Beauty Tips: ಕೂದಲಿನಿಂದ ಉಗುರುಗಳವರೆಗೆ ಆರೈಕೆಗೆ ಸಂಬಂಧಿಸಿದ ಕೆಲವು ಟಿಪ್ಸ್​​ಗಳು ಇಲ್ಲಿವೆ

|

Updated on: Feb 15, 2024 | 6:40 PM

ಕೂದಲಿನಿಂದ ಉಗುರುಗಳವರೆಗೆ ಸೌಂದರ್ಯವನ್ನು ಹೆಚ್ಚಿಸಲು ಮಹಿಳೆಯರು ಅನೇಕ ದುಬಾರಿ ಉತ್ಪನ್ನಗಳನ್ನು ಬಳಸುತ್ತಾರೆ ಮತ್ತು ಸೌಂದರ್ಯವರ್ಧಕ ಚಿಕಿತ್ಸೆಗಳಿಗೆ ಒಳಗಾಗುತ್ತಾರೆ. ಆದರೆ ಕೆಲವು ನೈಸರ್ಗಿಕ ಮನೆಮದ್ದುಗಳ ಮೂಲಕ ನಿಮ್ಮ ಸೌಂದರ್ಯವನ್ನು ಆರೋಗ್ಯಕರವಾಗಿ ಹೆಚ್ಚಿಸಿಕೊಳ್ಳಬಹುದು.

Beauty Tips: ಕೂದಲಿನಿಂದ ಉಗುರುಗಳವರೆಗೆ ಆರೈಕೆಗೆ ಸಂಬಂಧಿಸಿದ ಕೆಲವು ಟಿಪ್ಸ್​​ಗಳು ಇಲ್ಲಿವೆ
silky hair, pink lips
Image Credit source: Pinterest
Follow us on

ಕೂದಲಿನಿಂದ ಉಗುರುಗಳವರೆಗೆ ಸೌಂದರ್ಯಕ್ಕೆ ಸಂಬಂಧಿಸಿದ ಎಲ್ಲದರ ಬಗ್ಗೆ ಹುಡುಗಿಯರು ಬಹಳ ಆಸಕ್ತಿಯನ್ನು ಹೊಂದಿರುತ್ತಾರೆ. ಒತ್ತಡದ ಜೀವನಶೈಲಿ, ಅನಾರೋಗ್ಯಕರ ಆಹಾರ ಕ್ರಮದಿಂದಾಗಿ ಕೂದಲು ಉದುರುವಿಕೆ ಮತ್ತು ಚರ್ಮದ ಸಮಸ್ಯೆಗಳಂತಹ ಸಮಸ್ಯೆಗಳು ಸಾಮಾನ್ಯವಾಗಿದೆ.ಈ ಎಲ್ಲಾ ಸಮಸ್ಯೆಗಳನ್ನು ಹೋಗಲಾಡಿಸಲು ಹುಡುಗಿಯರು ಅನೇಕ ದುಬಾರಿ ಉತ್ಪನ್ನಗಳನ್ನು ಬಳಸುತ್ತಾರೆ ಮತ್ತು ಸೌಂದರ್ಯವರ್ಧಕ ಚಿಕಿತ್ಸೆಗಳಿಗೆ ಒಳಗಾಗುತ್ತಾರೆ. ಸದ್ಯಕ್ಕೆ ಒಂದಿಷ್ಟು ನೈಸರ್ಗಿಕವಾಗಿ ಕಾಳಜಿ ವಹಿಸಿದರೆ ಈ ಎಲ್ಲಾ ಸಮಸ್ಯೆಗಳಿಂದ ದೂರವಿದ್ದು, ಆರೋಗ್ಯಕರ ರೇಷ್ಮೆಯಂತ ಕೂದಲು, ಗುಲಾಬಿ ತುಟಿಗಳನ್ನು ಪಡೆಯಬಹುದು.

ಉಗುರುಗಳ ಆರೈಕೆ:

ನೀವು ಉದ್ದವಾದ ಉಗುರುಗಳನ್ನು ಬಯಸಿದರೆ ಉಗುರಿನ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯ. ಪ್ರತಿ ವಾರ ಅಥವಾ ಪ್ರತಿ ಹದಿನೈದು ದಿನಗಳಿಗೊಮ್ಮೆ ಉಗುರುಗಳಿಗೆ ಆಲಿವ್ ಅಥವಾ ತೆಂಗಿನ ಎಣ್ಣೆಯಿಂದ ಮಸಾಜ್ ಮಾಡುವುದು ತುಂಬಾ ಪ್ರಯೋಜನಕಾರಿ.

