ವಾರಾಂತ್ಯದ ಬಿಡುವಿನ ಸಮಯ ಕಳೆಯಲು ಬೆಂಗಳೂರಿನ ಹತ್ತಿರದಲ್ಲಿ ಈ ಸ್ಥಳಗಳಿಗೆ ಭೇಟಿ ನೀಡಿ

ಕೆಲಸದ ಒತ್ತಡದ ವೇಳೆ ಬಿಡುವು ಮಾಡಿಕೊಂಡು ಅಥವಾ ವೀಕೆಂಡ್ ನಲ್ಲಿ ಸಮಯ ಕಳೆಯಲು, ಚಾರಣ ಮಾಡಲು ಬಯಸುವವರಿಗೆ,  ಕಲೆ ಸಂಸ್ಕೃತಿಗಳ ಬಗ್ಗೆ ತಿಳಿಯಬೇಕೆನ್ನುವವರು ಈ ಸ್ಥಳಗಳಿಗೆ ಭೇಟಿ ನೀಡಬಹುದು. 

ವಾರಾಂತ್ಯದ ಬಿಡುವಿನ ಸಮಯ ಕಳೆಯಲು ಬೆಂಗಳೂರಿನ ಹತ್ತಿರದಲ್ಲಿ ಈ ಸ್ಥಳಗಳಿಗೆ ಭೇಟಿ ನೀಡಿ
Nelamangala

ಕೆಲಸದ ಒತ್ತಡದ ನಡುವೆ ಒಂದು ಸಣ್ಣ ವಿರಾಮ ಸಿಕ್ಕರೆ ಅಷ್ಟೇ ಖುಷಿಯೆನಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಕೊರೋನಾ ಲಾಕ್ ಡೌನ್ ನಿಂದ ಮನೆಯಲ್ಲೇ ಕುಳಿತು ಬೋರ್ ಆದವರಿಗೆ ಬೆಂಗಳೂರಿನ ಸುತ್ತಮುತ್ತ ಅಂದರೆ 50 ಕಿಮೀ ಒಳಗೆ ಮನಸೆಳೆಯುವ ತಾಣಗಳಿಗೆ ಭೇಟಿ ನೀಡಬಹುದುಹೀಗಾಗಿ ಕೆಲಸದ ಒತ್ತಡದ ವೇಳೆ ಬಿಡುವು ಮಾಡಿಕೊಂಡು ಅಥವಾ ವೀಕೆಂಡ್ ನಲ್ಲಿ ಸಮಯ ಕಳೆಯಲು, ಚಾರಣ ಮಾಡಲು ಬಯಸುವವರಿಗೆ,  ಕಲೆ ಸಂಸ್ಕೃತಿಗಳ ಬಗ್ಗೆ ತಿಳಿಯಬೇಕೆನ್ನುವವರು ಈ ಸ್ಥಳಗಳಿಗೆ ಭೇಟಿ ನೀಡಬಹುದು. 

ನೆಲಮಂಗಲ

Nelamangala

ಬೆಂಗಳೂರಿನಿಂದ 30 ಕಿಮೀ ದೂರದಲ್ಲಿರುವ ಉತ್ತಮ ಸ್ಥಳವೆಂದರೆ ಅದು ನೆಲಮಂಗಲ. ಪಟ್ಟಣದಲ್ಲಿರುವ ದೇವಾಲಯಗಳು ವಾಸ್ತು ಶಿಲ್ಪದ ಮೂಲಕ ಕಣ್ಸೆಳೆದರೆ, ಸ್ಥಳೀಯವಾಗಿ ತಯಾರಿಸುವ ಅಗರಬತ್ತಿ, ರೇಷ್ಮೆ ಬಟ್ಟೆ. ಕರಕುಶಲ ವಸ್ತುಗಳು ಶಾಪಿಂಗ್ ಪ್ರಿಯರನ್ನು ಆಕರ್ಷಿಸುತ್ತದೆ. ಹೀಗಾಗಿ ಒಂದು ದಿನದಲ್ಲಿ ಆರಾಮಾವಾಗಿ ದೇವಾಲಯಗಳಿಗೆ ಭೇಟಿ ನೀಡಿ ಕರಕುಶಲ ವಸ್ತುಗಳನ್ನು ಖರೀದಿಸಬಹುದಾಗಿದೆ. ನೆಲಮಂಗಲಕ್ಕೆ ನೀವು ಬೇಸಿಗೆಯ ಆರಂಭದಲ್ಲಿ ಅಥವಾ ಚಳಿಗಾಲದ ಸಮಯದಲ್ಲಿ ಭೇಟಿ ನೀಡಲು ಉತ್ತಮ ಸಮಯವಾಗಿದೆ.

