ಸಾಂದರ್ಭಿಕ ಚಿತ್ರ
ಈಗಿನ ಕಾಲದಲ್ಲಿ ದೇಹದ ಮೇಲೆ ಬೆಳೆಯುವ ಕೂದಲನ್ನು ತೆಗೆದುಹಾಕಲು ವ್ಯಾಕ್ಸಿಂಗ್ ಮಾಡುವುದು ಸರ್ವೇ ಸಾಮಾನ್ಯ. ಆದರೆ ಈಗೀಗ ಹೆಚ್ಚಿನವರು ಪಾರ್ಲರ್ ಗೆ ಹೋಗುವ ಬದಲು ಮನೆಯಲ್ಲೇ ವ್ಯಾಕ್ಸ್ ಮಾಡಲು ಮುಂದಾಗುತ್ತಾರೆ. ಆದರೆ ಈ ಕೆಲವು ಪರಿಸ್ಥಿತಿಗಳಲ್ಲಿ ಮಾಡುವ ಸಣ್ಣ ಪುಟ್ಟ ತಪ್ಪುಗಳಿಂದ ವ್ಯಾಕ್ಸಿಂಗ್ ಸ್ವಲ್ಪ ನೋವಿನಿಂದ ಕೂಡಿರಬಹುದು. ಹೀಗಾಗಿ ಈ ಕೆಲವೊಂದು ಮುಂಜಾಗ್ರತೆಗಳನ್ನು ತೆಗೆದುಕೊಳ್ಳುವುದು ಒಳ್ಳೆಯದು.
ವ್ಯಾಕ್ಸಿಂಗ್ ಮುನ್ನ ಈ ವಿಚಾರಗಳು ನೆನಪಿನಲ್ಲಿರಲಿ :
- ವ್ಯಾಕ್ಸ್ ಗೂ ಮುನ್ನ ನಿಮ್ಮ ದೇಹದ ಚರ್ಮವನ್ನು ಸಿದ್ಧಪಡಿಸಿಕೊಳ್ಳಬೇಕು. ದೇಹದಲ್ಲಿ ಕೊಳಕು, ಬೆವರು ಇದ್ದರೆ ವ್ಯಾಕ್ಸಿಂಗ್ ಮಾಡಬಾರದು. ಬೇಡದ ಕೂದಲನ್ನು ತೆಗೆಯುವ ಮುನ್ನ ಆ ಭಾಗವನ್ನು ಸ್ವಚ್ಛಗೊಳಿಸಿ ವ್ಯಾಕ್ಸ್ ಗೆ ಮುಂದಾಗಿ.
- ವ್ಯಾಕ್ಸಿಂಗ್ ಗೂ ಮೊದಲು ನಿಮ್ಮ ಚರ್ಮವನ್ನು ಬೆಚ್ಚಗಿನ ನೀರಿನಿಂದ ತೊಳೆದು, ಪ್ರೀ ವ್ಯಾಕ್ಸಿಂಗ್ ಕ್ರೀಮ್ಗಳನ್ನು ಹಚ್ಚಿಕೊಳ್ಳಿ. ಈ ರೀತಿ ಮಾಡುವುದರಿಂದ ಚರ್ಮದ ತುರಿಕೆಯನ್ನು ತಡೆಯಬಹುದು.
- ವ್ಯಾಕ್ಸಿಂಗ್ ಮಾಡಿದ ಮೊದಲ ಎರಡು ದಿನಗಳ ಕಾಲ ವ್ಯಾಯಾಮ ಮಾಡಬೇಡಿ. ವ್ಯಾಕ್ಸಿಂಗ್ ನಂತರದಲ್ಲಿ ಚರ್ಮದ ರಂಧ್ರಗಳು ತೆರೆದಿರುತ್ತವೆ. ವ್ಯಾಯಾಮದ ವೇಳೆ ಬೆವರಿನ ಮೂಲಕ ಕೊಳಕು ಚರ್ಮವನ್ನು ಸೇರಿಕೊಳ್ಳುತ್ತದೆ.
- ವ್ಯಾಕ್ಸಿಂಗ್ ಬಳಿಕ ಸ್ನಾನಕ್ಕೆ ಹೆಚ್ಚು ನೀರನ್ನು ಬಳಸಬೇಡಿ. ಇದು ಚರ್ಮಕ್ಕೆ ಹಾನಿಯುಂಟು ಮಾಡುವ ಸಾಧ್ಯತೆಯೇ ಹೆಚ್ಚಿರುತ್ತದೆ. ಬಿಸಿನೀರಿನ ಬಳಕೆಯನ್ನು ಆದಷ್ಟು ತಪ್ಪಿಸುವುದು ಒಳ್ಳೆಯದು.
- ವ್ಯಾಕ್ಸಿಂಗ್ ನಂತರದಲ್ಲಿ ಸ್ಕ್ರಬರ್ ಬಳಸುವುದು ಒಳ್ಳೆಯದಲ್ಲ. ಇದರಿಂದ ಚರ್ಮಕ್ಕೆ ಹಾನಿಯಾಗುತ್ತದೆ.
- ದೇಹದ ಮೇಲಿನ ಕೂದಲನ್ನು ತೆಗೆದ ಬಳಿಕ ಚರ್ಮವು ಬಹಳ ಸೂಕ್ಷ್ಮವಾಗಿರುತ್ತದೆ. ಈ ವೇಳೆಯಲ್ಲಿ ಸುಗಂಧ ದ್ರವ್ಯಗಳನ್ನು ಬಳಸುವುದು ತ್ವಚೆಗೆ ಆರೋಗ್ಯಕರವಲ್ಲ.
- ವ್ಯಾಕ್ಸಿಂಗ್ ನಂತರ ಆದಷ್ಟು ಬಿಗಿಯಾದ ಬಟ್ಟೆಗಳಾದ ಜೀನ್ಸ್ ಪ್ಯಾಂಟ್, ಲೆಗ್ ಇನ್ ಹಾಕುವುದನ್ನು ತಪ್ಪಿಸಿ. ಈ ಬಟ್ಟೆಯಿಂದ ಚರ್ಮದೊಂದಿಗೆ ಘರ್ಷಣೆ ಉಂಟಾಗಿ ಚರ್ಮಕ್ಕೆ ಹಾನಿಯಾಗುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