ಕೂದಲಿನ ಆರೈಕೆ:

ನಿಮ್ಮ ಕೂದಲನ್ನು ಬಲವಾಗಿ ಮತ್ತು ಹೊಳೆಯುವಂತೆ ಮಾಡಲು ಡ್ರೈಯರ್‌ಗಳು, ಕೂದಲಿನ ಬಣ್ಣ ಅಥವಾ ಯಾವುದೇ ರೀತಿಯ ರಾಸಾಯನಿಕ ಚಿಕಿತ್ಸೆಯಿಂದ ದೂರವಿರಿ. ಕೂದಲನ್ನು ವಾರಕ್ಕೊಮ್ಮೆ ಅಥವಾ ಹದಿನೈದು ದಿನಕ್ಕೊಮ್ಮೆ ಸ್ಟೀಮ್​​ ನೀಡುವುದು ಅಗತ್ಯ. ಕೂದಲು ತೊಳೆಯುವ ಒಂದೂವರೆ ಗಂಟೆ ಮೊದಲು ವಿಟಮಿನ್ ಇ ಸಮೃದ್ಧವಾಗಿರುವ ಎಣ್ಣೆಯಿಂದ ನೆತ್ತಿಯನ್ನು ಮಸಾಜ್ ಮಾಡಬೇಕು. ಆದರೆ ಶಾಂಪೂ ಮಾಡಿದ ನಂತರ ಉತ್ತಮವಾದ ಕಂಡೀಷನರ್ ಅನ್ನು ಅನ್ವಯಿಸಲು ಮರೆಯಬಾರದು.

ಇದನ್ನೂ ಓದಿ: ಚಳಿಗಾಲದಲ್ಲಿ ಕೀಲು ನೋವು ಅಥವಾ ಮೊಣಕಾಲು ನೋವಿನಿಂದ ಬಳಲುತ್ತಿದ್ದೀರಾ? ಈ ಹಣ್ಣು ಸೇವಿಸಿ

ಹೊಳೆಯುವ ತ್ವಚ್ಛೆ ಪಡೆಯಲು:

ಇತ್ತೀಚಿನ ದಿನಗಳಲ್ಲಿ ಹೊಳೆಯುವ ತ್ವಚ್ಛೆ ಪಡೆಯುವ ಭಾರೀ ಕ್ರೇಜ್ ಇದೆ. ಇದಕ್ಕಾಗಿ ಚರ್ಮವು ಒಳಗಿನಿಂದ ಆರೋಗ್ಯಕರವಾಗಿರುವುದು ಮುಖ್ಯ, ಆದ್ದರಿಂದ ಎಣ್ಣೆಯುಕ್ತ ಆಹಾರವನ್ನು ತಪ್ಪಿಸುವುದರ ಜೊತೆಗೆ, ಆಹಾರದಲ್ಲಿ ಹಣ್ಣು, ಬೀಜ, ತರಕಾರಿಗಳನ್ನು ಸೇರಿಸಿ ಮತ್ತು ಕ್ಲೆನ್ಸಿಂಗ್, ಟೋನಿಂಗ್, ಮಾಯಿಶ್ಚರೈಸಿಂಗ್ ಅನ್ನು ಅನುಸರಿಸಿ. ಹಾಗೆಯೇ ಹೊರಗೆ ಹೋಗುವ ಮುನ್ನ ಸನ್ ಸ್ಕ್ರೀನ್ ಲೋಷನ್ ಹಚ್ಚಿ. ಮಂದ ಚರ್ಮಕ್ಕಾಗಿ, ನೀವು ಟೋನರ್ ಬದಲಿಗೆ ಅಕ್ಕಿ ನೀರನ್ನು ಬಳಸಬಹುದು.

ಗುಲಾಬಿ ಬಣ್ಣದ ತುಟಿಗಳು:

ನೀವು ಗುಲಾಬಿ ಬಣ್ಣದ ತುಟಿಗಳನ್ನು ಬಯಸಿದರೆ, ವಾರಕ್ಕೊಮ್ಮೆ ಸಕ್ಕರೆ, ಜೇನುತುಪ್ಪ ಮತ್ತು ತೆಂಗಿನ ಎಣ್ಣೆಯಿಂದ ನಿಮ್ಮ ತುಟಿಗಳನ್ನು ನಿಧಾನವಾಗಿ ಸ್ಕ್ರಬ್ ಮಾಡಿ. ಧೂಮಪಾನವನ್ನು ತ್ಯಜಿಸಬೇಕು, ಮೇಲಾಗಿ ದೈನಂದಿನ ದಿನಚರಿಯಲ್ಲಿ ರಾಸಾಯನಿಕ ಲಿಪ್ಸ್ಟಿಕ್ ಬದಲಿಗೆ ತುಟಿಗಳ ಮೇಲೆ ಉತ್ತಮ ಲಿಪ್ ಬಾಮ್ ಅನ್ನು ಬಳಸುವುದು ಉತ್ತಮ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