ನೃತ್ಯಗ್ರಾಮ ಡ್ಯಾನ್ಸ್ ವಿಲೇಜ್

ನೃತ್ಯಗ್ರಾಮ ಡ್ಯಾನ್ಸ್ ವಿಲೇಜ್

ನೃತ್ಯಗ್ರಾಮ ಡ್ಯಾನ್ಸ್ ವಿಲೇಜ್

ಬೆಂಗಳೂರಿನಿಂದ 38 ಕಿಮೀ ದೂರದಲ್ಲಿರುವ ಈ ನೃತ್ಯಗ್ರಾಮ ಡ್ಯಾನ್ಸ್ ವಿಲೇಜ್1990 ರಲ್ಲಿ ಒಡಿಶಾ ನೃತ್ಯಗಾರ್ತಿ ಪ್ರೊತಿಮಾ ಗೌರಿ ಅವರಿಂದ ಆರಂಭವಾಗಿದೆ. ಇದು ಭಾರತೀಯ ನೃತ್ಯಪ್ರಕಾರಗಳಿಗಿರುವ ಮೊದಲ ಆಧುನಿಕ ಗುರುಕುಲವಾಗಿದೆ. ಅಲ್ಲದೆ ಸ್ಥಳೀಯ ವಾಸ್ತುಶೈಲಿಯು ಇಲ್ಲಿ ಇನ್ನೊಂದು ರೀತಿಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಹಸಿರು ತುಂಬಿದ ಪರಿಸರದೊಳಗೆ ಸುಮಾರು 10 ಎಕರೆ ಪ್ರದೇಶದಲ್ಲಿರುವ ನೃತ್ಯಗ್ರಾಮ ಡ್ಯಾನ್ಸ್ ವಿಲೇಜ್ ನೃತ್ಯದ ಬಗೆಗಿನ ಹೊಸ ವಿಚಾರಗಳನ್ನು ಕಲಿಯಲು ಹೇಳಿ ಮಾಡಿಸಿದ ಜಾಗವಾಗಿದೆ. ಇಲ್ಲಿಗೆ ಮಂಗಳವಾರದಿಂದ ಶನಿವಾರದವರೆಗೆ ಭೇಟಿಗೆ ಅವಕಾಶವಿದ್ದು ಬೆಳಗ್ಗೆ 10 ರಿಂದ ಮದ್ಯಾಹ್ನ 2ರವರೆಗೆ ಇಲ್ಲಿ ಸಮಯ ಕಳೆಯಬಹುದಾಗಿದೆ. ಆದರೆ ಇಲ್ಲಿ ಯಾವುದೇ ವಸತಿ ಅಥವಾ ಊಟದ ಸೌಕರ್ಯವಿಲ್ಲ.

ನೃತ್ಯಗ್ರಾಮ ಡ್ಯಾನ್ಸ್ ವಿಲೇಜ್ ನಲ್ಲಿ ಕೆಲವು ನಿರ್ಬಂಧಗಳನ್ನು ವಿಧಿಸಲಾಗಿದೆ ಅವುಗಳೆಂದರೆಇಲ್ಲಿ ಫೋಟೊಗ್ರಫಿ ಅಥವಾ ವಿಡಿಯೋಗ್ರಫಿಗೆ ಅವಕಾಶವಿಲ್ಲ.

ಇಲ್ಲಿ 12ವರ್ಷದೊಳಗಿನ ಮಕ್ಕಳು ಹಾಗೂ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಉಚಿತವಾಗಿ ಪ್ರವೇಶವಿದೆ. ಜತೆಗೆ ಸೋಮವಾರ ಹಾಗೂ ರಾಷ್ಟ್ರೀಯ ರಜಾದಿನಗಳಲ್ಲಿ ಭೇಟಿಗೆ ಅವಕಾಶವಿಲ್ಲ. ಹೀಗಾಗಿ ಭೇಟಿ ನೀಡುವವರು ವಾರದ ದಿನಗಳಲ್ಲೇ ಬಿಡವು ಮಾಡಿಕೊಡು ಭೇಟಿ ನೀಡಬೇಕು.

