ನಾವು ಆಗಾಗ್ಗೆ ವಿವಿಧ ಆಹಾರ ಪದಾರ್ಥಗಳಲ್ಲಿ ಹಾಕುವ ಪಲಾವ್ ಎಲೆಗಳು (Bay leaves) ವಿವಿಧ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಎನ್ನುವ ಬಗ್ಗೆ ನಿಮಗೆ ತಿಳಿದಿದೆಯೇ? ಹಾಗಾದರೆ ಪಲಾವ್ ಎಲೆಯಲ್ಲಿರುವ ಆರೋಗ್ಯ ಪ್ರಯೋಜಗಳ ಬಗ್ಗೆ ನೋಡೋಣಾ. ನಮ್ಮ ಭಾರತೀಯ ಪಾಕಪದ್ಧತಿಯು ಮಸಾಲೆಗಳಿಂದ ತುಂಬಿರುವುದಕ್ಕೆ ಒಂದು ಕಾರಣವಿದೆ. ಈ ರುಚಿಕರವಾದ ಮಸಾಲೆಗಳು ಆಹಾರದ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ನಮ್ಮ ಆರೋಗ್ಯಕ್ಕೆ ವಿವಿಧ ಪ್ರಯೋಜನಗಳನ್ನು ನೀಡುತ್ತವೆ. ಪಲಾವ್ ಎಲೆಯಲ್ಲಿನ ಪೌಷ್ಟಿಕಾಂಶದ ಬಗ್ಗೆ ನಿಮಗೆ ತಿಳಿದಿದೆಯೇ? ತೇಜ್ ಪತ್ತಾ ಎಂದು ಕರೆಯಲ್ಪಡುವ ಈ ಎಲೆಗಳು ಭಾರತೀಯ ಪಾಕಪದ್ಧತಿ ಪ್ರಮುಖ ಭಾಗವಾಗಿದೆ. ಬಿರಿಯಾನಿಯಿಂದ ಹಿಡಿದು ಸೂಪ್‌ಗಳು, ಪಲಾವ್ ಹಾಗೂ ಅನೇಕ ಬಗೆಯ ಮಸಾಲೆಯುಕ್ತ ಭಕ್ಷ್ಯಗಳಲ್ಲಿ ಈ ಎಲೆಯನ್ನು ಸೇರಿಸಲಾಗುತ್ತದೆ. ಇವುಗಳು ಭಕ್ಷ್ಯಗಳಿಗೆ ಸುಗಂಧವನ್ನು ಸೇರಿಸುವುದರ ಜೊತೆಗೆ ಇವುಗಳು ಹಲವಾರು ಪೋಷಕಾಂಶಗಳನ್ನು ಹೊಂದಿದೆ. ಇದು ಔಷಧಿಗಳ ರೂಪದಲ್ಲಿಯೂ ಕಾರ್ಯನಿರ್ವಹಿಸುತ್ತದೆ. ಪಲಾವ್ ಎಲೆಗಳು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ, ಉಸಿರಾಟದ ಸಮಸ್ಯೆಗಳಿಗೆ ಚಿಕಿತ್ಸೆ ನೀಡುತ್ತದೆ, ವಿವಿಧ ಶಿಲೀಂಧ್ರಗಳ ಸೋಂಕಿನ ವಿರುದ್ಧ ಹೋರಾಡುತ್ತದೆ, ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ. ನ್ಯೂಟ್ರೀಷ್ಯನಿಸ್ಟ್ ಲೋವ್ನಿತ್ ಬಾತ್ರಾ ಅವರು ತಮ್ಮ ಇನ್ಟಾಗ್ರಾಮ್ ಪೇಜ್‌ನಲ್ಲಿ ಪಲಾವ್ ಎಲೆಯ ಕೆಲವು ಅದ್ಭುತ ಪ್ರಯೋಜನಗಳ ಬಗ್ಗೆ ಹಂಚಿಕೊಂಡಿದ್ದಾರೆ.
1. ಈ ಎಲೆಗಳು ಪಾರ್ಥೆನೊಲೈಡ್ ಎಂಬ ವಿಶಿಷ್ಟ ಫೈಟೊನ್ಯೂಟ್ರಿಯೆಂಟ್‌ನ್ನು ಹೊಂದಿರುತ್ತವೆ. ಇದು ಉರಿಯೂತವನ್ನು ತ್ವರಿತವಾಗಿ ಕಡಿಮೆ ಮಾಡುತ್ತದೆ.
2. ಪಲಾವ್ ಎಲೆಯಲ್ಲಿನ ಲಿನೂಲ್ ಅಂಶವು ನಮ್ಮ ದೇಹದಲ್ಲಿನ ಒತ್ತಡದ ಹಾರ್ಮೋನುಗಳ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
3. ಬೇ ಎಲೆಗಳು ವಿಟಮಿನ್ ಎ ಯ ಅತ್ಯುತ್ತಮ ಮೂಲವಾಗಿದೆ, ಇದು ಕಣ್ಣಿನ ಆರೋಗ್ಯಕ್ಕೆ ಮತ್ತು ಚರ್ಮದ ಆರೋಗ್ಯಕ್ಕೆ ಮುಖ್ಯವಾಗಿದೆ.
ಇದನ್ನೂ ಓದಿ: Bay Leaves Benefits: ಅಡುಗೆಗೆ ಬಳಸುವ ಬೇ ಎಲೆ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಗೊತ್ತಾ? ಇಲ್ಲಿದೆ ಮಾಹಿತಿ
4. ಕೆಫೀನ್ ಆಮ್ಲ ಮತ್ತು ರುಟಿನ್ ಎರಡೂ ಪ್ರಮುಖ ಸಾವಯವ ಸಂಯುಕ್ತಗಳಾಗಿವೆ, ಇದು ಪಲಾವ್ ಎಲೆಗಳಲ್ಲಿ ಕಂಡುಬರುತ್ತವೆ. ಇದು ನಿಮ್ಮ ಹೃದಯದ ಆರೋಗ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
5. ಪಲಾವ್ ಎಲೆಗಳು ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡಲು ಮತ್ತು ಅದನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.
6. ಪಲಾವ್ ಎಲೆಗಳು ಮಾತ್ರವಲ್ಲದೆ ಹಸಿ ಅರಶಿನ ಕೂಡಾ ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು, ವಿಶೇಷವಾಗಿ ಚಳಿಗಾಲದಲ್ಲಿ ಎಂದು ಲೋವ್ನಿತ್ ಬಾತ್ರಾ ಅವರು ಹೇಳುತ್ತಾರೆ.
Published On - 6:42 pm, Tue, 21 February 23