Health Tips: ಮೂತ್ರಪಿಂಡಗಳ ರಕ್ಷಣೆಗೆ ಈ ಆಹಾರಗಳಿಂದ ದೂರವಿರಿ

| Updated By: Pavitra Bhat Jigalemane

Updated on: Jan 13, 2022 | 3:47 PM

ಹೃದಯದಂತೆ ಮನುಷ್ಯನ ಜೀವಿತಾವಧಿವರೆಗೂ 24 ಗಂಟೆಯೂ ಕೆಲಸ ಮಾಡಿ  ಆರೋಗ್ಯವನ್ನು ರಕ್ಷಿಸುತ್ತದೆ. ಹೀಗಾಗಿ ಕಿಡ್ನಿಯ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅಗತ್ಯವಾಗಿದೆ. ಇದಕ್ಕೆ ಸೇವಿಸುವ ಆಹಾರ ಅತಿ ಮುಖ್ಯವಾಗಿರುತ್ತದೆ.

Health Tips: ಮೂತ್ರಪಿಂಡಗಳ ರಕ್ಷಣೆಗೆ ಈ ಆಹಾರಗಳಿಂದ ದೂರವಿರಿ
ಸಾಂಕೇತಿಕ ಚಿತ್ರ
Follow us on

ದೇಹದ ಪ್ರತಿಯೊಂದು ಅಂಗವೂ  ಮುಖ್ಯವಾಗಿದೆ. ಅವುಗಳ ಯೋಗಕ್ಷೇಮ ಕಾಪಾಡಿಕೊಂಡರೆ ಮಾತ್ರ ಆರೋಗ್ಯಯುತ ಜೀವನವನ್ನು ನಡೆಸಬಹುದು. ದೇಹದಲ್ಲಿನ ಒಂದು ಅಂಗದ ಕಾರ್ಯದಲ್ಲಿ ವ್ಯತ್ಯಾಸವಾದರೂ ಇಡೀ ದೇಹದ ಕಾರ್ಯವ್ಯವಸ್ಥೆ ಹದಗೆಡುತ್ತದೆ. ಅನಾರೋಗ್ಯ ಕಾಡುತ್ತದೆ. ಅಂತಹ ಪ್ರಮುಖ ಅಂಗಗಳಲ್ಲಿ ಕಿಡ್ನಿ ಕೂಡ ಒಂದು. ಕಿಡ್ನಿ ಅಥವಾ ಮೂತ್ರಪಿಂಡಗಳು ದೇಹನಲ್ಲಿನ ಅನಗತ್ಯ ಅಂಶಗಳನ್ನು ಮೂತ್ರದ ಮೂಲಕ ದೇಹದಿಂದ ಹೊರಹಾಕಿ ಸ್ವಾಸ್ಥ್ಯವನ್ನು ಕಾಪಾಡುತ್ತದೆ. ಒಂದು ರೀತಿ ದೇಹದಲ್ಲಿನ ವಿಷವನ್ನು ಹೊರಹಾಕುತ್ತದೆ ಎಂದರೆ ತಪ್ಪಾಗಲಾರದು. ಹೃದಯದಂತೆ ಮನುಷ್ಯನ ಜೀವಿತಾವಧಿವರೆಗೂ 24 ಗಂಟೆಯೂ ಕೆಲಸ ಮಾಡಿ  ಆರೋಗ್ಯವನ್ನು ರಕ್ಷಿಸುತ್ತದೆ. ಹೀಗಾಗಿ ಕಿಡ್ನಿಯ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅಗತ್ಯವಾಗಿದೆ. ಇದಕ್ಕೆ ಸೇವಿಸುವ ಆಹಾರ ಅತಿ ಮುಖ್ಯವಾಗಿರುತ್ತದೆ.

ಕಿಡ್ನಿ ಸಮಸ್ಯೆಗಳು ಆಹಾರದಲ್ಲಿ ವ್ಯತ್ಯಾಸವಾದರೆ ಮಾತ್ರ ಕಾಣಿಸಿಕೊಳ್ಳುತ್ತದೆ. ಕೆಲವು ಆಹಾರಗಳೇ ಮೂತ್ರಪಿಂಡಗಳಿಗೆ ಸಮಸ್ಯೆಗಾಗಿ ಪರಿಣಮಿಸುತ್ತದೆ. ಹಾಗಾದರೆ  ಕಿಡ್ನಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಯಾವೆಲ್ಲಾ ಆಹಾರಗಳಿಂದ ದೂರವಿರಬೇಕು?

ಅತಿಯಾದ ಉಪ್ಪಿನ ಸೇವನೆ
ಉಪ್ಪು ದೇಹಕ್ಕೆ ಅವಶ್ಯಕ ಆದರೆ ಅತಿಯಾದರೆ ನಿಮ್ಮ ಮೂತ್ರಪಿಂಡಗಳಿಗೆ ಹಾನಿಯುಂಟು ಮಾಡುತ್ತದೆ. ಆದ್ದರಿಂದ ಅತಿಯಾದ ಉಪ್ಪಿನ ಸೇವನೆ ಒಳ್ಳೆಯದಲ್ಲ. ಆಹಾರಕ್ಕೆ ಸೇರಿಸಿದ ಉಪ್ಪಿನ ಹೊರತಾಗಿ ಮೇಲಿನಿಂದ ಉಪ್ಪು ಹಾಕಿಕೊಳ್ಳುವ ಅಭ್ಯಾಸವಿದ್ದರೆ ಅದನ್ನು ತಪ್ಪಿಸಿ.

