ಆಹಾರದ ವಿಚಾರ ಬಂದಾಗ ಹೆಚ್ಚಿನ ಪ್ರಮಾಣದಲ್ಲಿ ಅನ್ನ ಸೇವನೆ ಮಾಡಬಾರದು ಆರೋಗ್ಯಕ್ಕೆ ಕೆಟ್ಟದ್ದು ಎನ್ನುವ ಮಾತನ್ನು ಕೇಳಿರುತ್ತೇವೆ. ಆದರೆ ಅನ್ನದಿಂದಾಗುವ ಆರೋಗ್ಯಕರ ಪ್ರಯೋಜನಗಳ ಬಗ್ಗೆಯೂ ನೀವು ತಿಳಿಯಿರಿ. ಅಕ್ಕಿಯು ಬಿಳಿ, ಕಂದು, ಕೆಂಪು, ಕಪ್ಪು ಬಣ್ಣವನ್ನು ಬಣ್ಣಗಳಲ್ಲಿ ಲಭ್ಯವಿದೆ. ಬಿಳಿ ಅಕ್ಕಿ ಮತ್ತು ಕಂದು ಅಕ್ಕಿ ಉಳಿದವುಗಳಿಗಿಂತ ತುಲನಾತ್ಮಕವಾಗಿ ಹೆಚ್ಚು ಜನಪ್ರಿಯವಾಗಿವೆ.
ಕಪ್ಪು ಅಕ್ಕಿಯಲ್ಲಿ ಪೋಷಕಾಂಶಗಳು ಸಮೃದ್ಧವಾಗಿದೆ ಮತ್ತು ಇದು ನಿಮ್ಮ ಆಹಾರದ ಭಾಗವಾಗಿರುವಂತೆ ನೋಡಿಕೊಳ್ಳಿ. ಇದು ಫೈಬರ್, ಪ್ರೋಟೀನ್ ಮತ್ತು ಕಬ್ಬಿಣದಿಂದ ಸಮೃದ್ಧವಾಗಿದೆ. ಕಪ್ಪು ಅಕ್ಕಿಯನ್ನು ಒಂದು ಕಾಲದಲ್ಲಿ ನಿಷೇಧಿತ ಅಕ್ಕಿಯೆಂದು ಕರೆಯಲಾಗುತ್ತಿತ್ತು. ಈ ಅಕ್ಕಿ ಪ್ರಾಚೀನ ಚೀನಾದ ಇತಿಹಾಸದಷ್ಟೇ ಹಳೆಯದು. ಆಗಿ ಚೀನಾದ ಜನರು ಈ ಕಪ್ಪು ಅಕ್ಕಿಯ ಪ್ರಭೇದವನ್ನು ಆಹಾರವಾಗಿ ಬಳಸುತ್ತಿದ್ದರು.
ಮೂತ್ರಪಿಂಡ, ಹೊಟ್ಟೆ ಮತ್ತು ಯಕೃತ್ತಿನ ನೋವುಗಳಿಗೆ ಅವರು ಇದನ್ನು ತಿನ್ನುತ್ತಿದ್ದರು. ಆದರೆ ನಂತರದ ದಿನಗಳಲ್ಲಿ ಚೀನಾದ ದೊಡ್ಡ ಮನುಷ್ಯರುಗಳು ಇದರ ಮೇಲೆ ಹಿಡಿತ ಸಾಧಿಸಿ ಇದನ್ನು ಜನಸಾಮಾನ್ಯರ ಪಾಲಿಗೆ ನಿಷೇಧಿಸಿಬಿಟ್ಟರು.
ಇದಾದ ಮೇಲೆ ಕಪ್ಪು ಅಕ್ಕಿ ಕೇವಲ ಶ್ರೀಮಂತ ಮತ್ತು ಗಣ್ಯ ವರ್ಗಗಳ ಆಸ್ತಿಯಾಯಿತು, ಅದು ಸೀಮಿತ ಪ್ರಮಾಣದಲ್ಲಿ ಮತ್ತು ತೀವ್ರ ಪರಿಶೀಲನೆಯಡಿಯಲ್ಲಿ. ಸಾಮಾನ್ಯರಿಗೆ ಇದನ್ನು ಸೇವಿಸಲು ಅವಕಾಶವಿರಲಿಲ್ಲ ಹೀಗೆ ಇದು ನಿಷೇಧಿತ ಅಕ್ಕಿಯಾಯಿತು.
ಕಪ್ಪು ಅಕ್ಕಿಯ ಪ್ರಯೋಜನಗಳನ್ನು ತಿಳಿಯಿರಿ
ಆಂಟಿ ಆಕ್ಸಿಡೆಂಟ್‌ಗಳಿಂದ ಸಮೃದ್ಧ
ಕಪ್ಪು ಅಕ್ಕಿಯ ಎಲ್ಲಾ ಬಗೆಯ ಅಕ್ಕಿಗಳಲ್ಲಿ ಅತಿ ಹೆಚ್ಚು ಆಂಟಿ ಆಕ್ಸಿಡೆಂಟ್ಗಳಿವೆ ಇವೆ. ಕಪ್ಪು ಅಕ್ಕಿಯಲ್ಲಿ ಆಳವಾದ ಕಪ್ಪು ಅಥವಾ ಕೆನ್ನೀಲಿ ಬಣ್ಣವು ಅದರ ಆಂಟಿ ಆಕ್ಸಿಡೆಂಟ್ ಗುಣಲಕ್ಷಣಗಳನ್ನು ಸೂಚಿಸುತ್ತದೆ.
