ಪರೀಕ್ಷೆ ಸಮೀಪಿಸುತ್ತಿದೆ ಎಂದು ಮಕ್ಕಳಿಗೆ ಒತ್ತಡ ನೀಡದಿರಿ, ಮಾನಸಿಕ ಆರೋಗ್ಯಕ್ಕೆ ಈ ಆಹಾರಗಳನ್ನು ನೀಡಿ

ಪರೀಕ್ಷೆಯ ಒತ್ತಡವು ಹೆಚ್ಚಾದಂತೆ ನಿಮ್ಮ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರಬಹುದು. ಮೆದುಳಿನ ಆರೋಗ್ಯಕ್ಕಾಗಿ ಈ ಆಹಾರಗಳನ್ನು ಮಕ್ಕಳಿಗೆ ನೀಡಿ.

ಪರೀಕ್ಷೆ ಸಮೀಪಿಸುತ್ತಿದೆ ಎಂದು ಮಕ್ಕಳಿಗೆ ಒತ್ತಡ ನೀಡದಿರಿ, ಮಾನಸಿಕ ಆರೋಗ್ಯಕ್ಕೆ ಈ ಆಹಾರಗಳನ್ನು ನೀಡಿ
ಸಾಂದರ್ಭಿಕ ಚಿತ್ರImage Credit source: India Today
Follow us
ಅಕ್ಷತಾ ವರ್ಕಾಡಿ
|

Updated on:Feb 21, 2023 | 5:21 PM

ಪರೀಕ್ಷೆಯ ಒತ್ತಡವು(Exam Stress) ನಿಮ್ಮ ಮಕ್ಕಳಲ್ಲಿ ಚಿಂತೆ ಅಥವಾ ಖಿನ್ನತೆಗೆ ಒಳಪಡಿಸಬಹುದು. ನಿಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡುವಲ್ಲಿ ಎಷ್ಟು ಚೆನ್ನಾಗಿ ನಿದ್ರಿಸುತ್ತೀರಿ ಅಥವಾ ಏನು ತಿನ್ನುತ್ತೀರಿ ಎಂಬುದು ಕೂಡ ಮುಖ್ಯವಾಗಿರುತ್ತದೆ. ಆದ್ದರಿಂದ ಪರೀಕ್ಷೆ ಸಮೀಪಿಸುತ್ತಿದ್ದಂತೆ ನಿಮ್ಮ ಮಕ್ಕಳ ಪರೀಕ್ಷೆಯ ಒತ್ತಡವನ್ನು ಕಡಿಮೆ ಮಾಡಲು ಆಹಾರಕ್ರಮವನ್ನು ಬದಲಾಯಿಸಿ. ಪರೀಕ್ಷೆಯ ಒತ್ತಡವನ್ನು ನಿವಾರಿಸಲು ಅನುಸರಿಸಬೇಕಾದ ಕೆಲವು ಆಹಾರ ಸಲಹೆಗಳು ಇಲ್ಲಿವೆ.

ಪರೀಕ್ಷೆಯ ಒತ್ತಡವನ್ನು ಕಡಿಮೆ ಮಾಡಲು ಈ ಆಹಾರ ಸಲಹೆಗಳನ್ನು ಅನುಸರಿಸಿ:

ಕೆಫೀನ್ ಸೇವನೆಯನ್ನು ಕಡಿಮೆ ಮಾಡಿಸಿ:

ಪರೀಕ್ಷೆಗಳ ಸಮಯದಲ್ಲಿ, ಹೆಚ್ಚಿನ ಪ್ರಮಾಣದಲ್ಲಿ ಕಾಫಿ, ಎನರ್ಜಿ ಡ್ರಿಂಕ್ಸ್, ಟೀ ಅಥವಾ ಕೋಲಾಗಳನ್ನು ಕುಡಿಯುವುದರಿಂದ ಇದು ನಿದ್ರೆಗೆ ಅಡ್ಡಿಪಡಿಸಬಹುದು. ಕಾಫಿ, ಚಹಾ ಮತ್ತು ಕಾರ್ಬೊನೇಟೆಡ್ ಪಾನೀಯಗಳ ಸೇವನೆಯನ್ನು ಮಿತಿಗೊಳಿಸಿ. ಕೆಫೀನ್ ನಿಮ್ಮ ಮಕ್ಕಳನ್ನು ಎಚ್ಚರವಾಗಿರಿಸುತ್ತದೆ ಆದರೆ ಮಾನಸಿಕ ತೀಕ್ಷ್ಣತೆಯನ್ನು ಕುಗ್ಗಿಸುತ್ತದೆ.

