ವರ್ಷದ ಮೊದಲ ತಿಂಗಳು ಕೊರೆಯುವ ಚಳಿಯಲ್ಲಿ ಪ್ರಯಾಣಿಸಲು ಬಯಸುತ್ತಿದ್ದೀರಾ? ಈ ತಿಂಗಳಲ್ಲಿ 26 ರಿಂದ 28 ವರೆಗೆ ದೀರ್ಘ ವಾರಾಂತ್ಯ ಇರುವುದರಿಂದ ಈ ಸಮಯದಲ್ಲಿ ಭಾರತದ ಈ ಸುಂದರ ತಾಣಗಳಿಗೆ ಭೇಟಿ ನೀಡಿ. ಕೊರೆಯುವ ಚಳಿಯಲ್ಲಿ ನಿಮ್ಮ ಪ್ರೀತಿ ಪಾತ್ರರೊಂದಿಗೆ ಪ್ರಕೃತಿಯ ಸೊಬಗನ್ನು ಕಣ್ತುಂಬಿಕೊಳ್ಳಿ. ನೀವು ಕೇವಲ ಮೂರು ದಿನಗಳಲ್ಲಿ ಭೇಟಿ ನೀಡಬಹುದಾದ ತಾಣಗಳ ಕುರಿತು ಮಾಹಿತಿ ಇಲ್ಲಿದೆ.
ಉತ್ತರಾಖಂಡವು ಗಿರಿಧಾಮಗಳಿಂದ ಆವೃತವಾಗಿದ್ದು, ಹಚ್ಚ ಹಸಿರಿನ ಪರಿಸರ ಹಾಗೂ ಬೆಟ್ಟ ಗುಡ್ಡಗಳಿಂದ ಕೂಡಿದೆ. ನೀವಿಲ್ಲಿ ಜೋರಿ ಪಾಯಿಂಟ್, ಜಾಗೇಶ್ವರ ದೇವಸ್ಥಾನ, ಸೂರ್ಯ ದೇವಾಲಯ, ಬಿನ್ಸಾರ್ ಮುಂತಾದ ಸುಂದರ ಸ್ಥಳಗಳನ್ನು ನೋಡಬಹುದು. ಇದಲ್ಲದೇ ಅಲ್ಮೋರಾದಲ್ಲಿ ಅನೇಕ ಮಾರುಕಟ್ಟೆಗಳಿವೆ, ಅಲ್ಲಿ ನೀವು ಸ್ಥಳೀಯ ಬಟ್ಟೆಗಳನ್ನು ಮತ್ತು ಇತರ ಅನೇಕ ಸ್ಥಳೀಯ ವಸ್ತುಗಳನ್ನು ಖರೀದಿಸಬಹುದು.
ಪಿಂಕ್ ಸಿಟಿ ಎಂದೂ ಕರೆಯಲ್ಪಡುವ ಜೈಪುರ, ಭಾರತದ ರಾಜಸ್ಥಾನದ ಹೃದಯಭಾಗದಲ್ಲಿರುವ ಒಂದು ಮೋಡಿಮಾಡುವ ತಾಣವಾಗಿದೆ. ಇಲ್ಲಿ ನೀವು ಐತಿಹಾಸಿಕ ಕೋಟೆ, ರಾಜಸ್ಥಾನಿ ಸಂಸ್ಕೃತಿಯನ್ನು ಕಣ್ತುಂಬಿಸಿಕೊಳ್ಳಬಹುದು. ಜೊತೆಗೆ ಸ್ಥಳೀಯ ಆಹಾರವನ್ನು ಸವಿಯಿರಿ.
ಇದನ್ನೂ ಓದಿ: ಉಣ್ಣೆ ಬಟ್ಟೆ ಧರಿಸಿ ಮೈ ಮೇಲೆ ದದ್ದು ಮತ್ತು ತುರಿಕೆ ಹೆಚ್ಚಾಗುತ್ತಿದೆಯೇ? ಈ ಸಲಹೆ ಅನುಸರಿಸಿ
ಜನವರಿಯಲ್ಲಿ ರಾಜಸ್ಥಾನದ ಹವಾಮಾನವು ತುಂಬಾ ಆಹ್ಲಾದಕರವಾಗಿರುತ್ತದೆ.ನೀವು ಇಲ್ಲಿ ಬ್ಲೂ ಸಿಟಿಯನ್ನು ನಿಮ್ಮ ಪ್ರಯಾಣದ ತಾಣವನ್ನಾಗಿ ಮಾಡಿಕೊಳ್ಳಬಹುದು. ಮರುಭೂಮಿಯ ಅಂಚಿನಲ್ಲಿರುವ ಈ ನಗರದಲ್ಲಿ ಭೇಟಿ ನೀಡಲು ಹಲವು ಸ್ಥಳಗಳಿವೆ. ರಾಜಸ್ಥಾನಿ ಸಂಸ್ಕೃತಿಯ ಹೊರತಾಗಿ, ದಾಲ್-ಬಾಟಿ ಚುರ್ಮಾದಂತಹ ಸ್ಥಳೀಯ ಆಹಾರವನ್ನು ಇಲ್ಲಿ ಆನಂದಿಸಬಹುದು.
ಚಳಿಗಾಲದಲ್ಲಿ ಈ ಸ್ಥಳವು ಹೆಚ್ಚು ಸುಂದರವಾಗಿರುತ್ತದೆ. ರಣಥಂಬೋರ್ ರಾಷ್ಟ್ರೀಯ ಉದ್ಯಾನವನವು ಎಷ್ಟು ಜನಪ್ರಿಯವಾಗಿದೆ ಎಂದರೆ ಪ್ರವಾಸಿಗರು ವರ್ಷವಿಡೀ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಉದ್ಯಾನವನದೊಳಗೆ ಇರುವ ಐತಿಹಾಸಿಕ ರಣಥಂಬೋರ್ ಕೋಟೆ, ವನ್ಯಜೀವಿ ಸಫಾರಿ ಮುಂತಾದವುಗಳನ್ನು ಆನಂದಿಸಲು ಇಲ್ಲಿಗೆ ಭೇಟಿ ನೀಡಿ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:24 pm, Tue, 2 January 24