ಸಾಮಾನ್ಯವಾಗಿ ಮನೆಯಲ್ಲಿ ಹಿರಿಯರು ಬೆಳಗ್ಗೆ ಸೂರ್ಯೋದಯಕ್ಕೆ ಮುಂಚಿತವಾಗಿ ಏಳುವ ಅಭ್ಯಾಸವನ್ನು ರೂಢಿಯಲ್ಲಿಟ್ಟುಕೊಂಡಿರುತ್ತಾರೆ. ಜತೆಗೆ ಮನೆಯ ಇತರ ಸದಸ್ಯರಿಗೂ ಕೂಡಾ ಬೆಳಿಗ್ಗೆ ಬೇಗ ಏಳಲು ಸಲಹೆ ನೀಡುತ್ತಾರೆ. ಇದರಿಂದ ಇಡೀ ದಿನ ದೇಹ ಸಧೃಢವಾಗಿರುತ್ತದೆ ಮತ್ತು ಆಲಸ್ಯವನ್ನು ದೂರ ಮಾಡಿ ಚಟುವಟಿಕೆಯಿಂದ ಕೂಡಿರಲು ಸಹಾಯಕವಾಗುತ್ತದೆ. ಹಾಗಿದ್ದರೆ ಬೆಳಿಗ್ಗೆ ಏದ್ದೇಳಲು ಯಾವ ಸಮಯ ಒಳ್ಳೆಯದು?
ಆಯುರ್ವೇದ ತಜ್ಞರಾದ ಡಾ. ದೀಕ್ಷಾ ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಂ ಅಧಿಕೃತ ಖಾತೆಯಲ್ಲಿ ಈ ಕುರಿತಾಗಿ ಪೋಸ್ಟ್ ಹಂಚಿಕೊಂಡಿದ್ದಾರೆ. ಆಯುರ್ವೇದದ ಪ್ರಕಾರ ಸೂರ್ಯೋದಯ ಆಗುವ ಮುಂಚೆಯೇ ಎದ್ದೇಳುವುದು ಆರೋಗ್ಯಕ್ಕೆ ಉತ್ತಮ ಎಂದು ಅವರು ಸಲಹೆ ನೀಡಿದ್ದಾರೆ. ಸಾಮಾನ್ಯವಾಗಿ ಬ್ರಹ್ಮ ಮೂಹೂರ್ತದಲ್ಲಿ ಬೆಳಿಗ್ಗೆ ಏಳುವುದು ಒಳ್ಳೆಯದು. ಡಾ. ದೀಕ್ಷಾ ಹೇಳುವ ಪ್ರಕಾರ, ಬ್ರಹ್ಮ ಮುಹೂರ್ತವು ಶುಭ ಅವಧಿಯಾಗಿದೆ. ಸೂರ್ಯೋದಯಕ್ಕೆ 1 ಗಂಟೆ 36 ನಿಮಿಷದ ಮೊದಲು ಬ್ರಹ್ಮ ಮುಹೂರ್ತ ಪ್ರಾರಂಭವಾಗುತ್ತದೆ ಎಂದು ಅವರು ಹೇಳಿದ್ದಾರೆ.
ಏಕೆ ಬ್ರಹ್ಮ ಮುಹೂರ್ತದಲ್ಲಿ ಎದ್ದೇಳಬೇಕು?
ತಜ್ಞರು ಹೇಳುವ ಪ್ರಕಾರ ಧ್ಯಾನ ಮತ್ತು ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳಲು ಈ ಬ್ರಹ್ಮ ಮುಹೂರ್ತ ಒಳ್ಳೆಯ ಸಮಯ. ವಿದ್ಯಾರ್ಥಿಗಳಲ್ಲಿ ನೆನಪಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಸಹಾಯಕವಾಗುತ್ತದೆ. ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ. ಏಕಾಗ್ರತೆಯ ಜತೆಗೆ ಕೆಲಸದಲ್ಲಿ ಹೆಚ್ಚು ಆಸಕ್ತಿ ಹುಟ್ಟುತ್ತದೆ. ಜತೆಗೆ ಮಾನಸಿಕ ಒತ್ತಡದಿಂದ ದೂರವಿರಬಹುದು.
ಬೆಳಿಗ್ಗೆಯ ಸಮಯ ಧ್ಯಾನ ಮಾಡಲು ಮತ್ತು ಪುಸ್ತಕಗಳನ್ನು ಓದಲು ಒಳ್ಳೆಯ ಸಮಯ. ಸೂರ್ಯೋದಯಕ್ಕೂ ಮುಂಚೆ ಬ್ರಹ್ಮ ಮುಹೂರ್ತದಲ್ಲಿ ಎದ್ದೇಳುವ ಸಮಯ ಒಳ್ಳೆಯದು. ಬೆಳಗ್ಗಿನ ಸುಂದರ ಪ್ರಕೃತಿ ಜತೆಗೆ ಶುದ್ಧ ಗಾಳಿಯಲ್ಲಿ ಉಸಿರಾಟ ನಡೆಸುವುದು ಆರೋಗ್ಯವನ್ನು ಸುಧಾರಿಸುತ್ತದೆ ಎಂದು ವೈದ್ಯರು ಹೇಳಿದ್ದಾರೆ.
ಪ್ರತಿದಿನ 6:30 ರಿಂದ 7 ಗಂಟೆಯ ಒಳಗೆ ಎದ್ದೇಳಲು ಪ್ರಯತ್ನಿಸಿ. ಸೂರ್ಯೋದಯಕ್ಕೂ ಮುಂಚೆ ಎಚ್ಚರಗೊಳ್ಳುವುದರಿಂದ ಸಕಾರಾತ್ಮಕತೆ ಮತ್ತು ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಪ್ರಯೋಜನವಾಗುತ್ತದೆ. ಜೀರ್ಣಕ್ರಿಯೆ ಜತೆಗೆ ಆರೋಗ್ಯವನ್ನು ಸುಧಾರಿಸಲು ಸಹಾಯವಾಗುತ್ತದೆ. ಶಿಸ್ತು, ಶಾಂತಿ, ದೀರ್ಘಾಯುಷ್ಯವನ್ನು ಹೆಚ್ಚಿಸುತ್ತದೆ ಎಂದು ಡಾ. ದೀಕ್ಷಾ ಹೇಳಿದ್ದಾರೆ.
ಇದನ್ನೂ ಓದಿ:
ವಿಯೆಟ್ನಾಂ ಯೋಗ: ಬುದ್ಧನ ನಾಡಲ್ಲಿ ಯೋಗ ಕಲಿಸುವ ಕರ್ನಾಟಕದ ಯೋಗ ಶಿಕ್ಷಕರು ಬರೆಯುತ್ತಾರೆ..
Health Tips: ಆಸಿಡಿಟಿ ನಿವಾರಣೆಗೆ ಯೋಗಾಭ್ಯಾಸ; ಯಾವ ಯೋಗ ಭಂಗಿ ಸೂಕ್ತ?