Paracetamol Tablet : ಪ್ಯಾರಾಸಿಟಮಲ್ ಮಾತ್ರೆ ಸೇವಿಸುವ ಮುನ್ನ ಯೋಚಿಸಿ, ಇದು ಹೃದಯಕ್ಕೆ ಹಾನಿ: ಅಧ್ಯಯನ
ಆರೋಗ್ಯ ಸಮಸ್ಯೆಯೂ ಎದುರಾದಾಗ ಮೊದಲ ಆಯ್ಕೆಯೇ ಈ ಪ್ಯಾರಸಿಟಮಾಲ್ ಮಾತ್ರೆಯಾಗಿರುತ್ತದೆ. ಪ್ಯಾರಸಿಟಮಾಲ್ ಎನ್ನುವುದು ಅತ್ಯಂತ ಸುಲಭವಾಗಿ, ಕಡಿಮೆ ದರದಲ್ಲಿ ಸಿಗುವ ಹಾಗೂ ಸುರಕ್ಷಿತವಾದ ನೋವು ನಿವಾರಕ ಮಾತ್ರೆಯೆಂದು ಭಾವಿಸಲಾಗಿದೆ. ಆದರೆ ಕಡಿಮೆ ಡೋಸ್ನ ಮಾತ್ರೆಯ ಸೇವನೆಯಿಂದಲೂ ಹೃದಯಕ್ಕೆ ಹಾನಿಯಾಗುತ್ತದೆ ಎಂದು ಸಂಶೋಧನೆಯಿಂದ ಬಹಿರಂಗವಾಗಿದೆ.
ಪ್ರತಿಯೊಬ್ಬರ ಮನೆಯಲ್ಲಿಯೂ ಈ ಪ್ಯಾರಾಸಿಟಮಾಲ್ ಮಾತ್ರೆಯೂ (Paracetamol Tablet) ಇದ್ದೆ ಇರುತ್ತದೆ. ಸ್ವಲ್ಪ ಮೈ ಬಿಸಿಯಾದರೂ, ಮೈ ಕೈ ನೋವು ಕಾಣಿಸಿಕೊಂಡರೂ, ಈ ಒಂದು ಪ್ಯಾರಸಿಟಮಾಲ್ ಮಾತ್ರೆ ತೆಗೆದುಕೊಂಡು ಮಲಗಿದರೆ ಎಲ್ಲಾ ಸಮಸ್ಯೆಯೂ ದೂರವಾಗುತ್ತದೆ. ಹೀಗಾಗಿ ವೈದ್ಯರನ್ನು ಭೇಟಿಯಾಗದೆ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗೆ ಪ್ಯಾರಸಿಟಮಾಲ್ ಮಾತ್ರೆ ತೆಗೆದುಕೊಳ್ಳುವುದರ ಸಂಖ್ಯೆಯೂ ಹೆಚ್ಚಾಗಿದೆ. ಆದರೆ ಕಡಿಮೆ ಡೋಸ್ ನ ಪ್ಯಾರಸಿಟಮಾಲ್ ಮಾತ್ರೆಯೂ ಕೂಡ ನಿಮ್ಮ ಹೃದಯವನ್ನು ಹಾನಿಗೊಳಿಸುತ್ತದೆ ಎನ್ನುವ ಆಘಾತಕಾರಿ ವಿಚಾರವು ಸಂಶೋಧನೆಯಿಂದ ಬಹಿರಂಗವಾಗಿವೆ.
ಪ್ರಪಂಚದಾದ್ಯಂತದ ಸೂಪರ್ ಮಾರ್ಕೆಟ್ ಗಳಲ್ಲಿ ಲಭ್ಯವಿರುವ ಆಫ್-ದಿ-ಶೆಲ್ಫ್ ಔಷಧವು ಇಲಿಗಳ ಹೃದಯ ಅಂಗಾಂಶದಲ್ಲಿನ ಪ್ರೋಟೀನ್ಗಳನ್ನು ಬದಲಿಸಿದೆ ಎಂದು ಇಲಿಗಳ ಮೇಲೆ ನಡೆಸಿದ ಸಂಶೋಧನೆಯಿಂದ ತಜ್ಞರು ಕಂಡುಹಿಡಿದ್ದಾರೆ. ಈ ಮಾತ್ರೆಗಳ ಸೇವನೆಯಿಂದ ಯಕೃತನ್ನು ಹಾನಿಗೊಳಿಸುತ್ತದೆ, ರಕ್ತದೊತ್ತಡವನ್ನು ಹೆಚ್ಚಿಸಬಹುದು ಎಂದು ಅಧ್ಯಯನದಿಂದ ತಿಳಿದು ಬಂದಿದೆ.
ಇದನ್ನೂ ಓದಿ: ಬೇಸಿಗೆಯಲ್ಲಿ ಲಿಂಬೆ ನೀರು ಕುಡಿಯುವುದು ಒಳ್ಳೆಯದಾ? ಎಳನೀರು ಉತ್ತಮವಾ?
ಅದಲ್ಲದೇ ಪ್ಯಾರಸಿಟಮಾಲ್ ಮಾತ್ರೆಯ ಹೆಚ್ಚಿನ ಪ್ರಮಾಣದ ಬಳಕೆಯಿಂದ ಆಕ್ಸಿಡೇಟಿವ್ ಒತ್ತಡ ಅಥವಾ ಜೀವಾಣುಗಳ ಸಂಗ್ರಹದ ಪರಿಣಾಮವಾಗಿ ಹೃದಯ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ. ಆದಾಗ್ಯೂ, ರಾಷ್ಟ್ರೀಯ ಆರೋಗ್ಯ ಸೇವೆ (NHS) ವರದಿಯ ಪ್ರಕಾರ, ವಯಸ್ಕರು 500mg ಮಾತ್ರೆಗಳನ್ನು ದಿನಕ್ಕೆ 4 ಬಾರಿ ತೆಗೆದುಕೊಳ್ಳಬಹುದು. ಆದರೆ ಡೋಸ್‌ಗಳ ನಡುವೆ ಕನಿಷ್ಠ 4 ಗಂಟೆಗಳ ಕಾಲ ಅಂತರವಿರಬೇಕು. 24 ಗಂಟೆಗಳಲ್ಲಿ 8 ಕ್ಕಿಂತ ಹೆಚ್ಚು ಮಾತ್ರೆಗಳನ್ನು ತೆಗೆದುಕೊಳ್ಳಬಾರದು ಎಂದು ತಿಳಿಸಿದೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