ಪೋಷಕರೊಂದಿಗೆ ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಮಕ್ಕಳು ಹಿಂಜರಿಯುತ್ತಾರೆ ಏಕೆ?

ಸಾಕಷ್ಟು ಬಾರಿ ಮಕ್ಕಳು ಪೋಷಕರ ಬಳಿ ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಹಿಂಜರಿಯುತ್ತಾರೆ ಏಕೆ ಎನ್ನುವ ಪ್ರಶ್ನೆ ಪೋಷಕರನ್ನು ಕಾಡದೇ ಇರುವುದಿಲ್ಲ.

ಪೋಷಕರೊಂದಿಗೆ ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಮಕ್ಕಳು ಹಿಂಜರಿಯುತ್ತಾರೆ ಏಕೆ?
Parents
TV9kannada Web Team

| Edited By: Nayana Rajeev

Jul 25, 2022 | 11:29 AM

ಸಾಕಷ್ಟು ಬಾರಿ ಮಕ್ಕಳು ಪೋಷಕರ ಬಳಿ ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಹಿಂಜರಿಯುತ್ತಾರೆ ಏಕೆ ಎನ್ನುವ ಪ್ರಶ್ನೆ ಪೋಷಕರನ್ನು ಕಾಡದೇ ಇರುವುದಿಲ್ಲ. ಪ್ರತಿಯೊಂದು ಸಂಬಂಧದಲ್ಲೂ ಸಂವಹನ ಎಂಬುದು ಪ್ರಮುಖ ಪಾತ್ರವಹಿಸುತ್ತದೆ. ನೀವು ನಿಮ್ಮ ಮನಸ್ಸಿನಲ್ಲಿರುವ ಭಾವನೆಗಳನ್ನು ಹಂಚಿಕೊಳ್ಳದಿದ್ದರೆ ಬೇರೆಯವರಿಗೆ ಅರ್ಥವಾಗುವುದು ಹೇಗೆ?.

ಮಕ್ಕಳು ಪೋಷಕರೊಂದಿಗೆ ತಮ್ಮ ಭಾವನೆಗಳನ್ನು ಹಂಚಿಕೊಳ್ಳದೆ ಇರಲು ಸಾಕಷ್ಟು ಕಾರಣಗಳಿರಬಹುದು. ಪೋಷಕರು ಅದಕ್ಕೆ ಹೇಗೆ ಪ್ರತಿಕ್ರಿಯಿಸಬಹುದು ಎನ್ನುವ ಭಯವೂ ಅವರನ್ನು ಕಾಡುತ್ತಿರಬಹುದು. ಪೋಷಕರು ಕೂಡ ತಮ್ಮ ಮಕ್ಕಳ ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಪ್ರಯತ್ನವನ್ನು ಮಾಡಬೇಕು, ತಮ್ಮ ಭಾವನೆ ಆಸೆಗಳನ್ನು ಮಕ್ಕಳ ಮೇಲೆ ಹೊರಿಸಬಾರದು.

ಪೋಷಕರು ಈಗಾಗಲೇ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ: ಪೋಷಕರು ಈಗಾಗಲೇ ತಮ್ಮ ವೈಯಕ್ತಿಕ ವ್ಯವಹಾರಗಳಲ್ಲಿ ಹೆಚ್ಚಿನ ಹೊರೆ ಎದುರಿಸುತ್ತಿದ್ದಾರೆ, ಈಗ ನಾವು ನಮ್ಮ ಭಾವನೆಗಳನ್ನು ಹೇಳಿಕೊಳ್ಳುವುದರಿಂದ ಅವರ ಮನಸ್ಸಿಗೆ ನೋವುಂಟಾಗಬಹುದು ಎಂದು ಕೆಲ ಮಕ್ಕಳು ಅಂದುಕೊಳ್ಳುತ್ತಾರೆ.

ಪೋಷಕರೊಂದಿಗೆ ಮಾತನಾಡಲು ಸಮಯವೇ ಸಿಗುವುದಿಲ್ಲ: ಕೆಲವು ಪೋಷಕರು ಯಾವಾಗಲೂ ತಮ್ಮ ಮಕ್ಕಳಿಗಾಗಿ ದುಡಿಯುತ್ತಿರುತ್ತಾರೆ, ಆದರೆ ಮಕ್ಕಳೊಂದಿಗೆ ಕುಳಿತು ಮಾತನಾಡಲು ಸಮಯವಿರುವುದಿಲ್ಲ. ಪೋಷಕರೊಂದಿಗೆ ಮಾತನಾಡಲು ಇದು ಸೂಕ್ತ ಸಮಯ ಎಂದು ಮಕ್ಕಳು ಎಂದಿಗೂ ಯೋಚಿಸುವುದಿಲ್ಲ. ಇದು ಸಂವಹನದ ಅಂತರವನ್ನು ಮತ್ತಷ್ಟು ಸೃಷ್ಟಿಸುತ್ತದೆ.

ಮಗುವಿನ ಮಾತನ್ನು ಸಂಪೂರ್ಣವಾಗಿ ಕೇಳುವುದೇ ಇಲ್ಲ: ಕೆಲವು ಪೋಷಕರು ಮಕ್ಕಳು ಮಾತನಾಡುತ್ತಿರುವಾಗ ಸಂಪೂರ್ಣವಾಗಿ ಮಾತನ್ನು ಆಲಿಸಲು ಪ್ರಯತ್ನಿಸುವುದಿಲ್ಲ, ತಾವೇ ಮಧ್ಯೆ ಮಾತನಾಡಿ ಆ ಮಾತನ್ನು ಅಲ್ಲಿಯೇ ನಿಲ್ಲಿಸಿಬಿಡುತ್ತಾರೆ. ಮಕ್ಕಳ ಆಯ್ಕೆಯ ತಿರಸ್ಕಾರ: ಬಹಳಷ್ಟು ಪೋಷಕರು ಮಕ್ಕಳ ಆಯ್ಕೆಯನ್ನು ತಿರಸ್ಕರಿಸಿ ತಾವು ಅಂದುಕೊಂಡಂತೆಯೇ ನಡೆದುಕೊಳ್ಳಬೇಕು ಎಂದು ಬಯಸುತ್ತಾರೆ. ಇದು ಮಕ್ಕಳು ಪೋಷಕರ ಬಳಿ ಸಹಾಯ ಕೇಳಲು ಹಿಂಜರಿಯುವಂತೆ ಮಾಡುತ್ತದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada