AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: ಸುಲಭವಾಗಿ ತಯಾರಿಸಿ ಆವಕಾಡೊ ಬನಾನಾ ಸ್ಮೂಥಿ

ಈ ಆವಕಾಡೊ ಬನಾನಾ ಸ್ಮೂಥಿ ರೆಸಿಪಿಯು ದೇಹದಲ್ಲಿನ ಸಾಕಷ್ಟು ಸಮಸ್ಯೆಗೆ ಪರಿಹಾರವನ್ನು ನೀಡುವ ಅಂಶವನ್ನು ಹೊಂದಿದ್ದು ಜೊತೆಗೆ ರುಚಿಕರವಾಗಿದೆ.

Health Tips:  ಸುಲಭವಾಗಿ ತಯಾರಿಸಿ ಆವಕಾಡೊ ಬನಾನಾ ಸ್ಮೂಥಿ
Banana Avocado Smoothie
TV9 Web
| Edited By: |

Updated on: Oct 29, 2022 | 5:29 PM

Share

ಬದಲಾದ ಜೀವನ ಪದ್ಧತಿಯಿಂದಾಗಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ. ದೇಹಕ್ಕೆ ಆರೋಗ್ಯವನ್ನು ನೀಡುವ ಪ್ರಮುಖ ಪೌಷ್ಟಿಕಾಂಶವುಳ್ಳ ಆಹಾರಗಳಲ್ಲಿ ಆವಕಾಡೊ, ಬನಾನಾಗಳೂ ಕೂಡ ಪ್ರಮುಖವಾಗಿದೆ. ಆದ್ದರಿಂದ ಅತ್ಯಂತ ಸುಲಭವಾಗಿ ಕೇವಲ 5 ನಿಮಿಷದಲ್ಲಿ ರುಚಿಕರ ಸ್ಮೂಥಿ ತಯಾರಿಸಿ. ಈ ಆವಕಾಡೊ ಬನಾನಾ ಸ್ಮೂಥಿ ರೆಸಿಪಿಯು ದೇಹದಲ್ಲಿ ಆಗುವ ಸಾಕಷ್ಟು ಆರೋಗ್ಯ ಸಮಸ್ಯೆಗಳಿಗೆ ಪರಿಹಾರವನ್ನು ನೀಡುವ ಅಂಶವನ್ನು ಹೊಂದಿದ್ದು, ಇದರ ಜೊತೆಗೆ ರುಚಿಕರವಾಗಿದೆ.

ಇದು ಬೆಳಗಿನ ಉಪಾಹಾರಕ್ಕಾಗಿ ಸೂಕ್ತವಾದ ಪಾಕವಿಧಾನವಾಗಿದ್ದು, ನಿಮ್ಮ ದೇಹದಲ್ಲಿನ ತೂಕ ಇಳಿಸಲು ಸಹಕಾರಿಯಾಗಿದೆ. ಕೇವಲ ಆವಕಾಡೊ, ಬಾಳೆಹಣ್ಣು, ಬಾದಾಮಿ ಹಾಲು ಮತ್ತು ಜೇನುತುಪ್ಪದಿಂದ ತಯಾರಿಸಲಾದ ಈ ಸೂಪರ್ ಪೌಷ್ಠಿಕಾಂಶದ ಸ್ಮೂಥಿಯು ದೇಹಕ್ಕೆ ಸಾಕಷ್ಟು ಮಟ್ಟದ ಪೋಷಕಾಂಶಗಳನ್ನು ನೀಡುತ್ತದೆ. ನಿಮ್ಮ ಆಯ್ಕೆಯ ಪ್ರಕಾರ ನೀವು ಪದಾರ್ಥಗಳನ್ನು ಸರಿಹೊಂದಿಸಬಹುದು. ನೀವು ಜೇನುತುಪ್ಪದ ಬದಲಿಗೆ ಮಾಪಲ್ ಸಿರಪ್ ಅನ್ನು ಸೇರಿಸಬಹುದು ಮತ್ತು ರುಚಿಗೆ ಚಿಯಾ ಅಥವಾ ಸಬ್ಜಾ ಬೀಜಗಳನ್ನು ಕೂಡ ಸೇರಿಸಬಹುದು. ಆದ್ದರಿಂದ, ಒಮ್ಮೆ ಈ ಪಾಕವಿಧಾನವನ್ನು ಮನೆಯಲ್ಲಿ ಪ್ರಯತ್ನಿಸಿ.

