Chanakya Niti: ಈ ನಾಲ್ಕು ಅಂಶಗಳು ಕಷ್ಟಕಾಲದಲ್ಲಿ ಆಪ್ತ ಸ್ನೇಹಿತನಂತೆ ಸಹಾಯ ಮಾಡುತ್ತದೆ; ಅದೇನೆಂದು ತಿಳಿದುಕೊಳ್ಳಿ

ಈ ನಾಲ್ಕು ವಿಷಯಗಳನ್ನು ಚಾಣಕ್ಯ ನಿಜವಾದ ಸ್ನೇಹಿತ ಎಂದೇ ಗುರುತಿಸಿದ್ದಾರೆ. ಕಷ್ಟದ ಸಂದರ್ಭದಲ್ಲಿ ಬಳಕೆಯಾಗುತ್ತದೆ ಹಾಗಾಗಿ ಇವನ್ನು ಕೂಡಿಟ್ಟುಕೊಳ್ಳಿ ಎಂದೇ ತಿಳಿಸಿದ್ದಾರೆ.

Chanakya Niti: ಈ ನಾಲ್ಕು ಅಂಶಗಳು ಕಷ್ಟಕಾಲದಲ್ಲಿ ಆಪ್ತ ಸ್ನೇಹಿತನಂತೆ ಸಹಾಯ ಮಾಡುತ್ತದೆ; ಅದೇನೆಂದು ತಿಳಿದುಕೊಳ್ಳಿ
ಚಾಣಕ್ಯ
Follow us
TV9 Web
| Updated By: ganapathi bhat

Updated on: Jun 27, 2021 | 8:39 PM

ರಾಜಕೀಯ, ಆರ್ಥಿಕತೆ, ಸಮಾಜಶಾಸ್ತ್ರ ಈ ಎಲ್ಲಾ ವಿಚಾರಗಳಲ್ಲಿ ಕೂಡ ಚಾಣಕ್ಯ ಅಪಾರ ಜ್ಞಾನ ಹೊಂದಿದ್ದವರು. ಅದನ್ನು ಸಮಾಜಕ್ಕೆ ನೀಡಿದವರು. ತಮ್ಮ ಅನುಭವಗಳನ್ನು ಜನತೆಗೆ ನೀಡಿದವರು. ಚಾಣಕ್ಯನ ಚಾಣಕ್ಯ ನೀತಿ ಎಂಬ ಜ್ಞಾನಭಂಡಾರ ಎಲ್ಲರಿಗೂ ಮಾದರಿ. ಜೀವನದ ಪಾಠಶಾಲೆ. ಈ ಪುಸ್ತಕದ ಅಂಶಗಳು ಬದುಕಿನಲ್ಲಿ ನಾವು ಹೇಗಿರಬೇಕು, ತೊಂದರೆಗಳು ಬಂದಾಗ ಹೇಗೆ ಎದುರಿಸಬೇಕು ಎಂದು ತಿಳಿಸುತ್ತದೆ. ಯಶಸ್ವಿ ಬದುಕಿಗೆ ಮಾರ್ಗದರ್ಶಿಯಾಗಿ ಕಾಣುತ್ತದೆ.

ಈ ಬಾರಿಯ ನಮ್ಮ ಚಾಣಕ್ಯ ನೀತಿ ವಿವರಣೆಯಲ್ಲಿ, ಬದುಕಿನ ಸಮಸ್ಯೆಗಳನ್ನು ಎದುರಿಸಲು ಬೇಕಾದ ಅಂತಹ ಕೆಲವು ಮುಖ್ಯ ಅಂಶಗಳ ಬಗ್ಗೆ ತಿಳಿದುಕೊಳ್ಳೋಣ. ಈ ನಾಲ್ಕು ವಿಷಯಗಳನ್ನು ಚಾಣಕ್ಯ ನಿಜವಾದ ಸ್ನೇಹಿತ ಎಂದೇ ಗುರುತಿಸಿದ್ದಾರೆ. ಕಷ್ಟದ ಸಂದರ್ಭದಲ್ಲಿ ಬಳಕೆಯಾಗುತ್ತದೆ ಹಾಗಾಗಿ ಇವನ್ನು ಕೂಡಿಟ್ಟುಕೊಳ್ಳಿ ಎಂದೇ ತಿಳಿಸಿದ್ದಾರೆ.

ಆಹಾರ/ ಧಾನ್ಯ: ಮನೆಯಲ್ಲಿ ಆಹಾರ ದಾಸ್ತಾನು ಇರುವುದು ಬಹಳ ಅಗತ್ಯ. ಯಾವುದೇ ಕಷ್ಟದ ಸಂದರ್ಭ ಎದುರಾದರೂ ಆಹಾರಕ್ಕೆ ಬರ ಉಂಟಾಗಬಾರದು. ಹೊಟ್ಟೆಗೆ ಉಣ್ಣಲು ಸ್ವಲ್ಪ ಊಟವಾದರೂ ಸಿಗಬೇಕು. ಎಂತಹ ಬಡವನೂ ಹಸಿವಿನಿಂದ ಇರಬಾರದು. ಹಾಗಾಗಿ ಆಹಾರ ಕೂಡಿಡುವುದು ಮುಖ್ಯ. ಇದರಿಂದ ಮನೆಯಲ್ಲಿ ಲಕ್ಷ್ಮೀ ನೆಲೆಸಿದಂತೆ. ಅಷ್ಟೇ ಅಲ್ಲ. ಹೀಗೆ ಆಹಾರ ಇಟ್ಟುಕೊಂಡು, ಬಡವರು ಅಥವಾ ಭಿಕ್ಷಾಟನೆ ಮಾಡುವವರು ಮನೆಗೆ ಬಂದಾಗ ಅವರಿಗೂ ಆಹಾರವನ್ನು ಹಂಚಬೇಕು. ಊಟ ಹಂಚಿ ತಿನ್ನುವುದು ಬಹುದೊಡ್ಡ ಪುಣ್ಯ.

ಧನ: ಧನ, ಹಣ ಅಥವಾ ಅಗತ್ಯ ಸಂಪತ್ತು ಎಂಬುದು ಆಚಾರ್ಯ ಚಾಣಕ್ಯನ ಪ್ರಕಾರ ಒಬ್ಬಾತನ ನಿಜ ಸ್ನೇಹಿತ. ಒಬ್ಬ ವ್ಯಕ್ತಿಯ ಬಳಿ ಹಣ ಇದ್ದರೆ ಆತನ ಸುತ್ತಲೂ ಹಲವು ಮಂದಿ ಇರುತ್ತಾರೆ. ಹಣ ಇಲ್ಲ ಎಂದಾದರೆ ಸ್ವಂತ ಆಪ್ತ ಗೆಳೆಯನನ್ನೇ ಆಪ್ತರು ಕೂಡ ಮರೆತುಬಿಡಬಹುದು. ಹೀಗಾಗಿ, ಅಗತ್ಯಕ್ಕೆ ತಕ್ಕಷ್ಟು ಹಣ ಕೂಡಿಟ್ಟುಕೊಂಡರೆ ಸಮಸ್ಯೆಗಳನ್ನು ದಾಟಿ ಮುಂದೆ ಬರಬಹುದು.

ಗುರುವಿನ ನೀತಿಪಾಠ: ಗುರು ಎಂಬ ಒಬ್ಬ ವ್ಯಕ್ತಿ ನಮ್ಮ ಜೊತೆಗೆ ಇರಲೇಬೇಕು. ಗುರು ಎಂಬಾತ ಇಲ್ಲದೆ ನಾವು ಸರಿಯಾದ ದಾರಿಯಲ್ಲಿ, ಯಶಸ್ವಿಯಾಗಿ ಮುಂದೆ ಸಾಗಲು ಸಾಧ್ಯವಿಲ್ಲ. ಗುರುವಿನ ನೀತಿಪಾಠಗಳನ್ನು ಬೇಕಾದ ಸಂದರ್ಭದಲ್ಲಿ ಎಲ್ಲಾ ಪಡೆಯಬೇಕು. ಅಥವಾ ಕನಿಷ್ಠ ಅದನ್ನು ನೆನಪಿಸಿಕೊಂಡು ಮುಂದೆ ಹೆಜ್ಜೆ ಇಡಬೇಕು. ಜೀವನದ ಸಂಕಷ್ಟ, ಸವಾಲುಗಳನ್ನು ಎದುರಿಸಲು ಗುರು ಸಹಾಯ ಮಾಡುತ್ತಾನೆ. ಹೀಗಾಗಿ, ಗುರುವಿನ ಮಾತುಗಳನ್ನು ಸ್ವೀಕರಿಸಿ, ಅನುಸರಿಸುತ್ತಾ ನಡೆಯಬೇಕು.

ಔಷಧ: ಮನೆಯಲ್ಲಿ ಅಗತ್ಯ ಬೇಕಾಗುವ ಔಷಧಗಳಿಗೆ ಎಂದೂ ಕೊರತೆ ಆಗಬಾರದು. ಸಾಮಾನ್ಯ ಆರೋಗ್ಯ ಸಮಸ್ಯೆಗಳನ್ನು ಎದುರಿಸಲು ಮನೆಯಲ್ಲಿ ಕೆಲವು ಔಷಧಗಳನ್ನು ಇಟ್ಟುಕೊಂಡಿರಬೇಕು. ಯಾವುದೇ ಆರೋಗ್ಯ ಸಮಸ್ಯೆಯನ್ನು ಕೂಡಲೇ ಗಮನಿಸಿ ಅದಕ್ಕೆ ಪ್ರಥಮ ಚಿಕಿತ್ಸೆ ಕೊಡಿಸುವುದರಿಂದ ಮುಂದೆ ಆಗಬಹುದಾದ ದೊಡ್ಡ ತೊಂದರೆಗಳನ್ನು ತಪ್ಪಿಸಬಹುದು. ಹೀಗಾಗಿ, ಔಷಧ ಕೂಡ ಕಷ್ಟದಿಂದ ಮುನ್ನುಗ್ಗಲು ಸಹಕಾರಿ.

ಇದನ್ನೂ ಓದಿ: Chanakya Niti: ಈ ವಿಚಾರಗಳನ್ನು ಗಂಡ ತನ್ನ ಹೆಂಡತಿಯ ಬಳಿ ಹೇಳಿಕೊಳ್ಳಬಾರದು; ಚಾಣಕ್ಯ ನೀತಿ ಇಲ್ಲಿದೆ

Chanakya Niti: ಈ ಗುಣಗಳನ್ನು ಹೊಂದಿರುವ ವ್ಯಕ್ತಿ ಎಲ್ಲರ ಇಷ್ಟದ ನಾಯಕನಾಗುತ್ತಾನೆ; ಚಾಣಕ್ಯನ ವಿವರಣೆ ಇಲ್ಲಿದೆ

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್