
ಇತ್ತೀಚೆಗಿನ ದಿನಗಳಲ್ಲಿ ಕೂದಲಿನ ಸಮಸ್ಯೆಗಳು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಹೆಚ್ಚಿನವರು ಮಾರುಕಟ್ಟೆಯಲ್ಲಿ ಸಿಗುವ ಶ್ಯಾಂಪೂ ಸೇರಿದಂತೆ ಇನ್ನಿತರ ಉತ್ಪನ್ನಗಳನ್ನು ಕೂದಲಿನ ಆರೈಕೆಗೆ (hair care) ಬಳಸುತ್ತಾರೆ.ಈ ರಾಸಾಯನಿಕ ಕೂದಲಿನ ಉತ್ಪನ್ನಗಳು ಕೂದಲ ಕಾಂತಿಯನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ಆದರೆ ಕೂದಲಿನ ಆರೈಕೆಗೆ ಬಿಯರ್ (beer) ಪರಿಣಾಮಕಾರಿಯಾಗಿದೆಯಂತೆ. ಮಾದಕ ಪಾನೀಯವೂ ಈ ಕೇಶರಾಶಿಯ ಸಮಸ್ಯೆಯನ್ನು ಹೇಗೆ ನಿವಾರಿಸಲು ಸಾಧ್ಯ ಎನ್ನುವ ಪ್ರಶ್ನೆ ಮೂಡಬಹುದು. ಆದರೆ, ಈ ಬಿಯರ್ ನಲ್ಲಿರುವ ಕ್ಯಾಲ್ಸಿಯಂ, ಕಬ್ಬಿಣ, ಪ್ರೋಟೀನ್, ಸೆಲೆನಿಯಮ್, ವಿಟಮಿನ್ ಡಿ ಹಾಗೂ ವಿಟಮಿನ್ ಇ ಅಂಶಗಳು ಕೂದಲನ್ನು ಸ್ವಚ್ಛಗೊಳಿಸಿ ಕಳೆಗುಂದಿದ ಕೂದಲ ಹೊಳಪನ್ನು ಹೆಚ್ಚಿಸುತ್ತದೆ. ಮನೆಯಲ್ಲೇ ಬಿಯರ್ ಇದ್ದರೆ ಈ ರೀತಿ ಶ್ಯಾಂಪೂ ತಯಾರಿಸಿ ಬಳಸಬಹುದು. ಹೀಗಾಗಿ ಈ ಶ್ಯಾಂಪೂ ಪ್ರಯೋಜನಗಳೇನು ಎಂದು ನೀವು ತಿಳಿದುಕೊಳ್ಳಿ.
ಬಿಯರ್ ಶ್ಯಾಂಪೂ ಪ್ರಯೋಜನಗಳು
ಕೂದಲಿನ ಹೊಳಪು ಹೆಚ್ಚಾಗಲು ಬಿಯರ್ ಈ ರೀತಿ ಬಳಸಿ ನೋಡಿ
ಕೂದಲಿಗೆ ಎಣ್ಣೆಯಿಂದ ಮಸಾಜ್ ಮಾಡಿಕೊಳ್ಳಿ. ಆ ಬಳಿಕ ಶ್ಯಾಂಪೂ ಬಳಸಿ ತೊಳೆದುಕೊಳ್ಳಿ. ಅಂತಿಮವಾಗಿ ಬಿಯರ್ ಅನ್ನು ಕಂಡೀಶನರ್ ರೀತಿಯಲ್ಲಿ ಬಳಸಬಹುದು. ಒಂದು ಕಪ್ ಬಿಯರ್ ಗೆ ಆಪಲ್ ಸೈಡರ್ ವಿನೆಗರ್ ಸೇರಿಸಿ, ನೆತ್ತಿಯ ಮೇಲೆ ಹಾಗೂ ಕೂದಲಿನ ಬುಡಕ್ಕೆ ಹಚ್ಚಿಕೊಳ್ಳಿ. ಹತ್ತು ನಿಮಿಷಗಳ ಬಳಿಕ ತಣ್ಣೀರಿನಿಂದ ಕೂದಲನ್ನು ಚೆನ್ನಾಗಿ ತೊಳೆಯಿರಿ. ಹೀಗೆ ಮಾಡುವುದರಿಂದ ಕೂದಲು ಜಿಗುಟಾಗುವುದನ್ನು ತಪ್ಪಿಸಿ ಮೃದುವಾಗಿಸಿ ಹೊಳಪನ್ನು ಹೆಚ್ಚಿಸುತ್ತದೆ.
ಇದನ್ನೂ ಓದಿ: ತಲೆಯಲ್ಲಿ ಹೇನಿನ ಕಿರಿಕಿರಿಯೇ? ಈ ಮದ್ದುಗಳನ್ನು ಬಳಸಿದ್ರೆ ಈ ಸಮಸ್ಯೆಯಿಂದ ಪರಿಹಾರ ಗ್ಯಾರಂಟಿ
ಬಿಯರ್ ಶ್ಯಾಂಪೂ ಮನೆಯಲ್ಲೇ ಹೀಗೆ ತಯಾರಿಸಿ
ಮಾರುಕಟ್ಟೆಯಲ್ಲಿ ಸಿಗುವ ಶ್ಯಾಂಪೂಗಳ ಬದಲಿಗೆ ಈ ಶ್ಯಾಂಪನ್ನು ಬಳಸುವುದು ಪರಿಣಾಮಕಾರಿ ಫಲಿತಾಂಶವನ್ನು ನೀಡುತ್ತದೆ. ಒಂದು ಪಾತ್ರೆಯಲ್ಲಿ ಒಂದು ಕಪ್ ಬಿಯರ್ ತೆಗೆದುಕೊಂಡು ಹದಿನೈದು ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ. ಆ ಬಳಿಕ ತಣ್ಣಗಾಗಲು ಬಿಡಿ. ಇದಕ್ಕೆ ನೀವು ದಿನನಿತ್ಯ ಬಳಸುವ ಶ್ಯಾಂಪನ್ನು ಇದಕ್ಕೆ ಬೆರೆಸಿ, ಇದನ್ನು ನೀವು ಶೇಖರಿಸಿಟ್ಟುಕೊಳ್ಳಿ. ತಲೆ ಸ್ನಾನದ ಸಮಯದಲ್ಲಿ ಈ ಬಿಯರ್ ಶ್ಯಾಂಪನ್ನು ಬಳಸಬಹುದು.
ವಿಶೇಷ ಸೂಚನೆ: ಯಾವುದೇ ರೀತಿಯ ಅಲರ್ಜಿ ಸಮಸ್ಯೆಗಳಿದ್ದಲ್ಲಿ ಬಿಯರ್ ಶ್ಯಾಂಪೂ ಬಳಸುವ ಮುನ್ನ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಸಲಹೆಗಳನ್ನು ಪಡೆದುಕೊಳ್ಳಿ.
ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:58 pm, Fri, 1 August 25