ಬೇಕಾಗುವ ಪದಾರ್ಥಗಳು

  1. ಅವಕಾಡೋ ಅರ್ಧ ಭಾಗ
  2. ಬಾದಾಮಿ ಹಾಲು – 1 ಕಪ್
  3. ಬಾಳೆಹಣ್ಣು – 1
  4. ಜೇನು ತುಪ್ಪ -2 ಚಮಚ

ಇದನ್ನು ಓದಿ: Banana Recipes: ಬಾಳೆ ಹಣ್ಣಿನಿಂದ ಮಾಡಬಹುದು ವಿವಿಧ ರೆಸಿಪಿಗಳು

ಮಾಡುವ ವಿಧಾನ

  • ಮೊದಲಿಗೆ ಅರ್ಧ ಭಾಗದಷ್ಟು ತೆಗೆದುಕೊಂಡ ಅವಕಾಡೋ ಮತ್ತು ಒಂದು ಬಾಳೆಹಣ್ಣನ್ನು ಚೆನ್ನಾಗಿ ತುಂಡರಿಸಿ. ನಂತರ ಅದನ್ನು ಒಂದು ಮಿಕ್ಸಿ ಜಾರಿಗೆ ಹಾಕಿ, ಅದಕ್ಕೆ ಬಾದಾಮಿ ಹಾಲು ಸೇರಿಸಿ.
  • ನಂತರ ಎರಡು ಚಮಚದಷ್ಟು ಜೇನು ತುಪ್ಪ ಸೇರಿಸಿ. ಚೆನ್ನಾಗಿ ರುಬ್ಬಿಕೊಳ್ಳಿ.
  • ನಂತರ ಒಂದು ಗ್ಲಾಸಿಗೆ ಸುರಿದು ಪಿಸ್ತಾ ಬೀಜಗಳಿಂದ ಅಲಂಕರಿಸಿ
  • ಆರೋಗ್ಯಕರ ಹಾಗೂ ರುಚಿಕರ ಈ ಸ್ಮೂಥಿಯನ್ನು ನಿಮ್ಮ ಪ್ರೀತಿ ಪಾತ್ರರಿಗೆ ಸವಿಯಲು ನೀಡಿ.

ಆವಕಾಡೊ ಬನಾನಾ ಸ್ಮೂಥಿಯು ಉತ್ತಮ ಆರೋಗ್ಯವನ್ನು ನೀಡುವುದರ ಜೊತೆಗೆ ನಿಮ್ಮ ದೇಹದ ತೂಕವನ್ನು ಸಮಸ್ಥಿತಿಗೆ ತರಲು ಸಹಾಯ ಮಾಡುತ್ತದೆ ಮತ್ತು ದೇಹದಲ್ಲಿನ ರಕ್ತದೊತ್ತಡಕ್ಕೂ ಪರಿಹಾರ ನೀಡುತ್ತದೆ. ಆದ್ದರಿಂದ ಸುಲಭವಾಗಿ ಮನೆಯಲ್ಲಿಯೇ ತಯಾರಿಸಬಹುದಾದ ರೆಸಿಪಿಯನ್ನು ಒಮ್ಮೆ ತಯಾರಿಸಿ.

(ಈ ಮೇಲಿನ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಒಳಗೊಂಡಿರುತ್ತದೆ.)

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