Chocolate Breakfast: ಚಾಕೊಲೇಟ್ ರುಚಿಯೊಂದಿಗಿನ ಬೆಳಗಿನ ಸಿಂಪಲ್ ಉಪಹಾರ ತಯಾರಿಸಿ
ನಿಮ್ಮ ದಿನವನ್ನು ಆರೋಗ್ಯಕರವಾಗಿ ಸಿಹಿಯೊಂದಿಗೆ ಪ್ರಾರಂಭಿಸಿ. ನೀವೂ ಇದಕ್ಕಾಗಿ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ. ಕೇವಲ ಹತ್ತು ನಿಮಿಷದಲ್ಲಿ ನೀವು ಹಾಟ್ ಚಾಕೊಲೇಟ್ ಬೌಲ್ ತಯಾರಿಸಬಹುದು.
ನಿಮ್ಮ ದಿನವನ್ನು ಚಾಕೊಲೇಟ್ ರುಚಿಯೊಂದಿಗೆ ಪ್ರಾರಂಭಿಸಲು ಬಯಸಿದ್ದೀರಾ? ಆದರೆ ಸಾಮಾನ್ಯ ಶೇಕ್ ಅಥವಾ ಸ್ಮೂಥಿ ಸವಿಯಲು ಇಷ್ಟವಿಲ್ಲದಿದ್ದರೆ, ಈ ಸಿಂಪಲ್ ರೆಸಿಪಿ ತಯಾರಿಸಿ. ಹಾಟ್ ಚಾಕೊಲೇಟ್ ಬೌಲ್ ಹಾಲಿನಿಂದ ಮಾಡುವ ರೆಸಿಪಿಯಾಗಿದ್ದು, ಇದು ನಿಮ್ಮ ಆರೋಗ್ಯಕ್ಕೂ ಸಾಕಷ್ಟು ಪ್ರಯೋಜನವನ್ನು ನೀಡುತ್ತದೆ. ಈ ಚಾಕೊಲೇಟ್ ಉಪಹಾರವನ್ನು ಇನ್ನಷ್ಟು ಆರೋಗ್ಯಕರವಾಗಿಸಲು ನೀವು ಓಟ್ಸ್, ಹಣ್ಣುಗಳು, ಡ್ರೈ ಫ್ರೂಟ್ಸ್ ಸೇರಿಸಬಹುದು. ಆದ್ದರಿಂದ ನಿಮ್ಮ ದಿನವನ್ನು ಆರೋಗ್ಯಕರವಾಗಿ ಸಿಹಿಯೊಂದಿಗೆ ಪ್ರಾರಂಭಿಸಿ. ನೀವೂ ಇದಕ್ಕಾಗಿ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ. ಕೇವಲ ಹತ್ತು ನಿಮಿಷದಲ್ಲಿ ನೀವು ಹಾಟ್ ಚಾಕೊಲೇಟ್ ಬೌಲ್ ತಯಾರಿಸಬಹುದು.
ಹಾಟ್ ಚಾಕೊಲೇಟ್ ಬೌಲ್ ರೆಸಿಪಿ:
ಹಾಟ್ ಚಾಕೊಲೇಟ್ ಬೌಲ್ಗೆ ಬೇಕಾಗುವ ಸಾಮಾಗ್ರಿಗಳು:
2 ಚಮಚ ಕೋಕೋ ಪೌಡರ್ 1/2 ಕಪ್ ಫ್ರೆಶ್ ಕ್ರೀಮ್ 3 ಚಮಚ ಬಾದಾಮಿ ಚೂರುಗಳು 2 ಚಮಚ ತೆಂಗಿನ ತುರಿ 1/4 ಕಪ್ ಡಾರ್ಕ್ ಚಾಕೊಲೇಟ್ 1ಕಪ್ ಪೂರ್ಣ ಕೆನೆ ಹಾಲು 1 ಚಮಚ ಜೋಳದ ಹಿಟ್ಟು 1 ಬಾಳೆಹಣ್ಣು 2 ಚಮಚ ಸಕ್ಕರೆ 2 ದಾಲ್ಚಿನ್ನಿ
ಇದನ್ನೂ ಓದಿ: ಬೆಳ್ಳುಳ್ಳಿಯಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಎಂದು ತಿಳಿದಿದೆಯೇ?
ಹಾಟ್ ಚಾಕೊಲೇಟ್ ಬೌಲ್ ಮಾಡುವ ವಿಧಾನ:
ಹಂತ 1 ಹಾಲು ಕುದಿಸಿ:
ಈ ಸುಲಭ ಉಪಹಾರ ಪಾಕವಿಧಾನವನ್ನು ಪ್ರಾರಂಭಿಸಲು, ಒಂದು ಪಾತ್ರೆ ಅಥವಾ ಪ್ಯಾನ್ ತೆಗೆದುಕೊಂಡು ಹಾಲನ್ನು ಸೇರಿಸಿ. ಹಾಲು ಕುದಿಬರುತ್ತಿದ್ದಂತೆ ಅದಕ್ಕೆ ಡಾರ್ಕ್ ಚಾಕೊಲೇಟ್ ಸೇರಿಸಿ ತಳ ಹಿಡಿಯದಂತೆ ಚೆನ್ನಾಗಿ ಕುದಿಸಿ.
ಹಂತ 2 ಕೋಕೋ ಪೌಡರ್ ಸೇರಿಸಿ:
ಹಾಲು ಕುದಿಯುತ್ತಿರುವಾಗಲೇ ಅದಕ್ಕೆ ಕೋಕೋ ಪೌಡರ್ ಹಾಕಿ ಬೆರೆಸಿ. ಜೊತೆಗೆ ಜೋಳದ ಹಿಟ್ಟು ಸೇರಿಸಿ. ಈ ಮಿಶ್ರಣ ಉಂಡೆಗಟ್ಟದಂತೆ ಕೈಯಾಡಿಸುತ್ತಾ ಇರಿ. ಜೊತೆಗೆ ತಳ ಹಿಡಿಯದಂತೆ ನೋಡಿಕೊಳ್ಳಿ.
ಹಂತ 3 ಚೆನ್ನಾಗಿ ಬೆರೆಸಿ:
ನಂತರ ಇದಕ್ಕೆ ಫ್ರೆಶ್ ಕ್ರೀಮ್, ಬಾದಾಮಿ ಚೂರುಗಳು, ತೆಂಗಿನಕಾಯಿ ತುರಿ ಸೇರಿಸಿ. ಬಾದಾಮಿ ಮತ್ತು ತೆಂಗಿನಕಾಯಿ ತುರಿಯನ್ನು ಅಲಂಕಾರಕ್ಕಾಗಿ ಸ್ವಲ್ಪ ಉಳಿಸಿ. ಈ ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿ.
ಹಂತ 4 ಸವಿಯಿರಿ:
ಈಗ ಒಲೆಯಿಂದ ಕೆಳಗಿಳಿಸಿ ಮತ್ತು ಒಂದು ಬಟ್ಟಲಿನಲ್ಲಿ ಸುರಿಯಿರಿ. ನಂತರ ಬಾಳೆಹಣ್ಣನ್ನು ಚಿಕ್ಕದಾಗಿ ಕತ್ತರಿಸಿ ಸೇರಿಸಿ. ಸ್ವಲ್ಪ ದಾಲ್ಚಿನ್ನಿ, ತೆಂಗಿನಕಾಯಿ ತುರಿ ಮತ್ತು ಬಾದಾಮಿ ಚೂರುಗಳಿಂದ ಅಲಂಕರಿಸಿ ಸವಿಯಿರಿ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: