ನೀವು ಬಳಸುವ ಟೀ ಪುಡಿ ಅಸಲಿಯೇ ನಕಲಿಯೇ ಎಂದು ಪತ್ತೆ ಮಾಡೋದು ಹೇಗೆ? ಈ ವಿಧಾನ ಅನುಸರಿಸಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Jan 16, 2025 | 10:50 AM

ನಮ್ಮಲ್ಲಿ ಹೆಚ್ಚಿನವರಿಗೆ ಬೆಳಗ್ಗೆ ಒಂದು ಕಪ್ ಚಹಾ ಕುಡಿಯದೇ ದಿನ ಆರಂಭವಾಗುವುದೇ ಇಲ್ಲ. ಈ ಟೀಯಲ್ಲಿಯೂ ಬ್ಲ್ಯಾಕ್​ ಟೀ, ಮಸಾಲಾ ಟೀ, ಲೆಮೆನ್ ಟೀ ಹೀಗೆ ಹತ್ತಾರು ವೈರಂಟಿಗಳಿವೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ಕಲಬೆರಕೆಯುಕ್ತ ಚಹಾ ಪುಡಿ ಮಾರಾಟವಾಗುತ್ತಿದೆ. ಹೀಗಾಗಿ ನೀವು ಖರೀದಿಸಿ ತಂದ ಟೀ ಪೌಡರ್​ ಉತ್ತಮ ಗುಣಮಟ್ಟದ್ದೇ ಅಥವಾ ಕಲಬೆರಕೆಯದ್ದೇ ಎಂಬುವುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಹಾಗಾದ್ರೆ ಚಹಾಪುಡಿ ಅಸಲಿಯೋ ನಕಲಿಯೋ ಎಂದು ಮನೆಯಲ್ಲೇ ಹೀಗೆ ಕಂಡು ಹಿಡಿಯಿರಿ.

ನೀವು ಬಳಸುವ ಟೀ ಪುಡಿ ಅಸಲಿಯೇ ನಕಲಿಯೇ ಎಂದು ಪತ್ತೆ ಮಾಡೋದು ಹೇಗೆ? ಈ ವಿಧಾನ ಅನುಸರಿಸಿ
ಸಾಂದರ್ಭಿಕ ಚಿತ್ರ
Follow us on

ಇತ್ತೀಚೆಗಿನ ದಿನಗಳಲ್ಲಿ ಎಲ್ಲಾ ಆಹಾರ ಪದಾರ್ಥಗಳಲ್ಲಿ ಕಲಬೆರಕೆ ಕಾಣಬಹುದಾಗಿದೆ. ಅವುಗಳಲ್ಲಿ ಚಹಾ ಪುಡಿ ಕೂಡ ಒಂದು. ತೆಂಗಿನಕಾಯಿಯ ಸಿಪ್ಪೆಯ ಪುಡಿ, ಮರದ ತೊಗಟೆಯ ಪುಡಿ, ಹುಣಸೆ ಬೀಜದ ಪುಡಿ ಸೇರಿದಂತೆ ಹೀಗೆ ರಾಸಾಯನಿಕ ಬೆರೆಸಿ ಕಲಬೆರಕೆಯುಕ್ತ ಚಹಾ ಪುಡಿಯನ್ನು ಮಾರಾಟ ಮಾಡಲಾಗುತ್ತಿದೆ. ಒಂದು ವೇಳೆ ನೀವು ಬಳಸುತ್ತಿರುವ ಟೀ ಪುಡಿ ನಕಲಿಯಾಗಿದ್ರೆ ಅದರ ಬಳಕೆಯನ್ನು ನಿಲ್ಲಿಸುವುದು ಒಳ್ಳೆಯದು. ಆದರೆ ನಕಲಿ ಟೀ ಪುಡಿಯಿಂದ ತಯಾರಿಸಿದ ಚಹಾ ಸೇವನೆ ಆರೋಗ್ಯಕ್ಕೆ ಅಪಾಯಕಾರಿಯಾಗಿದೆ. ಹೀಗಾಗಿ ಮನೆಯಲ್ಲೇ ಈ ರೀತಿ ನಕಲಿ ಚಹಾ ಪುಡಿಯನ್ನು ಪತ್ತೆ ಹಚ್ಚಬಹುದು.

  • ನೀರಿನಲ್ಲಿ ಪುಡಿ ಹಾಕಿ ಪರೀಕ್ಷಿಸುವ ಮೂಲಕ ಚಹಾ ಪುಡಿ ಅಸಲಿಯೇ ನಕಲಿಯೇ ಎಂದು ಕಂಡುಹಿಡಿಯಬಹುದು. ಮೊದಲು ಒಂದು ಲೋಟದಲ್ಲಿ ಉಗುರು ಬೆಚ್ಚಗಿನ ನೀರು ತೆಗೆದುಕೊಳ್ಳಿ. ಅದಕ್ಕೆ ಟೀ ಪುಡಿಯನ್ನು ಹಾಕಿ ಅದು ಬಣ್ಣ ಬಿಟ್ಟುಕೊಂಡರೆ ನಕಲಿಯಾಗಿರಬಹುದು. ಗಾಢ ಬಣ್ಣದ ಬಿಡದಿದ್ದರೆ ಅಸಲಿ ಎಂದರ್ಥ.
  • ನೀವು ಬಳಸುವ ಚಹಾ ಪುಡಿ ಅಸಲಿಯೇ ಎಂದು ತಿಳಿಯಲು ಅದನ್ನು ಸೂಕ್ಷ್ಮವಾಗಿ ಗಮನಿಸಿ. ಬ್ರಾಂಡೆಡ್ ಟೀ ಪುಡಿ ಖರೀದಿಸಿದರೆ ಆ ಟೀ ಪುಡಿಯ ಕಣಗಳು ಹೆಚ್ಚಾಗಿ ಒಂದೇ ರೀತಿಯಿರುತ್ತದೆ. ಹಸಿರು ಹಸಿರಾದ ಟೀ ಪುಡಿಯ ಎಲೆಯ ಪುಡಿಯಿರುತ್ತದೆ. ಒಂದು ವೇಳೆ ಕಲಬೆರಕೆಯಾಗಿದ್ದರೆ ಟೀ ಪುಡಿಯ ಕಣಗಳು ಒಂದೊಂದು ಬಣ್ಣದಲ್ಲಿರಬಹುದು.
  • ಕಲಬೆರಕೆಯಲ್ಲದ ಚಹಾ ಪುಡಿಯಿಂದ ಮಾಡಿದ ಚಹಾವು ಸುವಾಸನೆಯುಕ್ತವಾಗಿದ್ದು ರುಚಿ ಉತ್ತಮವಾಗಿರುತ್ತದೆ. ಆದರೆ, ಚಹಾ ಪುಡಿಯೂ ಕಲಬೆರಕೆಯಾಗಿದ್ದರೆ ಕಹಿ ರುಚಿಯನ್ನು ಹೊಂದಿರುತ್ತದೆ.
  • ಚಹಾ ಪುಡಿ ಅಸಲಿಯೇ ಎಂದು ಪತ್ತೆಹಚ್ಚಲು ಕುದಿಸಿದ ಚಹಾದ ಬಣ್ಣವನ್ನು ಗಮನಿಸಿ. ಚಹಾವು ಸೂಕ್ತವಾದ ಸ್ಪಷ್ಟವಾದ ಬಣ್ಣವನ್ನು ಹೊಂದಿದ್ದರೆ ಶುದ್ಧವಾಗಿದೆ ಎಂದರ್ಥ. ಒಂದು ವೇಳೆ ಕಲಬೆರಕೆಯಾಗಿದ್ದರೆ ಮಂದವಾದ ಅಥವಾ ಅಸ್ವಾಭಾವಿಕ ಬಣ್ಣವು ಕಲ್ಮಶಗಳನ್ನು ಸೂಚಿಸುತ್ತದೆ.
  • ಒಂದು ಸಣ್ಣ ಬಟ್ಟಲಿನಲ್ಲಿ ನೀರನ್ನು ತೆಗೆದುಕೊಂಡು ಅದರಲ್ಲಿ ಸ್ವಲ್ಪ ಟೀ ಪುಡಿಯನ್ನು ಸೇರಿಸಿ. ಅದು ಶುದ್ಧವಾಗಿದ್ದರೆ, ನೀರಿನಲ್ಲಿ ಬಹುತೇಕ ಕರಗಿ ಸಾಮಾನ್ಯ ಚಹಾ ಕಣಗಳು ಮಾತ್ರ ಕೆಳಭಾಗದಲ್ಲಿ ಉಳಿಯುತ್ತವೆ. ಒಂದು ಕಲಬೆರಕೆಯಾಗಿದ್ದರೆ ನೀರಿನಲ್ಲಿ ಕರಗದೇ ಮುದ್ದೆಯಾಗಿರುತ್ತದೆ. ಅದು ಶುದ್ಧ ಚಹಾ ಪುಡಿ ಅಲ್ಲ ಎಂದು ಅರ್ಥ ಮಾಡಿಕೊಳ್ಳಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