ಪ್ರಾತಿನಿಧಿಕ ಚಿತ್ರ
Image Credit source: healthline.com
ದಿನಕಳೆದಂತೆ ಕಾಲ ಕೂಡ ಬದಲಾಗುತ್ತಿದೆ. ಬದಲಾಗುತ್ತಿರುವ ಇಂದಿನ ನಮ್ಮ ಜೀವನಶೈಲಿ ಮತ್ತು ಆಧುನಿಕತೆಯಿಂದಾಗಿ, ಹಳೆಯ ಸಂಪ್ರದಾಯಗಳು ಹೆಚ್ಚಾಗಿ ಕಣ್ಮರೆಯಾಗುತ್ತಿವೆ. ಅದರಲ್ಲಿ ನೆಲದ (Floor) ಮೇಲೆ ಕುಳಿತು (Sitting)ಕೊಳ್ಳುವ ಅಥವಾ ತಿನ್ನುವ ಅಭ್ಯಾಸವೂ ಒಂದು. ನೆಲದ ಮೇಲೆ ಕುಳಿತವರಿಗೆ ಗೊತ್ತು ನೆಲದ ಮೇಲೆ ಕೂರುವುದರಿಂದ ಆಗುವ ಲಾಭ ಮತ್ತು ಸುಖ. ಹಿಂದೆ ನಮ್ಮ ಮನೆಯಲ್ಲಿ ಹಿರಿಯರು ನೆಲದ ಮೇಲೆ ಕುಳಿತು ಊಟ ಮಾಡುತ್ತಿದ್ದರು. ನೆಲದ ಮೇಲೆ ಕುಳಿತುಕೊಳ್ಳುವುದರಿಂದ ನಮ್ಮ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ಇದು ಅನೇಕ ಅಧ್ಯಯನಗಳು ಮತ್ತು ಸಂಶೋಧನೆಗಳಿಂದ ಸಾಬೀತಾಗಿದೆ. ಆಯುರ್ವೇದವು ನೆಲದ ಮೇಲೆ ಕುಳಿತುಕೊಳ್ಳಲು ಸಹ ಹೇಳುತ್ತದೆ. ಹಾಗಾದರೆ ನೆಲದ ಮೇಲೆ ಕುಳಿತುಕೊಳ್ಳುವ ಪ್ರಯೋಜನಗಳ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ.
ನೆಲದ ಮೇಲೆ ಕುಳಿತುಕೊಳ್ಳುವುದರಿಂದಾಗು ಪ್ರಯೋಜನಗಳು ಹೀಗಿವೆ
- ಜೀರ್ಣಕ್ರಿಯೆ ಸುಧಾರಣೆ: ನೆಲದ ಮೇಲೆ ಕಾಲು ಚಾಚಿ ಕುಳಿತುಕೊಳ್ಳುವುದು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ತಟ್ಟೆಯನ್ನು ನೆಲದ ಮೇಲೆ ಇಟ್ಟು ತಿನ್ನುವುದರಿಂದ ದೇಹವನ್ನು ಸ್ವಲ್ಪ ಮುಂದಕ್ಕೆ ಬಾಗುತ್ತದೆ. ನಂತರ ಸಹಜ ಸ್ಥಿತಿಗೆ ಬರುತ್ತೇವೆ. ಪದೇ ಪದೇ ದೇಹವನ್ನು ಹಿಂದಕ್ಕೆ ಮತ್ತು ಮುಂದಕ್ಕೆ ಬಗ್ಗಿಸುವುದು ಹೊಟ್ಟೆಯ ಸ್ನಾಯುಗಳನ್ನು ಉತ್ತೇಜುತ್ತದೆ ಮತ್ತು ಹೊಟ್ಟೆಯಲ್ಲಿ ಜೀರ್ಣಕಾರಿ ಕಿಣ್ವಗಳ ಸ್ರವಿಸುವಿಕೆಯನ್ನು ಹೆಚ್ಚಿಸುತ್ತದೆ. ಇದು ಆಹಾರವನ್ನು ಉತ್ತಮವಾಗಿ ಜೀರ್ಣಿಸಿಕೊಳ್ಳಲು ಪ್ರಾರಂಭಿಸುತ್ತದೆ.
