August Calendar 2025: ಆಗಸ್ಟ್‌ ತಿಂಗಳಲ್ಲಿ ಆಚರಿಸಲಾಗುವ ರಾಷ್ಟ್ರೀಯ, ಅಂತಾರಾಷ್ಟ್ರೀಯ ದಿನಾಚರಣೆಗಳು ಯಾವುವು?

ಪ್ರತಿಯೊಂದು ತಿಂಗಳಲ್ಲೂ ಒಂದೊಂದು ಉದ್ದೇಶವನ್ನು ಇಟ್ಟುಕೊಂಡು ಜನರಲ್ಲಿ ಜಾಗೃತಿ ಮೂಡಿಸುವಂತಹ ಕೆಲವೊಂದು ಪ್ರಮುಖ ದಿನಾಚರಣೆಗಳನ್ನು ಆಚರಿಸಲಾಗುತ್ತದೆ. ಅದೇ ರೀತಿ ವರ್ಷದ 8 ನೇ ತಿಂಗಳಾದ ಆಗಸ್ಟ್‌ನಲ್ಲಿಯೂ ಕೆಲವೊಂದು ದಿನಾಚರಣೆಗಳನ್ನು ಆಚರಿಸಲಾಗುತ್ತದೆ. ಸ್ವಾತಂತ್ರ್ಯ ದಿನದಿಂದ ಹಿಡಿದು ಸಂಸ್ಕೃತ ದಿನದವರೆಗೆ ಆಗಸ್ಟ್‌ನಲ್ಲಿ ಯಾವೆಲ್ಲಾ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ದಿನಾಚರಣೆಗಳನ್ನು ಆಚರಿಸಲಾಗುತ್ತದೆ ಎಂಬುದನ್ನು ನೋಡೋಣ.

August Calendar 2025: ಆಗಸ್ಟ್‌ ತಿಂಗಳಲ್ಲಿ ಆಚರಿಸಲಾಗುವ  ರಾಷ್ಟ್ರೀಯ, ಅಂತಾರಾಷ್ಟ್ರೀಯ ದಿನಾಚರಣೆಗಳು ಯಾವುವು?
ಸಾಂದರ್ಭಿಕ ಚಿತ್ರ
Image Credit source: Getty Images

Updated on: Jul 29, 2025 | 7:14 PM

ವರ್ಷದ ಎಂಟನೇ ತಿಂಗಳು ಆಗಸ್ಟ್‌ (August) ಬಂದೇ ಬಿಡ್ತು. ಶ್ರಾವಣ ಮಾಸದ ಈ ತಿಂಗಳಿನಲ್ಲಿ ವರಮಹಾಲಕ್ಷ್ಮೀ ಪೂಜೆ, ರಕ್ಷಾಬಂಧನ, ಗೋಕುಲಾಷ್ಟಮಿ ಮುಂತಾದ ಧಾರ್ಮಿಕ ಹಬ್ಬಗಳನ್ನು ಆಚರಿಸಲಾಗುತ್ತದೆ. ಅದೇ ರೀತಿ ಈ ತಿಂಗಳಿನಲ್ಲಿ ಒಂದಷ್ಟು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ದಿನಾಚರಣೆಗಳನ್ನು ಸಹ ಆಚರಿಸಲಾಗುತ್ತದೆ. ಒಂದು ನಿರ್ದಿಷ್ಟ ಉದ್ದೇಶವನ್ನಿಟ್ಟುಕೊಂಡು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ದಿನಾಚರಣೆಗಳನ್ನು ಆಚರಿಸಲಾಗುತ್ತದೆ. ಹಾಗಿದ್ದರೆ ಸ್ವಾತಂತ್ರ್ಯ ದಿನಾಚರಣೆಯಿಂದ ಹಿಡಿದು ಸಂಸ್ಕೃತ ದಿನದವರೆಗೆ ಆಗಸ್ಟ್‌ನಲ್ಲಿ ಯಾವೆಲ್ಲಾ ರಾಷ್ಟ್ರೀಯ ಅಂತಾರಾಷ್ಟ್ರೀಯ ದಿನಾಚರಣೆಗಳನ್ನು (Important days of August) ಆಚರಿಸಲಾಗುತ್ತದೆ ಎಂಬ ಮಾಹಿತಿ ಇಲ್ಲಿದೆ.

