
ಹಾರಬಲ್ಲ ಏಕೈಕ ಸಸ್ತನಿಯಾಗಿರುವ ಈ ಬಾವಲಿಗಳು (Bats) ಎಂದರೆ ಕೆಲವರಿಗೆ ಅದೇನೋ ಭಯ. ಹಗಲಿನಲ್ಲಿ ಮರಗಳಲ್ಲಿ ತಲೆಕೆಳಗಾಗಿ ನೇತಾಡಿಕೊಂಡು ಮಲಗಿಕೊಂಡಿದ್ದರೆ, ರಾತ್ರಿಯ ವೇಳೆ ಸದಾ ಚಟುವಟಿಕೆಯಿಂದಿರುತ್ತವೆ. ನೋಡುವುದಕ್ಕೆ ವಿಚಿತ್ರ ಹಾಗೂ ಭಯ ಹುಟ್ಟಿಸುವ ಈ ಜೀವಿಯನ್ನು ಪೂಜಿಸುವ ಗ್ರಾಮವೊಂದಿದೆ. ಇದು ನಿಮಗೆ ವಿಚಿತ್ರ ಎನಿಸಿದ್ರು ಇದನ್ನು ನೀವು ನಂಬಲೇ ಬೇಕು. ಬಿಹಾರದ ವೈಶಾಲಿ ಜಿಲ್ಲೆಯ ಸರ್ಸಾಯಿ ಗ್ರಾಮದ (Sarsai village in Vaishali district of Bihar) ಜನರು ಬಾವಲಿಯನ್ನು ದೇವರಂತೆ ಪೂಜಿಸುತ್ತಾರೆ. ಈ ರೀತಿ ಆಚರಣೆ ಹುಟ್ಟಿಕೊಂಡದ್ದು ಹೇಗೆ? ಇಲ್ಲಿದೆ ಮಾಹಿತಿ.
ಬಾವಲಿಗಳನ್ನು ಪೂಜಿಸುವ ಗ್ರಾಮ ಇದು
ಬಿಹಾರದ ವೈಶಾಲಿ ಜಿಲ್ಲೆಯಲ್ಲಿರುವ ಸರ್ಸಾಯಿ ಗ್ರಾಮದ ಜನರು ಬಾವಲಿಗಳನ್ನು ಭಕ್ತಿಭಾವದಿಂದ ಪೂಜಿಸುತ್ತಾರೆ. ನಾವೆಲ್ಲರೂ ಸಸ್ತನಿ ಜೀವಿಗಳೆಂದುಕೊಂಡಿರುವ ಬಾವಲಿಯನ್ನು ಈ ಗ್ರಾಮದ ಜನರು ಲಕ್ಷ್ಮೀ ದೇವಿಯ ಸಂಕೇತವೆಂದು ಪೂಜಿಸುತ್ತಾರೆ. ಗ್ರಾಮಸ್ಥರು ಬಾವಲಿಗಳನ್ನು ಅದೃಷ್ಟ ಮತ್ತು ಸಮೃದ್ಧಿಯ ಸಂಕೇತವಾಗಿದೆಯಂತೆ. ಇವರನ್ನು ಸದಾ ಈ ಬಾವಲಿಗಳೇ ರಕ್ಷಿಸುತ್ತವೆಯಂತೆ. ಹೀಗಾಗಿ ಕೆಟ್ಟ ಶಕುನಗಳಿಂದ ರಕ್ಷಿಸುವ ದೇವದೂತರು ಎಂದು ನಂಬಲಾಗಿದೆ. ಇನ್ನು ಲಕ್ಷ್ಮಿ ದೇವಿಯ ಸ್ವರೂಪ ಎಂದು ನಂಬಿರುವ ಕಾರಣ ಈ ಗ್ರಾಮದ ಜನರಿಗೆ ಇಲ್ಲಿಯವರೆಗೆ ಹಣದ ಸಮಸ್ಯೆಯೇ ಬಂದಿಲ್ಲ ಎನ್ನಲಾಗಿದೆ. ಯಾವುದೇ ಧಾರ್ಮಿಕ ಸಮಾರಂಭಗಳಿಗೆ ಈ ಬಾವಲಿಗಳು ಇರಲೇಬೇಕು ಎನ್ನುವುದು ಇಲ್ಲಿನವರ ನಂಬಿಕೆ. ಹೀಗಾಗಿ ಮಂಗಳಕರ ಸಮಾರಂಭಗಳು ನಡೆದಾಗ ಬಾವಲಿಗಳಿಗೆ ಸಾಂಪ್ರದಾಯಿಕ ನೈವೇದ್ಯವವಿಡಲಾಗುತ್ತದೆ.
