Popsicle Idli: ಟ್ವಿಟರ್​​​ನಲ್ಲಿ ಟ್ರೆಂಡ್​​ ಆಗುತ್ತಿದೆ ಬೆಂಗಳೂರಿನ ಸ್ಟಿಕ್ ಇಡ್ಲಿ

|

Updated on: Jan 27, 2023 | 7:04 PM

ಬೆಳಗಿನ ಉಪಹಾರದಲ್ಲಿ ಇಡ್ಲಿಯಂತೂ ಪ್ರತಿ ಮನೆಯಲ್ಲಿ ಇದ್ದೇ ಇರುತ್ತದೆ. ನೀವು ಸಾಮಾನ್ಯವಾಗಿ ಇಡ್ಲಿ, ತಟ್ಟೆ ಇಡ್ಲಿಯನ್ನು ನೋಡಿರುತ್ತೀರಿ. ಆದರೆ ಸ್ಟಿಕ್ ಇಡ್ಲಿ ಕೇಳಿದ್ದೀರಾ? ಸಾಮಾಜಿಕ ಜಾಲತಾಣದಲ್ಲಿ​​ ಸಕ್ಕತ್ತ್ ಆಗಿ ವೈರಲ್ ಆಗ್ತಾ ಇದೆ ಈ ಸ್ಟಿಕ್ ಇಡ್ಲಿ.

Popsicle Idli: ಟ್ವಿಟರ್​​​ನಲ್ಲಿ ಟ್ರೆಂಡ್​​ ಆಗುತ್ತಿದೆ ಬೆಂಗಳೂರಿನ ಸ್ಟಿಕ್ ಇಡ್ಲಿ
Image Credit source: HT
Follow us on

ಬೆಳಗಿನ ಉಪಹಾರದಲ್ಲಿ ಇಡ್ಲಿಯಂತೂ ಪ್ರತಿ ಮನೆಯಲ್ಲಿ ಇದ್ದೇ ಇರುತ್ತದೆ. ನೀವು ಸಾಮಾನ್ಯವಾಗಿ ಇಡ್ಲಿ, ತಟ್ಟೆ ಇಡ್ಲಿಯನ್ನು ನೋಡಿರುತ್ತೀರಿ. ಆದರೆ ಸ್ಟಿಕ್ ಇಡ್ಲಿ ಕೇಳಿದ್ದೀರಾ? ಸಾಮಾಜಿಕ ಜಾಲತಾಣದಲ್ಲಿ​​ ಸಕ್ಕತ್ತ್ ಆಗಿ ವೈರಲ್ ಆಗ್ತಾ ಇದೆ ಈ ಸ್ಟಿಕ್ ಇಡ್ಲಿ. ಏನಿದರ ವಿಶೇಷತೆ ಈ ಸ್ಟೋರಿ ಓದಿ. ಸಾಮಾಜಿಕ ಜಾಲತಾಣದಲ್ಲಿ ಪ್ರತಿದಿನ ಒಂದಲ್ಲ ಒಂದು ರೀತಿಯಲ್ಲಿ ಕೆಲವೊಂದಿಷ್ಟು ಪೋಸ್ಟ್​​ಗಳು, ವಿಡಿಯೋಗಳು ಸಾಕಷ್ಟು ಸದ್ದು ಮಾಡುತ್ತಿರುತ್ತವೆ. ಇದೀಗಾ ಸ್ಟಿಕ್ ಇಡ್ಲಿ ಎಲ್ಲೆಡೆ ವೈರಲ್​​ ಆಗಿದೆ. ಹೌದು ಇದನ್ನು ಕಡ್ಡಿ ಇಡ್ಲಿ ಎಂದು ಕೂಡ ಕರೆಯುತ್ತಾರೆ. ನೀವು ಆರಾಮದಾಯಕವಾಗಿ ಸ್ಟಿಕ್​​ನಲ್ಲಿ ಹಿಡಿದು ಇಡ್ಲಿಯನ್ನು ಸವಿಯಬಹುದು. ಕಡ್ಡಿ ಇಡ್ಲಿ ಮೊದಲ ಬಾರಿಗೆ ಅಕ್ಟೋಬರ್ 2021 ರಲ್ಲಿ ಯೂಟ್ಯೂಬ್‌ನಲ್ಲಿ ವೈರಲ್ ಆಗಿತ್ತು. ಆದರೆ ಇದೀಗಾ ಟ್ವೀಟ್​​​ನಲ್ಲಿ ಸ್ಟಿಕ್ ಇಡ್ಲಿ ಮತ್ತೆ ಭಾರೀ ಚರ್ಚೆಯಾಗುತ್ತಿದೆ. ಆ ಪೋಸ್ಟ್ ಇಲ್ಲಿದೆ.

ಇದನ್ನೂ ಓದಿ: ಪರೀಕ್ಷೆ ಸಮಯದಲ್ಲಿ ಎಚ್ಚರವಾಗಿರಬೇಕೆಂದು ಹೆಚ್ಚು ಬಾರಿ ಕಾಫಿ ಕುಡಿಯುತ್ತೀರಾ, ಅಡ್ಡ ಪರಿಣಾಮಗಳ ತಿಳಿಯಿರಿ

ಬೆಂಗಳೂರಿನ ಆಹಾರ ಕ್ಷೇತ್ರವು ಹೊಸತಾಗಿ ಸ್ಟಿಕ್ ಇಡ್ಲಿ ಪರಿಕಲ್ಪನೆಯನ್ನು ತಂದಿದೆ. ನೀವಿಲ್ಲಿ ಇಡ್ಲಿಯನ್ನು ಸಾಂಬಾರು ಚಟ್ನಿಯೊಂದಿಗೆ ಸ್ಟಿಕ್ ಬಳಸಿ ಕ್ಯಾಂಡಿಯಂತೆ ಸವಿಯಬಹುದಾಗಿದೆ. ಈ ಟ್ವೀಟ್ ಪೋಸ್ಟ್ 90,000 ಕ್ಕೂ ಹೆಚ್ಚು ವೀಕ್ಷಣೆಯನ್ನು ಪಡೆದಿದೆ. ಈ ಪೋಸ್ಟ್​​​ನ ಇನ್ನೊಂದು ವಿಶೇಷತೆ ಎಂದರೆ ಕೇಂದ್ರದ ವಾಣಿಜ್ಯೋದ್ಯಮ, ಕೌಶಲ್ಯಾಭಿವೃದ್ಧಿ, ಎಲೆಕ್ಟ್ರಾನಿಕ್ಸ್ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಕೂಡ ಈ ಪೋಸ್ಟ್​​ ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿದರು, ಮಕ್ಕಳಿಗೆ ಹೌದು ಏಕೆಂದರೆ ಇದು ತಿನ್ನಲು ಸುಲಭ ಎಂದು ಕಾಮೆಂಟ್​ ಮಾಡಿದ್ದಾರೆ. ಇನ್ನೂ ಕೆಲವೊಂದಿಷ್ಟು ಬಳಕೆದಾರರು ಆಹಾರದಲ್ಲಿ ಯಾವುದೇ ಹೊಸತನ ಬೇಡ, ಇಡ್ಲಿ ಬಾಲ್ಯದಿಂದಲೂ ಸಾಕಷ್ಟು ನೆನಪುಗಳಿವೆ ಹೊಸ ಆವಿಷ್ಕಾರ ಬೇಡ ಎಂದು ಪ್ರತಿಕ್ರಿಯಿಸಿದ್ದಾರೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

Published On - 7:03 pm, Fri, 27 January 23