ರಾಮನಗರ

ರಾಮನಗರ(Pic: Indian Holoday)

ವೀಕೆಂಡ್​ ನಲ್ಲಿ ಚಾರಣಕ್ಕೆ ಹೇಳಿಮಾಡಿಸಿದ ಸ್ಥಳ ರಾಮನಗರ. ಬೆಂಗಳೂರಿನಿಂದ 48 ಕಿಮೀ ದೂರದಲ್ಲಿರುವ ಪಟ್ಟಣದಲ್ಲಿ ಕ್ಯಾಂಪಿಂಗ್, ರಾಕ್ ಕ್ಲೈಂಬಿಂಗ್​ನಂತಹ ಸಾಹಸಗಳನ್ನು ಭೇಟಿ ನೀಡಿದ ವೇಳೆ ನೀವು ತೊಡಗಿಸಿಕೊಳ್ಳಬಹುದು. ರಾಮನಗರದಲ್ಲಿ ಸ್ಥಳಿಯರು ವಿಟೇಂಜ್​ ಮೈಸೂರು ಸೀರೆಗಳನ್ನು ಮಾರಾಟ ಮಾಡುತ್ತಾರೆ. ಹೀಗಾಗಿ ಶಾಪಿಂಗ್ ಪ್ರಿಯರಿಗೂ ರಾಮನಗರ ನೆಚ್ಚಿನ ಸ್ಥಳವಾಗಲಿದೆ. ಚಳಿಗಾಲದಲ್ಲಿ ಇಲ್ಲಿಗೆ ಭೇಟಿ ನೀಡಲು ಉತ್ತಮ ಸಮಯವಾಗಿದೆ.

ದೊಡ್ಡ ಆಲದ ಮರ

Dodaladamara

ದೊಡ್ಡ ಆಲದಮರPic: Indian Holiday

ವಾರದ ಎಲ್ಲಾ ದಿನಗಳಲ್ಲೂ ಪ್ರವಾಸಿಗರ ಭೇಟಿಗೆ ಮುಕ್ತವಾಗಿರುವ ಸ್ಥಳ ದೊಡ್ಡ ಆಲದ ಮರ. ಬೆಂಗಳೂರಿನಿಂದ 30 ಕಿಮೀ ದೂರದಲ್ಲಿರುವ ಈ ಸ್ಥಳ ಪ್ರಕೃತಿ ಪ್ರಿಯರ ಮನಸೆಳೆಯುವಲ್ಲಿ ಅನುಮಾನವಿಲ್ಲ. ಸುಮಾರು 400 ವರ್ಷಗಳಷ್ಟು ಹಳೆಯದಾದ ಈ ಮರ ವಿಶ್ವದ ಅತಿದೊಡ್ಡ ಆಲದ ಮರ ಎಂದು ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಮರ ಸುಮಾರು3 ಎಕರೆ ಭೂಮಿಯಲ್ಲಿ ಆವರಿಸಿಕೊಂಡಿದೆ. ಕೆಲಸದ ಒತ್ತಡದ ನಡುವೆ ಕೆಲಕಾಲ ಪ್ರಕೃತಿಯ ಮಡಿಲಿನಲ್ಲಿ ಸುತ್ತಾಡಿದರೆ ಹೊಸ ಚೈತನ್ಯ ಮೂಡಲಿದೆ. ಅಂತಹ ಆಹ್ಲಾದತೆಯನ್ನು ದೊಡ್ಡ ಆಲದ ಮರದ ನೆರಳು ನೀಡುತ್ತದೆ. ಇಲ್ಲಿಗೆ ಬೆಳಗ್ಗೆ 9ರಿಂದ ರಾತ್ರಿ 10ಗಂಟೆಯವರೆಗೂ ಭೇಟಿ ನೀಡಬಹುದಾಗಿದೆ.