ಆಗಸ್ಟ್‌ ತಿಂಗಳ ರಾಷ್ಟ್ರೀಯ, ಅಂತಾರಾಷ್ಟ್ರೀಯ ದಿನಾಚರಣೆಗಳ ಪಟ್ಟಿ:

  • ಆಗಸ್ಟ್‌ 1, 2025 – ವಿಶ್ವ ಶ್ವಾಸಕೋಶ ಕ್ಯಾನ್ಸರ್‌ ದಿನ
  • ಆಗಸ್ಟ್‌ 1, 2025 – ವಿಶ್ವ ಸ್ತನ್ಯಪಾನ ವಾರ
  • ಆಗಸ್ಟ್‌ 1, 2025 – ವರ್ಲ್ಡ್‌ ವೈಡ್‌ ವೆಬ್‌ ದಿನ
  • ಆಗಸ್ಟ್‌ 3, 2025 –  ಸ್ನೇಹಿತರ ದಿನ
  • ಆಗಸ್ಟ್‌ 3, 2025 – ರಾಷ್ಟ್ರೀಯ ಕಲ್ಲಂಗಡಿ ದಿನ
  • ಆಗಸ್ಟ್‌ 6, 2025 – ಹಿರೋಷಿಮಾ ದಿನ
  • ಆಗಸ್ಟ್‌ 7, 2025 – ರಾಷ್ಟ್ರೀಯ ಕೈಮಗ್ಗ ದಿನ
  • ಆಗಸ್ಟ್‌ 8, 2025 -ಭಾರತ ಬಿಟ್ಟು ತೊಳಗಿ ಚಳುವಳಿ ದಿನ
  • ಆಗಸ್ಟ್‌ 9, 2025 – ರಾಷ್ಟ್ರೀಯ ಪುಸ್ತಕ ಪ್ರೇಮಿಗಳ ದಿನ
  • ಆಗಸ್ಟ್‌ 9, 2025 – ವಿಶ್ವ ಸಂಸ್ಕೃತ ದಿನ
  • ಆಗಸ್ಟ್‌ 10, 2025 – ವಿಶ್ವ ಸಿಂಹ ದಿನ
  • ಆಗಸ್ಟ್‌ 10, 2025 – ವಿಶ್ವ ಜೈವಿಕ ಇಂಧನ ದಿನ
  • ಆಗಸ್ಟ್‌ 12, 2025 – ಅಂತಾರಾಷ್ಟ್ರೀಯ ಯುವ ದಿನ
  • ಆಗಸ್ಟ್‌ 12, 2025 – ವಿಶ್ವ ಆನೆ ದಿನ
  • ಆಗಸ್ಟ್‌ 13, 2025 – ಎಡಗೈ ಜನರ ದಿನ
  • ಆಗಸ್ಟ್‌ 13, 2025 – ಅಂಗಾಂಗ ದಿನ
  • ಆಗಸ್ಟ್‌ 15, 2025 – ಸ್ವಾತಂತ್ರ್ಯ ದಿನಾಚರಣೆ
  • ಆಗಸ್ಟ್‌ 19, 2025 – ವಿಶ್ವ ಛಾಯಾಗ್ರಹಣ ದಿನ
  • ಆಗಸ್ಟ್‌ 19, 2025 – ವಿಶ್ವ ಮಾನವೀಯ ದಿನ
  • ಆಗಸ್ಟ್‌ 20, 2025 – ವಿಶ್ವ ಸೊಳ್ಳೆ ದಿನ
  • ಆಗಸ್ಟ್‌ 23, 2025 – ಇಸ್ರೋ ದಿನ
  • ಆಗಸ್ಟ್‌ 26, 2025 –  ಮಹಿಳಾ ಸಮಾನತೆ ದಿನ
  • ಆಗಸ್ಟ್‌ 26, 2025 –  ಅಂತಾರಾಷ್ಟ್ರೀಯ ನಾಯಿ ದಿನ
  • ಆಗಸ್ಟ್‌ 29, 2025 –  ರಾಷ್ಟ್ರೀಯ ಕ್ರೀಡಾ ದಿನ
  • ಆಗಸ್ಟ್‌ 29, 2025 –  ಪರಮಾಣು ಪರೀಕ್ಷೆ ವಿರೋಧಿ ದಿನ
  • ಆಗಸ್ಟ್‌ 30, 2025 – ಸಣ್ಣ ಕೈಗಾರಿಕಾ ದಿನ

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