Health Care Tips in kannada : ಮೊಡವೆಗೆ ಸೂಕ್ತ ಪರಿಹಾರ ಈ ಇಂಗು, ಇಲ್ಲಿದೆ ಮನೆ ಮದ್ದು
ಭಾರತೀಯ ಅಡುಗೆ ಮನೆಯಲ್ಲಿ ಸಿಗುವ ಮಸಾಲೆ ಪದಾರ್ಥಗಳಲ್ಲಿ ಇಂಗು ಕೂಡ ಒಂದು. ಅಡುಗೆ ರುಚಿ ಹಾಗೂ ಘಮ ಹೆಚ್ಚಾಗಲು ಬಳಸುವ ಈ ಇಂಗಿನಲ್ಲಯೂ ಆರೋಗ್ಯಯಿದೆ ಎನ್ನುವುದು ಬಹುತೇಕರಿಗೆ ತಿಳಿದಿಲ್ಲ. ಅಡುಗೆಗೆ ಬಳಸುವ ಈ ಇಂಗು ಹಲವಾರು ಆರೋಗ್ಯ ಸಮಸ್ಯೆಗಳನ್ನು ಗುಣ ಪಡಿಸುವ ತಾಕತ್ತನ್ನು ಹೊಂದಿದೆ. ಅಜೀರ್ಣ, ತಲೆನೋವಿನಂತಹ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಇಂಗಿನಿಂದ ಪರಿಹಾರವನ್ನು ಕಂಡುಕೊಳ್ಳುವುದು ಬಲು ಸುಲಭ.
ಇಂಗು ತೆಂಗು ಇದ್ದರೆ ಮಂಗ ಕೂಡ ಅಡುಗೆ ಮಾಡುತ್ತೆ ಎನ್ನುವ ಮಾತಿದೆ. ಭಾರತೀಯರ ಅಡುಗೆಯಲ್ಲಿ ಇಂಗಿನ ಬಳಕೆ ಅಧಿಕವಾಗಿದೆ. ಮಸಾಲೆ ಪದಾರ್ಥವಾಗಿ ಬಳಸುವುದರ ಜೊತೆಗೆ ದಾಲ್, ಸಾಂಬಾರು, ರಸಂ, ರೈಸ್‌ಬಾತ್ ಸೇರಿದಂತೆ ಇನ್ನಿತ್ತರ ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಇದರಲ್ಲಿ ಕಾರ್ಮಿನೇಟಿವ್, ಆಂಟಿ-ವೈರಲ್, ಬ್ಯಾಕ್ಟೀರಿಯಾ ವಿರೋಧಿ, ಉರಿಯೂತ ನಿವಾರಕ ಗುಣಗಳನ್ನು ಹೊಂದಿದ್ದು, ಆರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಿದೆ.
ಇಂಗಿನ ಸರಳ ಮನೆಮದ್ದುಗಳು:
- ಕಜ್ಜಿ ಹಾಗೂ ಚರ್ಮರೋಗದಂತಹ ಸಮಸ್ಯೆಗಳಿಗೆ ಇಂಗಿನ ಪುಡಿಯನ್ನು ಕೊಬ್ಬರಿ ಎಣ್ಣೆಯಲ್ಲಿ ಕಲಸಿ ಹಚ್ಚುವುದು ಪರಿಣಾಮಕಾರಿ ಮನೆ ಮದ್ದಾಗಿದೆ.
- ಜಂತು ಹುಳು ಸಮಸ್ಯೆಯಿದ್ದರೆ, ಒಂದು ಚಮಚ ಇಂಗಿನ ಪುಡಿಯನ್ನು ಬೇವಿನ ರಸದೊಂದಿಗೆ ಬೆರೆಸಿ ಸೇವಿಸುವುದು ಉತ್ತಮ.
- ಅಜೀರ್ಣ ಸಮಸ್ಯೆ, ಗ್ಯಾಸ್ಟ್ರಿಕ್ ಕಾಣಿಸಿಕೊಂಡಾಗ ಚಿಕ್ಕ ತುಂಡು ಇಂಗನ್ನು ಹುರಿದು, ಹಸಿ ಶುಂಠಿಯೊಂರಿಗೆ ಬೆರೆಸಿ ಸೇವನೆ ಮಾಡಿದರೆ ಈ ಸಮಸ್ಯೆಯೂ ದೂರವಾಗುತ್ತದೆ.
- ವಿಪರೀತ ತಲೆನೋವು ಎನ್ನುವಂತಹ ಇಂಗಿನ ಪುಡಿಯನ್ನು ಹುರಿದು, ಹಸಿ ಶುಂಠಿಯೊಂದಿಗೆ ತೆಗೆದುಕೊಂಡರೆ ಕಡಿಮೆಯಾಗುತ್ತದೆ.
- ಮುಟ್ಟಿನ ಹೊಟ್ಟೆ ನೋವಿಗೆ ಮುಟ್ಟಾಗುವ ಒಂದು ದಿನ ಮುಂಚಿತವಾಗಿ ಚಿಟಿಕೆಯಷ್ಟು ಇಂಗನ್ನು ಬಾಳೆಹಣ್ಣಿನೊಂದಿಗೆ ತಿನ್ನುವುದು ಪ್ರಯೋಜನಕಾರಿಯಾಗಿದೆ.
- ಮೊಡವೆಯಿದ್ದಲ್ಲಿ ಇಂಗನ್ನು ಸ್ವಲ್ಪ ನೀರಿನೊಂದಿಗೆ ಕರಗಿಸಿ ಮೊಡವೆ ಇರುವ ಜಾಗಕ್ಕೆ ಹಚ್ಚುವುದರಿಂದ ಕಡಿಮೆಯಾಗುತ್ತದೆ.
- ಮಕ್ಕಳಲ್ಲಿ ಕೆಮ್ಮು ಹಾಗೂ ಹೊಟ್ಟೆ ಉಬ್ಬರ ಸಮಸ್ಯೆ ಕಂಡು ಬಂದಲ್ಲಿ ಒಂದು ಚಮಚದ ವೀಳ್ಯೆದೆಲೆಯ ರಸದ ಜೊತೆಗೆ ಕಾಲು ಚಮಚ ಈರುಳ್ಳಿ ರಸ, ಎರಡು ಚಮಚ ಜೇನು ತುಪ್ಪಕ್ಕೆ ಇಂಗನ್ನು ಬೆರೆಸಿ ಸೇವಿಸಿದರೆ ಕಡಿಮೆಯಾಗುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:52 pm, Mon, 15 April 24