AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Coffee Side Effects: ಪರೀಕ್ಷೆ ಸಮಯದಲ್ಲಿ ಎಚ್ಚರವಾಗಿರಬೇಕೆಂದು ಹೆಚ್ಚು ಬಾರಿ ಕಾಫಿ ಕುಡಿಯುತ್ತೀರಾ, ಅಡ್ಡ ಪರಿಣಾಮಗಳ ತಿಳಿಯಿರಿ

ಪರೀಕ್ಷೆಯು ಸ್ವಲ್ಪವೇ ಸ್ವಲ್ಪ ದಿನಗಳಿರುವ ಸಮಯ ಅಥವಾ ಪರೀಕ್ಷೆಯ ಹಿಂದಿನ ದಿನ ನೀವು ಹೆಚ್ಚು ಹೊತ್ತು ಎಚ್ಚರವಾಗಿರಲು ಪದೇ ಪದೇ ಕಾಫಿ ಕುಡಿಯುತ್ತಿದ್ದರೆ ಕೂಡಲೇ ಬಿಟ್ಟುಬಿಡಿ.

Coffee Side Effects: ಪರೀಕ್ಷೆ ಸಮಯದಲ್ಲಿ ಎಚ್ಚರವಾಗಿರಬೇಕೆಂದು ಹೆಚ್ಚು ಬಾರಿ ಕಾಫಿ ಕುಡಿಯುತ್ತೀರಾ, ಅಡ್ಡ ಪರಿಣಾಮಗಳ ತಿಳಿಯಿರಿ
ಕಾಫಿ
ನಯನಾ ರಾಜೀವ್
|

Updated on: Jan 27, 2023 | 12:39 PM

Share

ಪರೀಕ್ಷೆಯು ಸ್ವಲ್ಪವೇ ಸ್ವಲ್ಪ ದಿನಗಳಿರುವ ಸಮಯ ಅಥವಾ ಪರೀಕ್ಷೆಯ ಹಿಂದಿನ ದಿನ ನೀವು ಹೆಚ್ಚು ಹೊತ್ತು ಎಚ್ಚರವಾಗಿರಲು ಪದೇ ಪದೇ ಕಾಫಿ ಕುಡಿಯುತ್ತಿದ್ದರೆ ಕೂಡಲೇ ಬಿಟ್ಟುಬಿಡಿ. ಯಾವಾಗ ಯಾವ ಪ್ರಮಾಣದಲ್ಲಿ ಕಾಫಿಯನ್ನು ಕುಡಿಯುವುದು ಸರಿ ಎಂದು ತಿಳಿದುಕೊಳ್ಳುವುದು ಬಹಳ ಮುಖ್ಯ. ಇಷ್ಟೇ ಅಲ್ಲ, ಕಾಫಿ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂಬುದನ್ನು ಸಹ ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ.

ಹೆಚ್ಚಿನ ಪ್ರಮಾಣದಲ್ಲಿ ಕಾಫಿ ಕುಡಿಯುವುದು ಕಾಫಿ ಕುಡಿಯುವುದು ಕಡ್ಡಾಯವಾಗಿದ್ದರೂ, ಅದರ ಪ್ರಮಾಣವನ್ನು ಮಿತಿಗೊಳಿಸುವುದು ಅವಶ್ಯಕ. ದಿನಕ್ಕೆ ನಾಲ್ಕು ಕಪ್ ಕಾಫಿಗಿಂತ ಹೆಚ್ಚು ಕುಡಿಯದಿರುವುದು ಉತ್ತಮ. ಹೆಚ್ಚು ಕಾಫಿ ಕುಡಿಯುವ ಅಭ್ಯಾಸವು ಸ್ವಲ್ಪ ಸಮಯದ ನಂತರ ತಲೆನೋವು ಉಂಟುಮಾಡಬಹುದು. ಕಾಫಿ ಹೃದಯ ಬಡಿತದ ಮೇಲೂ ಪರಿಣಾಮ ಬೀರುತ್ತದೆ. ಇದು ಅಸಾಮಾನ್ಯವಾಗಿರಬಹುದು.

ಮತ್ತಷ್ಟು ಓದಿ: Black Coffe: ನಿಮ್ಮ ತೂಕ ಇಳಿಸುವಲ್ಲಿ ಬ್ಲ್ಯಾಕ್ ಕಾಫಿ ನಿಜವಾಗಿಯೂ ಪರಿಣಾಮಕಾರಿಯೇ?

ಸಕ್ಕರೆ ಕಡಿಮೆ ಪ್ರಮಾಣದಲ್ಲಿರಲಿ ನೀವು ಸಿಹಿ ಕಾಫಿ ಕುಡಿಯಲು ಇಷ್ಟಪಡುತ್ತಿದ್ದರೆ, ಸಕ್ಕರೆಯ ಪ್ರಮಾಣದ ಕಡೆಗೆ ಗಮನ ಕೊಡಿ. ಹೆಚ್ಚಿನ ಸಕ್ಕರೆಯನ್ನು ಹಾಕಿ ಕಾಫಿ ಕುಡಿಯುವುದು ದೇಹಕ್ಕೆ ಹಾನಿಕಾರಕವಾಗಿದೆ. ಹೆಚ್ಚು ಸಕ್ಕರೆ ಸೇವನೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದಲ್ಲದೆ, ಹೆಚ್ಚುವರಿ ಸಕ್ಕರೆಯಿಂದಲೂ ಆಲಸ್ಯ ಬರಬಹುದು. ಇದು ಅಧ್ಯಯನದ ಮೇಲೆ ಪರಿಣಾಮ ಬೀರುತ್ತದೆ.

ಸುಸ್ತಾಗುವ ಭಯ ಕಾಫಿ ಕುಡಿದ ತಕ್ಷಣ ನಿಮಗೆ ಚೈತನ್ಯ ದೊರೆಯಬಹುದು, ಆದರೆ ಸ್ವಲ್ಪ ಸಮಯದ ನಂತರ ತುಂಬಾ ಸುಸ್ತಿನ ಅನುಭವವಾಗುತ್ತದೆ. ನಿದ್ರೆ  ಮಾಡುವ ಮೊದಲು ಕಾಫಿಯ ಪ್ರಮಾಣವು ಅಧಿಕವಾಗಿದ್ದರೆ, ಆಯಾಸ ಮತ್ತು ಮೂಡ್ ಸ್ವಿಂಗ್ ಆಗಬಹುದು.

ಪ್ರತಿರಕ್ಷಣಾ ವ್ಯವಸ್ಥೆ ಮೇಲೆ ಪರಿಣಾಮ ಬೀರುವುದು ಕಾಫಿಯಲ್ಲಿರುವ ಕೆಫೀನ್ ತ್ವರಿತ ಪರಿಹಾರವನ್ನು ನೀಡುತ್ತದೆ. ಇದರ ಡೋಪಮೈನ್ ಮತ್ತು ಸೆರಾಟೋನಿನ್ ದೇಹವನ್ನು ವಿಶ್ರಾಂತಿ ಸ್ಥಿತಿಗೆ ಕೊಂಡೊಯ್ಯುತ್ತದೆ. ದೀರ್ಘಾವಧಿಯಲ್ಲಿ, ಈ ವಸ್ತುಗಳು ದೇಹದ ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತವೆ. ಇದು ಹಸಿವು, ನಿದ್ರೆ ಮತ್ತು ಜೀರ್ಣಕ್ರಿಯೆಯ ಮೇಲೂ ಪರಿಣಾಮ ಬೀರುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!