ಊಟದ ಸಮಯವನ್ನು ಸರಿಯಾಗಿ ನಿಗದಿಪಡಿಸಿ:

ಪರೀಕ್ಷೆಯ ಸಮಯದಲ್ಲಿ ಮಕ್ಕಳು ಸಾಕಷ್ಟು ಚಿಂತೆಯಲ್ಲಿ ಇರುವುದರಿಂದ ಊಟದ ಮೇಲಿನ ಆಸಕ್ತಿಯನ್ನು ಕಳೆದುಕೊಂಡಿರುತ್ತಾರೆ. ಆದ್ದರಿಂದ ಊಟವನ್ನು ಸರಿಯಾಗಿ ಸಮಯದಲ್ಲಿ ಸೇವಿಸುವುದು ಅಗತ್ಯ. ಇಲ್ಲದಿದ್ದರೆ ಅನಾರೋಗ್ಯ, ಕಿರಿಕಿರಿ ಮತ್ತು ಶಕ್ತಿ ಹೀನತೆಗೆ ಕಾರಣವಾಗಬಹುದು.

ಇದನ್ನೂ ಓದಿ: ನಿಮ್ಮವರೊಂದಿಗಿನ ಆರೋಗ್ಯಕರ ಸಂಬಂಧ ಆತಂಕ ದೂರ ಮಾಡಬಲ್ಲದು

ಹೈಡ್ರೇಟೆಡ್ ಆಗಿರುವುದು ಮುಖ್ಯ:

ಸಾಕಷ್ಟು ನೀರು ಸೇವಿಸುವ ಮೂಲಕ ಹೈಡ್ರೀಕರಿಸಿದಂತೆ ನೋಡಿಕೊಳ್ಳಿ. ನಿಮ್ಮ ಮಕ್ಕಳ ಓದುವ ಕೋಣೆಯಲ್ಲಿ ಯಾವಾಗಲೂ ಒಂದು ಬಾಟಲ್​ ನೀರು ಇಟ್ಟಿರಿ ಹಾಗೂ ಆಗಾಗ ನೀರು ಕುಡಿಯಲು ನೆನಪಿಸಿ. ಇದರೊಂದಿಗೆ ನಿಂಬೆ ರಸ ಅಥವಾ ಪುದೀನ ಎಲೆಗಳನ್ನು ಸೇರಿಸಿಕೊಳ್ಳಬಹುದು.

ನೆನಪಿನ ಶಕ್ತಿ ಹೆಚ್ಚಿಸುವ ಆಹಾರಗಳು:

ನೆನಪಿನ ಶಕ್ತಿ ಹಾಗೂ ಮೆದುಳಿನ ಕಾರ್ಯವನ್ನು ಸುಧಾರಿಸಲು ಒಮೆಗಾ 3 ಕೊಬ್ಬಿನಾಮ್ಲಗಳು ಅವಶ್ಯಕ. ಮೀನಿನಲ್ಲಿ ಒಮೆಗಾ 3 ಕೊಬ್ಬಿನಾಮ್ಲಗಳು ಹೇರಳವಾಗಿವೆ. ವಾಲ್್ನಟ್ಸ್, ಅಗಸೆ ಬೀಜಗಳು ಕುಂಬಳಕಾಯಿ ಬೀಜಗಳು, ಎಳ್ಳು ಬೀಜಗಳು ಹಾಗೂ ಸೋಯಾಬೀನ್ ಎಣ್ಣೆಗಳನ್ನು ಆಹಾರ ಕ್ರಮದಲ್ಲಿ ಜೋಡಿಸಿ.

ಒತ್ತಡವನ್ನು ನಿವಾರಿಸುವ ಆಹಾರಗಳು:

ಡಾರ್ಕ್​ ಚಾಕೋಲೆಟ್, ಡ್ರೈ ಪ್ರೂಟ್ಸ್, ಸಿಟ್ರಸ್​ ಹಣ್ಣುಗಳು ಮತ್ತು ಅವಕಾಡೊಗಳು ಒತ್ತಡವನ್ನು ನಿವಾರಿಸುವಲ್ಲಿ ಸಹಾಯಕವಾಗಿದೆ. ಆದ್ದರಿಂದ ಪರೀಕ್ಷೆ ಸಮೀಪಿಸುತ್ತಿದ್ದಂತೆ ನಿಮ್ಮ ಮಕ್ಕಳ ಆಹಾರ ಕ್ರಮದಲ್ಲಿ ಈ ಆಹಾರಗಳನ್ನು ಸೇರಿಸಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ಧಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 5:21 pm, Tue, 21 February 23