ಕಪ್ಪು ಅಕ್ಕಿಯ ಹೊರಗಿನ ಪದರವು ಆಂಥೋಸಯಾನಿನ್ ಎಂಬ ಆಂಟಿ ಆಕ್ಸಿಡೆಂಟ್ ಅನ್ನು ದೊಡ್ಡ ಪ್ರಮಾಣದಲ್ಲಿ ಹೊಂದಿರುತ್ತದೆ. ಆಂಥೋಸಯಾನಿನ್ ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ ಮತ್ತು ಮೆದುಳಿನ ಕಾರ್ಯವನ್ನು ಸುಧಾರಿಸಲು ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ತೂಕ ನಷ್ಟಕ್ಕೂ ಸಹಕಾರಿ
ಕಪ್ಪು ಅಕ್ಕಿಯು ತೂಕ ನಷ್ಟಕ್ಕೂ ಸಹಾಯ ಮಾಡುತ್ತದೆ. ಕಪ್ಪು ಅಕ್ಕಿಯಲ್ಲಿ ಪ್ರೋಟೀನ್ ಮತ್ತು ಫೈಬರ್ ಇದ್ದು ಅದು ನಿಮ್ಮನ್ನು ಹೆಚ್ಚು ಕಾಲ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಕಡಿಮೆ ಹಸಿವು ಮತ್ತು ಪೂರ್ಣತೆಯ ಭಾವನೆಯೊಂದಿಗೆ, ನೀವು ಸುಲಭವಾಗಿ ಮತ್ತು ವೇಗವಾಗಿ ತೂಕವನ್ನು ಕಳೆದುಕೊಳ್ಳಬಹುದು.
ಬೊಜ್ಜಿನ ಅಪಾಯ ಕಡಿಮೆ ಮಾಡುತ್ತದೆ
ನೀವು ಸ್ಥೂಲಕಾಯದ ವಿರುದ್ಧ ಹೋರಾಡುತ್ತಿದ್ದಲ್ಲಿ, ಕಪ್ಪು ಅಕ್ಕಿ ಉತ್ತಮ ಆಯ್ಕೆಯಾಗಿದೆ. ಇದು ಫೈಬರ್‌ನಿಂದ ಕೂಡಿರುವುದರಿಂದಾಗಿ, ನಿಮ್ಮಲ್ಲಿ ಹೊಟ್ಟೆ ತುಂಬಿರುವ ಭಾವನೆಯನ್ನು ಮೂಡಿಸುತ್ತದೆ ಮತ್ತು ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ.
ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ
ಕಪ್ಪು ಅಕ್ಕಿ ಹೆಚ್ಚು ಫೈಬರ್ ಮತ್ತು ಕಡಿಮೆ ಕೊಬ್ಬನ್ನು ಹೊಂದಿರುತ್ತದೆ, ಎರಡೂ ಹೃದಯದ ಆರೋಗ್ಯದ ವಿಷಯದಲ್ಲಿ ಗಮನಾರ್ಹವಾದವು. ಫೈಬರ್ ಹೆಚ್ಚುವರಿ ಕೊಲೆಸ್ಟ್ರಾಲ್ ಮತ್ತು ಕಡಿಮೆ ರಕ್ತದೊತ್ತಡವನ್ನು ಗುಣಪಡಿಸಲು ಸಹಾಯ ಮಾಡುತ್ತದೆ, ಕಡಿಮೆ ಮಟ್ಟದ ಕೊಬ್ಬು ಮತ್ತು ಕೊಲೆಸ್ಟ್ರಾಲ್ ವಿವಿಧ ಹೃದಯ ಕಾಯಿಲೆಗಳನ್ನು ತಡೆಯುತ್ತದೆ.
ದೃಷ್ಟಿಗೆ ಉತ್ತಮ
ಇದು ಕಣ್ಣಿಗೆ ಒಳ್ಳೆಯದು. ಕಪ್ಪು ಅಕ್ಕಿಯಲ್ಲಿ ಕೆರೊಟಿನಾಯ್ಡ್‌ಗಳಿದ್ದು ಕಣ್ಣುಗಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಕ್ಯಾರೊಟಿನಾಯ್ಡ್‌ಗಳಾದ ಲುಟೀನ್ ಮತ್ತು ಜಿಯಾಕ್ಸಾಂಥಿನ್‌ಗಳು ಬೆಳಕಿನ ಹಾನಿಕಾರಕ ಪರಿಣಾಮಗಳಿಂದ ಕಣ್ಣುಗಳನ್ನು ರಕ್ಷಿಸಲು ಒಟ್ಟಿಗೆ ಕೆಲಸ ಮಾಡುತ್ತವೆ ಮತ್ತು ಸ್ವತಂತ್ರ ರಾಡಿಕಲ್ ಹಾನಿಯನ್ನು ತಡೆಯುವಲ್ಲಿ ಸಹಾಯ ಮಾಡುತ್ತದೆ.