ನೀವು ಕೂಡ ಹಾಸಿಗೆಯಲ್ಲಿ ಕುಳಿತು ತಿನ್ನುವುದನ್ನು ಆನಂದಿಸುತ್ತೀರಾ? ಇದು ಬಹಳ ಆರಾಮದಾಯಕ ಮತ್ತು ಸುಲಭವಾದ ಅಭ್ಯಾಸವಾಗಿದ್ದರೂ ಇದರಿಂದ ಆರೋಗ್ಯಕ್ಕೆ ಹಲವು ರೀತಿಯ ಸಮಸ್ಯೆಗಳು ಉಂಟಾಗುತ್ತವೆ. ಹಾಸಿಗೆಯಲ್ಲಿ ಕುಳಿತು ತಿನ್ನುವುದರಿಂದ ಆರೋಗ್ಯಕ್ಕೆ ತೊಂದರೆಯಾಗುತ್ತದೆ ಎಂದು ಬಹಳ ಜನರಿಗೆ ಗೊತ್ತಿಲ್ಲ. ನಾವು ಏನು ತಿನ್ನುತ್ತೇವೆ ಎಂಬುದರ ಬಗ್ಗೆ ನಮಗೆ ಪ್ರಜ್ಞೆ ಇರಬೇಕು. ಇದಕ್ಕೆ ನಾವು ಹೇಗೆ ಮತ್ತು ಎಲ್ಲಿ ತಿನ್ನುತ್ತೇವೆ ಎಂಬುದು ಕೂಡ ಮುಖ್ಯವಾಗಿರುತ್ತದೆ. ನೀವು ಪ್ರತಿದಿನ ಹಾಸಿಗೆಯಲ್ಲಿ ದೀರ್ಘಕಾಲ ಕುಳಿತು ತಿನ್ನುವುದರಿಂದ ಆರೋಗ್ಯಕ್ಕೆ ಉಂಟಾಗುವ ಕೆಲವು ಅಪಾಯಗಳು ಇಲ್ಲಿವೆ.
ಹಾಸಿಗೆಯಲ್ಲಿ ಕುಳಿತು ತಿನ್ನುವುದು ಸಾಮಾನ್ಯ ಅಭ್ಯಾಸವಾಗಿದೆ. ಇದು ತಾತ್ಕಾಲಿಕ ಸೌಕರ್ಯವನ್ನು ನೀಡುತ್ತದೆ ಆದರೆ ಇದು ಕೆಲವು ಆರೋಗ್ಯ ಅಪಾಯಗಳನ್ನು ಸಹ ಹೊಂದಿದೆ. ನೀವು ಹಾಸಿಗೆಯಲ್ಲಿ ಕುಳಿತು ಏಕೆ ತಿನ್ನಬಾರದು? ಎಂಬುದರ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ನಿಮ್ಮ ಮಗು ಸರಿಯಾಗಿ ನಿದ್ರೆ ಮಾಡುತ್ತಿಲ್ಲವೇ?; ನಿರ್ಲಕ್ಷ್ಯ ಮಾಡಬೇಡಿ
ಅಜೀರ್ಣ:
ಹಾಸಿಗೆಯಲ್ಲಿ ಕುಳಿತು ತಿಂದು, ನಂತರ ಅಲ್ಲೇ ಮಲಗುವುದರಿಂದ ಜೀರ್ಣಕಾರಿ ತೊಂದರೆಗಳು ಶುರುವಾಗುತ್ತವೆ. ಹಾಸಿಗೆಯಲ್ಲಿ ಕುಳಿತು ಪ್ರತಿದಿನ ತಿನ್ನುವುದು, ಹಾಸಿಗೆಯಲ್ಲಿ ಮಲಗಿ ಅಥವಾ ಸ್ಲಚ್ ಭಂಗಿಯಲ್ಲಿ ಕುಳಿತು ತಿನ್ನುವುದು ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಇದು ಅಜೀರ್ಣ, ಆಸಿಡ್ ರಿಫ್ಲಕ್ಸ್ ಇತ್ಯಾದಿಗಳನ್ನು ಉಂಟುಮಾಡಬಹುದು. ಕುರ್ಚಿಯ ಮೇಲೆ ನೇರವಾಗಿ ಕುಳಿತು ತಿನ್ನುವುದು ಕರುಳಿನ ಆರೋಗ್ಯವನ್ನು ಉತ್ತೇಜಿಸುತ್ತದೆ.
ಆಹಾರದ ನಿಯಂತ್ರಣದ ಕೊರತೆ:
ಸಾಮಾನ್ಯವಾಗಿ ನಾವು ಹಾಸಿಗೆಯಲ್ಲಿ ಕುಳಿತು ಊಟ ಮಾಡುವಾಗ ನಾವು ಟಿವಿಯಲ್ಲಿ ಏನನ್ನಾದರೂ ನೋಡುತ್ತಿರುತ್ತೇವೆ ಅಥವಾ ಆನ್‌ಲೈನ್‌ನಲ್ಲಿ ಏನನ್ನಾದರೂ ಸ್ಟ್ರೀಮ್ ಮಾಡುತ್ತೇವೆ. ಅಂತಹ ಪರಿಸ್ಥಿತಿಯಲ್ಲಿ ಮನಸ್ಸು ಚಂಚಲವಾಗಿರುತ್ತದೆ. ಈ ವೇಳೆ ನಾವು ಅತಿಯಾಗಿ ತಿನ್ನುತ್ತೇವೆ ಅಥವಾ ಕಡಿಮೆ ತಿನ್ನುತ್ತೇವೆ. ಆದ್ದರಿಂದ, ಇದು ನಿಮ್ಮ ಊಟದ ಭಾಗದ ಗಾತ್ರವನ್ನು ಅಡ್ಡಿಪಡಿಸುತ್ತದೆ.
ಇದನ್ನೂ ಓದಿ: Sleeping Problem: ರಾತ್ರಿ ಈ ಆಹಾರ ಸೇವಿಸಿದರೆ ಉತ್ತಮ ನಿದ್ರೆ ಬರುವುದು ಗ್ಯಾರಂಟಿ
ನಿದ್ರೆಗೆ ತೊಂದರೆ:
ಹಾಸಿಗೆ ಮೇಲೆ ಕುಳಿತು ತಿನ್ನುವಾಗ ಹಾಸಿಗೆಯ ಮೇಲೆ ಆಹಾರವನ್ನು ಚೆಲ್ಲಬಹುದು. ಇದರಿಂದ ಕಲೆಗಳು ಉಂಟಾಗಬಹುದು. ಇದು ಉತ್ತಮ ನಿದ್ರೆಯ ವಾತಾವರಣವನ್ನು ಅಡ್ಡಿಪಡಿಸುತ್ತದೆ. ವಿಶ್ರಾಂತಿ ಮತ್ತು ಉತ್ತಮ ಗುಣಮಟ್ಟದ ನಿದ್ರೆ ಪಡೆಯಲು ನಿದ್ರೆಗೆ ಹೋಗುವಾಗ ಸುತ್ತಮುತ್ತಲಿನ ಸ್ವಚ್ಛತೆಯನ್ನು ಹೊಂದಿರಬೇಕು ಎಂದು ತಜ್ಞರು ಶಿಫಾರಸು ಮಾಡುತ್ತಾರೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