- ಬೆನ್ನುಮೂಳೆ ಬಲಿಷ್ಠ: ಆರೋಗ್ಯ ತಜ್ಞರ ಪ್ರಕಾರ ಬೆನ್ನುಮೂಳೆಯನ್ನು ಆರೋಗ್ಯಕರವಾಗಿಸಲು ನೆಲದ ಮೇಲೆ ಕುಳಿತುಕೊಳ್ಳುವುದಾಗಿದೆ. ಹೀಗೆ ಮಾಡುವುದರಿಂದ ನೀವು ಹೆಚ್ಚು ಸ್ಥಿರವಾಗಿ ಕುಳಿತುಕೊಳ್ಳುತ್ತೀರಿ. ನೆಲದ ಮೇಲೆ ಕುಳಿತುಕೊಳ್ಳುವುದು ನಮ್ಮ ಬೆನ್ನುಮೂಳೆಯ ಸಂರಚನೆಯನ್ನು ಸುಧಾರಿಸುತ್ತದೆ.
- ಮನಸ್ಸಿಗೆ ವಿಶ್ರಾಂತಿ: ನೆಲದ ಮೇಲೆ ಕುಳಿತುಕೊಳ್ಳುವುದರಿಂದ ಮನಸ್ಸಿಗೆ ವಿಶ್ರಾಂತಿ ದೊರೆಯುತ್ತದೆ. ಜೊತೆಗೆ ಪದ್ಮಾಸನ ಮತ್ತು ಸುಖಾಸನಗಳು ಧ್ಯಾನಕ್ಕೆ ಸೂಕ್ತವಾದ ಭಂಗಿಗಳಾಗಿವೆ. ಈ ಆಸನಗಳು ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಭಂಗಿಗಳಲ್ಲಿ ಕುಳಿತುಕೊಳ್ಳುವುದರಿಂದ ದೇಹದಲ್ಲಿ ಆಮ್ಲಜನಕದ ಹರಿವು ಹೆಚ್ಚಾಗುತ್ತದೆ.
- ಪೃಷ್ಠದ ಸ್ನಾಯುಗಳಿಗೆ ಬಲ: ದುರ್ಬಲವಾದ ಪೃಷ್ಠದ ನಮ್ಮ ಸ್ಥಿರತೆ ಮತ್ತು ಸಮತೋಲನದ ಮೇಲೆ ಪರಿಣಾಮ ಬೀರುತ್ತದೆ. ನಿಮ್ಮ ಸೊಂಟ ಮತ್ತು ಬೆನ್ನು ದುರ್ಬಲವಾಗಿದ್ದರೆ, ನೆಲದ ಮೇಲೆ ದೀರ್ಘಕಾಲ ಕುಳಿತುಕೊಳ್ಳಿ. ನೆಲದ ಮೇಲೆ ಕುಳಿತುಕೊಳ್ಳುವುದರಿಂದ ಸೊಂಟದ ಸ್ನಾಯುಗಳು ಬಲಗೊಳ್ಳುತ್ತವೆ. ಇದು ನಿಮ್ಮ ಬೆನ್ನನ್ನು ಸಹ ಬಲಪಡಿಸುತ್ತದೆ.
- ದೀರ್ಘಾಯುಷ್ಯ: ನೆಲದ ಮೇಲೆ ಕುಳಿತುಕೊಳ್ಳುವ ಅಭ್ಯಾಸ ನಮ್ಮನ್ನು ದೀರ್ಘಾಯುಷ್ಯವನ್ನಾಗಿಸುತ್ತದೆ. ಇದು ನಮ್ಮ ಸಂಪೂರ್ಣ ಚಲನೆಯ ವ್ಯಾಪ್ತಿಯನ್ನು ಸ್ಥಿರಗೊಳಿಸುತ್ತದೆ.
ಮತ್ತಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.