ಈ ಆಚರಣೆ ಹುಟ್ಟಿಕೊಂಡದ್ದು ಹೀಗೆ
ಬಾವಲಿಗಳ ಪೂಜಿಸುವ ಆಚರಣೆ ಹುಟ್ಟಿಕೊಂಡದ್ದು ಮಧ್ಯ ಯುಗದಲ್ಲಿ ಎನ್ನಲಾಗಿದೆ. ಮಧ್ಯಯುಗದಲ್ಲಿ ಈ ಗ್ರಾಮದಲ್ಲಿ ಸಾಂಕ್ರಾಮಿಕ ರೋಗದಿಂದ ಜನರು ತೊಂದರೆಗೆ ಒಳಗಾಗಿದ್ದರು. ಈ ಸಮಯದಲ್ಲಿ ಬಾವಲಿಗಳು ಗ್ರಾಮಕ್ಕೆ ಬಂದವು. ಈ ಬಾವಲಿಗಳ ಆಗಮನದ ಬಳಿಕ ಈ ಸಾಂಕ್ರಾಮಿಕ ರೋಗಕ್ಕೆ ಮುಕ್ತಿ ಸಿಕ್ಕಿತು ಎನ್ನಲಾಗಿದೆ. ಅಂದಿನಿಂದ ಬಾವಲಿಗಳು ನಮ್ಮನ್ನು ರಕ್ಷಿಸುತ್ತವೆ ಎನ್ನುವ ನಂಬಿಕೆಯಲ್ಲಿ ಈ ಸಸ್ತನಿಗಳನ್ನು ಪೂಜಿಸಲಾಗುತ್ತಿದೆ.
ಇದನ್ನೂ ಓದಿ: ನೋಡಲು ಆಕರ್ಷಕ, ಈ ಮಂಗಟ್ಟೆ ಹಕ್ಕಿಗಳ ಬದುಕು ಇನ್ನೂ ರೋಚಕ
ಈ ಗ್ರಾಮದಲ್ಲಿದೆ ಐವತ್ತು ಸಾವಿರಕ್ಕೂ ಹೆಚ್ಚು ಬಾವಲಿಗಳು
ನಂಬಲು ಕಷ್ಟವಾಗಿದ್ದರೂ ಕೂಡ ಸರ್ಸಾಯಿ ಗ್ರಾಮದಲ್ಲಿ ಸರಿಸುಮಾರು 50,000 ಬಾವಲಿಗಳು ಕೆರೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಕಂಡು ಬರುತ್ತವೆಯಂತೆ. ಇಲ್ಲಿರುವ ಹಳೆಯ ಸರೋವರದ ಬಳಿ ಇರುವ ಪೀಪಲ್, ಸಮೇರ್, ಬದುವಾ ಮರಗಳಲ್ಲಿ ವಾಸಿಸುತ್ತವೆ. ಈ ಬಾವಲಿಗಳನ್ನು ನೋಡಲೆಂದೇ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಇಲ್ಲಿನ ಸುತ್ತಮುತ್ತಲಿನ ಪರಿಸರವೇ ಬಾವಲಿಗಳಿಗೆ ವಾಸಸ್ಥಾನವಾಗಿದೆ. ಇಲ್ಲಿನ ಜನರ ಈ ನಂಬಿಕೆಯು ಬಾವಲಿಗಳ ಸಂತತಿಗಳ ಉಳುವಿಕೆಗೂ ಕಾರಣವಾಗಿದೆ.
ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:13 pm, Mon, 18 August 25