ಕೆಂಪು ಮಾಂಸ
ಕೆಂಪು ಮಾಂಸವನ್ನು ಅಪರೂಪಕ್ಕೆ ಸೇವಿಸುವುದು ಉತ್ತಮ. ಆದರೆ ಪ್ರತಿದಿನ ಸೇವನೆ ಮಾಡುವುದರಿಂದ ಚಯಾಪಚಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಅದೇ ರೀತಿ ಮೂತ್ರಪಿಂಡಗಳ ಮೇಲೂ ಇದು ಪರಿಣಾಮ ಬೀರುತ್ತದೆ. ಆದ್ದರಿಂದ ಕೆಂಪು ಮಾಂಸದ ಸೇವನೆ ಕಿಡ್ನಿಯ ಆರೋಗ್ಯಕ್ಕೆ ಉತ್ತಮವಲ್ಲ ಎನ್ನುತ್ತಾರೆ ತಜ್ಞರು.

ಸಿಹಿ ಸೇವನೆ
ಆಹಾರದಲ್ಲಿನ ಸಿಹಿಯ ಹೊರತಾಗಿ ಸಂಸ್ಕರಿಸಿದ  ಸಿಹಿಯನ್ನು ಹೆಚ್ಚಾಗಿ ಸೇವಿಸಿದರೆ ನಿಮ್ಮ ಮೂತ್ರಪಿಂಡಕ್ಕೆ ಒಳ್ಳೆಯದಲ್ಲ. ಉದಾಹರಣೆಗೆ ಸಿಹಿ ತಂಪು ಪಾನೀಯ, ಬೇಕರಿ ತಿನಿಸಗಳು ನಿಮ್ಮ ಕಿಡ್ನಿಗೆ ಹಾನಿಯುಂಟು ಮಾಡುತ್ತದೆ. ಆದ್ದರಿಂದ ಅಂತಹ ಆಹಾರಗಳಿಂದ ದೂರವಿರಿ.

ಆಲ್ಕೋಹಾಲ್​
ಆಲ್ಕೋಹಾಲ್ ಸೇವನೆಯಿಂದ ನಿಮ್ಮ ಮೂತ್ರಪಿಂಡ ವೈಫಲ್ಯ ಸಂಭವಿಸುತ್ತದೆ. ಅಲ್ಲದೆ ನಿಮ್ಮ ಯಕೃತ್ತಿನ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಆದ್ದರಿಂದ ನಿಮ್ಮ ಕಿಡ್ನಿ ಹಾಗೂ ದೇಹದ ಎಲ್ಲ ಅಂಗಗಳ ರಕ್ಷಣೆಗೆ ಆಲ್ಕೋಹಾಲ್​ನಿಂದ ದೂರವಿರುವುದೇ ಒಳಿತು.​

ಕಾಫಿ
ಕೆಲವರಿಗೆ ಟೆನ್ಷನ್​, ಒತ್ತಡ, ಖುಷಿ  ಹೀಗೆ ಎಲ್ಲಾ ಸಮಯದಲ್ಲೂ ಕಾಫಿ ಕುಡಿಯುವ ಅಭ್ಯಾಸವಿರುತ್ತದೆ.  ಕಾಫಿಯಲ್ಲಿನ ಕೆಫಿನ್​ ಅಂಶ ನಿಮ್ಮ ಕಿಡ್ನಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆದ್ದರಿಂದ ಕಾಫಿ ಪ್ರಿಯರು ಕೊಂಚ ಹಿಡಿತದಲ್ಲಿದ್ದರೆ ನಿಮ್ಮ ಮೂತ್ರಪಿಂಡಗಳ ಆರೋಗ್ಯಕ್ಕೆ ಒಳ್ಳೆಯದು

ಈ ಆಹಾರಗಳ ಹೊರತಾಗಿಯೂ ಇನ್ನೂ ಕೆಲವು ಆಹಾರಗಳ ಅತಿಯಾದ ಸೇವನೆ ಕಿಡ್ನಿ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಮುಖ್ಯವಾಗಿ ಸಮಸ್ಯೆ ಉದ್ಭವಿಸುವುದು ಈ ಮೇಲಿನ ಆಹಾರಗಳಿಂದಲೇ ಹೀಗಾಗಿ ಆಹಾರ ಸೇವನೆಯ ಮೊದಲು ಕೊಂಚ ಎಚ್ಚರವಿರಲಿ.

ಇದನ್ನೂ ಓದಿ:

Skin Care Tips: ಟೀ ಟ್ರೀ ಎಣ್ಣೆಯ ಬಳಕೆಯಿಂದ ಚರ್ಮಕ್ಕೆ ಆಗುವ ಪ್ರಯೋಜನಗಳೇನು ಗೊತ್ತಾ? ಇಲ್ಲಿದೆ ಮಾಹಿತಿ