ಸಾವನದುರ್ಗ ಬೆಟ್ಟಗಳು

ಸಾವನದುರ್ಗ

ಸಾವನದುರ್ಗ

ಹಚ್ಚಹಸಿರ ಕಾನನಗಳ ನಡುವೆ ಹಸಿರಹೊದ್ದ ನಾರಿಯಂತೆ ಕಾಣುವ ಎರಡು ಬೆಟ್ಟಗಳು ಸಮೂಹವಾಗುವ ಸ್ಥಳವನ್ನು ಸಾವನದುರ್ಗ ಬೆಟ್ಟಗಳು ಎಂದು ಕರೆಯುತ್ತಾರೆ. ಬೆಂಗಳೂರಿನಿಂದ ಒಂದು ದಿನದಲ್ಲಿ ಚಾರಣ ಮಾಡಬೇಕೆನ್ನುವವರು ಈ ಸ್ಥಳಕ್ಕೆ ಭೇಟಿ ನೀಡಬಹುದು. ಬೆಳಗಿನ ಜಾವ ಹೊರಟು ಸುಮಾರು 2 ಗಂಟೆಗಳ ಚಾರಣವನ್ನು ಮಾಡಿದರೆ ದಿನದ ಆರಂಭಕ್ಕೆ ಹೊಸ ಹುರುಪು ನೀಡುವ ಸೂರ್ಯೋದಯವನ್ನು ಇಲ್ಲಿ ವೀಕ್ಷಿಸಬಹುದು.

ಸಾವನದುರ್ಗಬೆಟ್ಟದ ಆರಂಭದಲ್ಲಿ ಸಾವಂಡಿ ವೀರಭದ್ರ ಸ್ವಾಮಿ ದೇವಾಲಯ ಹಾಗೂ ಲಕ್ಶ್ಮೀ ನರಸಿಂಹಸ್ವಾಮಿ ದೇವಾಲಯ ಸಿಗುತ್ತದೆ. ಹೀಗಾಗಿ ಚಾರಣಕ್ಕೂ ಮೊದಲು ದೇವರ ಆಶೀರ್ವಾದವನ್ನೂ ಪಡೆಯಬಹುದು. ಬೆಂಗಳೂರಿನಿಂದ 49 ಕಿಮೀ ದೂರದಲ್ಲಿರುವ ಈ ಸ್ಥಳಕ್ಕೆ ವಾರದ ಎಲ್ಲಾದಿನವೂ ಭೇಟಿ ನೀಡಬಹುದು.

ಜಾನಪದ ಲೋಕ

ಜಾನಪದ ಲೋಕ Pic: Indian Holiday Site

ಜಾನಪದ ಲೋಕ

ರಾಮನಗರದಲ್ಲಿ ಬೆಂಗಳೂರು ಮೈಸೂರು ಹೆದ್ದಾರಿ 17ರಲ್ಲಿ ಕಾಣಸಿಗುವ ಜಾನಪದ ಲೋಕವು ಜನಪದರ ವಿವಿಧ ಕಲೆಗಳಿಗೆ, ಕರಕುಶಲತೆಗಳನ್ನು ರಕ್ಷಿಸುವ ವಸ್ತು ಸಂಗ್ರಹಾಲಯವಾಗಿದೆ. ಜಾನಪದ ಕಲೆಗೆ ಪ್ರೋತ್ಸಾಹ ನೀಡಿ ಇಂದಿನ ಯುವಜನತೆಗೆ ಅದರ ಪ್ರಾಮುಖ್ಯತೆಯನ್ನು ತಿಳಿಸುವಲ್ಲಿ ಜಾನಪದಲೋಕ ಮುಂಚೂಣಿಯಲ್ಲಿ ಕೆಲಸಮಾಡುತ್ತಿದೆ. ಒಂದೆಡೆ ಕಣ್ಸೆಳೆಯುವ ಹಸ್ತಲಾಂಕಾರವಿದ್ದರೆ ಇನ್ನೊಂದೆಡೆ ಮಣ್ಣಿನ ಮಡಿಕೆಗಳನ್ನು ಮಾಡುವ ಜಾಗವಿದೆ. ಭೇಟಿ ವೇಳೆ ನೀವೂಕೂಡ ಮಣ್ಣಿನ ಮಡಿಕೆಯನ್ನು ಮಾಡಲು ಇಲ್ಲಿ ಅವಕಾಶವಿದೆ. ಹೀಗಾಗಿ ಭೇಟಿಯ ವೇಳೆ ಹೊಸ ಅನುಭವಗಳನ್ನು ಪಡೆಯಬಹುದಾಗಿದೆ. ಬೆಂಗಳೂರಿನಿಂದ 52 ಕಿಮೀ ದೂರದಲ್ಲಿರುವ ಜಾನಪದ ಲೋಕಕ್ಕೆ ಬೆಳಗ್ಗೆ 9 ರಿಂದ ಸಂಜೆ 5.30ರವರಗೆ ಭೇಟಿ ನೀಡಬಹುದಾಗಿದೆ.

Published On - 12:01 pm, Sat, 4 December 21

Click on your DTH Provider to Add TV9 Kannada