ಇರುವೆಗಳನ್ನು ಓಡಿಸಲು ಮಾರುಕಟ್ಟೆಯಲ್ಲಿ ಸಿಗುವ ಔಷಧಗಳನ್ನು ಬಳಕೆ ಮಾಡುವವರೇ ಹೆಚ್ಚು. ಆದರೆ ನಿಮ್ಮ ಮನೆಯಲ್ಲಿರುವ ಈ ಪದಾರ್ಥಗಳಿಂದ ಇರುವೆಗಳಿಗೆ ಗುಡ್ ಬಾಯ್ ಹೇಳಬಹುದು.
ಸಾಂದರ್ಭಿಕ ಚಿತ್ರ
Follow us on
ಅಡುಗೆ ಮನೆಗೆ ಸದಾ ಬರುವ ಅತಿಥಿಗಳಲ್ಲಿ ಇರುವೆಗಳು ಕೂಡ ಒಂದು. ಸಿಹಿ ಪದಾರ್ಥಗಳು ಇದ್ದು ಬಿಟ್ಟರಂತೂ ಇರುವೆಗಳು ಮುತ್ತಿಕೊಂಡು ಬಿಡುತ್ತವೆ. ಗೊತ್ತಿಲ್ಲದೇ ಈ ಸಿಹಿತಿಂಡಿಗಳನ್ನು ಬಾಯಿಗೆ ಹಾಕಿಕೊಂಡರೆ ಮುಗಿದೇ ಹೋಯ್ತು, ಬಾಯಿ ನಾಲಿಗೆಲ್ಲಾ ಕಚ್ಚಿ ತನ್ನ ಕೋಪವನ್ನು ತೀರಿಸಿ ಕೊಳ್ಳುತ್ತವೆ. ಮನೆಯಲ್ಲಿ ಇರುವೆಗಳ ಕಾಟದಿಂದ ಬೇಸೆತ್ತು ಹೋಗಿದ್ದರೆ ಈ ಕೆಲವು ವಸ್ತುಗಳನ್ನು ಬಳಸಿದರೆ ಇರುವೆಗಳು ಓಡಿಹೋಗುವುದಲ್ಲದೆ, ಆರೋಗ್ಯದ ಮೇಲೆ ಯಾವುದೇ ಅಡ್ಡಪರಿಣಾಮಗಳಾವುದಿಲ್ಲ.
ಮನೆಯ ಎಲ್ಲೆಂದರಲ್ಲಿ ಇರುವೆಗಳು ಕಾಣಿಸಿಕೊಂಡರೆ ಮೆಣಸಿನ ಪುಡಿ ಅಥವಾ ಕಾಳುಮೆಣಸಿನ ಪುಡಿ ಸಿಂಪಡಿಸಿದರೆ, ಇದರ ಘಾಟಿಗೆ ಮತ್ತೆ ಇರುವೆಗಳು ಅತ್ತ ಸುಳಿಯುವುದೇ ಇಲ್ಲ.
ಇರುವೆಗಳ ರಾಶಿಯಿದ್ದರೆ ಬೇವಿನ ಎಣ್ಣೆಯನ್ನು ಆ ಜಾಗಕ್ಕೆ ಸ್ಪ್ರೇ ಮಾಡಿದರೆ ಇದರ ವಾಸನೆಗೆ ಇರುವೆಗಳು ಓಡಿಹೋಗುತ್ತವೆ.
ಗೋಧಿ ಹಿಟ್ಟನ್ನು ಇರುವೆಗಳಿದ್ದಲ್ಲಿ ಹಾಕಿದರೆ ಇರುವೆಗಳು ಕ್ಷಣಾರ್ಧದಲ್ಲಿ ಇಲ್ಲವಾಗುತ್ತದೆ.
ದಾಲ್ಚಿನ್ನಿಯ ವಾಸನೆಯನ್ನು ಕೀಟಗಳು ಇಷ್ಟ ಪಡುವುದಿಲ್ಲ. ಹೀಗಾಗಿ ಇರುವೆಗಳು ಕಂಡು ಬಂದಲ್ಲಿ ದಾಲ್ಚಿನ್ನಿ ಪುಡಿಯನ್ನು ಸಿಂಪಡಿಸಿದರೆ ಇದರ ವಾಸನೆಗೆ ಇರುವೆಗಳು ದೂರ ಹೋಗುತ್ತವೆ.
ಕಿತ್ತಳೆ, ನಿಂಬೆ ಹಣ್ಣುಗಳ ಸಿಪ್ಪೆಗಳನ್ನು ಇರುವೆಗಳು ಗೋಚರಿಸುವ ಸ್ಥಳದಲ್ಲಿ ಇಟ್ಟರೆ, ಇದರ ವಾಸನೆಗೆ ಇರುವೆಗಳು ಬರುವುದಿಲ್ಲ.
ಇರುವೆಗಳು ಇರುವ ಜಾಗದಲ್ಲಿ ಲವಂಗವನ್ನು ಇಡಬಹುದು, ಇಲ್ಲವಾದರೆ ಲವಂಗವನ್ನು ನೀರಿಗೆ ಹಾಕಿ ಕುದಿಸಿ, ಈ ನೀರನ್ನು ಸ್ಪ್ರೇ ಮಾಡಿದರೆ ಇರುವೆಗಳು ಸಾಯುತ್ತವೆ.
ಇರುವೆಗಳು ಇದ್ದ ಜಾಗಕ್ಕೆ ಉಪ್ಪನ್ನು ಹಾಕುವುದರಿಂದ ಇರುವೆಗಳ ಕಾಟದಿಂದ ಮುಕ್ತಿ ಹೊಂದಬಹುದು.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