ರೆಸ್ಟೋರೆಂಟ್ನಲ್ಲಿ ನೀಡುವ ಈರುಳ್ಳಿ ರುಚಿಕರವಾಗಿರುವುದು ಯಾಕೆ? ಇದೆ ಕಾರಣವಂತೆ
ಅಡುಗೆಯ ರುಚಿ ಹೆಚ್ಚಿಸುವ ಈ ಈರುಳ್ಳಿಯಿಲ್ಲದೇ ಯಾವುದೇ ಆಹಾರ ಪದಾರ್ಥವು ಪೂರ್ಣವಾಗುವುದೇ ಇಲ್ಲ. ದಿನನಿತ್ಯ ಬಳಸುವ ಈ ಈರುಳ್ಳಿಯಲ್ಲೂ ಹತ್ತಾರು ಆರೋಗ್ಯ ಪ್ರಯೋಜನಗಳಿವೆ. ಆದರೆ ಮನೆಯಲ್ಲಿ ಕತ್ತರಿಸಿದ ಈರುಳ್ಳಿಗಿಂತ ಹೋಟೆಲ್ ಹಾಗೂ ರೆಸ್ಟೋರೆಂಟ್ ಗಳಲ್ಲಿ ನೀಡುವ ಈರುಳ್ಳಿ ಬಹಳ ರುಚಿಕರವಾಗಿರುತ್ತದೆ. ಆದರೆ ಇದು ಯಾಕೆ ಎನ್ನುವ ಬಗ್ಗೆ ಹೆಚ್ಚಿನವರು ಯೋಚಿಸುವುದೇ ಇಲ್ಲ. ಈರುಳ್ಳಿ ಅಷ್ಟು ಟೇಸ್ಟಿಯಾಗಿರಲು ಕಾರಣವಿದ್ದು, ಆ ಕುರಿತಾದ ಕುತೂಹಲಕಾರಿ ಸಂಗತಿ ಇಲ್ಲಿದೆ.
ರೆಸ್ಟೋರೆಂಟ್ ಅಥವಾ ಹೋಟೆಲ್ ಹೋದರೆ ತಿನ್ನಲು ಈರುಳ್ಳಿ ನೀಡುತ್ತಾರೆ. ಅದರಲ್ಲಿಯು ನಾನ್ ವೆಜ್ ರೆಸ್ಟೋರೆಂಟ್ ಗಳಲ್ಲಿ ಈ ಈರುಳ್ಳಿ ಇದ್ದೆ ಇರುತ್ತದೆ. ಈ ಈರುಳ್ಳಿ ತಿನ್ನಲು ಅಷ್ಟೇ ರುಚಿಕರವಾಗಿರುತ್ತದೆ. ಕೆಲವರು ಇದರ ರುಚಿಯನ್ನು ಉಪ್ಪು ಹಾಗೂ ನಿಂಬೆರಸವನ್ನು ಹಿಂಡಿ ಸವಿಯುತ್ತಾರೆ. ಅದೇ ಮನೆಯಲ್ಲಿ ಕತ್ತರಿಸಿದ ಈರುಳ್ಳಿಯನ್ನು ತಿಂದರೆ ಖಾರದೊಂದಿಗೆ, ಅದರ ಘಾಟು ಮೂಗಿಗೆ ಬಡಿಯುತ್ತದೆ. ಹೆಚ್ಚು ತಿಂದರೆ ಕಣ್ಣಲ್ಲಿ ನೀರು ಕೂಡ ಬರುತ್ತದೆ. ರೆಸ್ಟೋರೆಂಟ್ ನಲ್ಲಿ ನೀಡುವ ಈರುಳ್ಳಿ ರುಚಿ ಹೆಚ್ಚಾಗಲು ಈ ವಸ್ತುಗಳನ್ನು ಬೆರೆಸುವುದೇ ಕಾರಣ ಎನ್ನಲಾಗಿದೆ.
* ಐಸ್ ನೀರು : ಸಾಮಾನ್ಯವಾಗಿ ಈ ಈರುಳ್ಳಿಯಲ್ಲಿ ಸಲ್ಫರ್ ಅಂಶವು ಇರುತ್ತದೆ . ಇದನ್ನು ಚೆನ್ನಾಗಿ ಬಿಸಿ ಮಾಡಿದಾಗ, ತೀವ್ರತೆ ಕಡಿಮೆಯಾಗುತ್ತದೆ. ಅದಲ್ಲದೆ ಈ ಈರುಳ್ಳಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಹತ್ತು ನಿಮಿಷಗಳ ಐಸ್ ನೀರಿನಲ್ಲಿ ಅದ್ದಿ ಇಡುವುದರಿಂದ ಘಾಟು ಹಾಗೂ ಕುರುಕಲನ್ನು ಕಡಿಮೆ ಮಾಡಿ ರುಚಿಯನ್ನು ಹೆಚ್ಚಿಸುತ್ತದೆ.
* ಮಜ್ಜಿಗೆ : ಕತ್ತರಿಸಿದ ಈರುಳ್ಳಿಯನ್ನು ಬಾಣಸಿಗರು ಮಜ್ಜಿಗೆಯಲ್ಲಿ ನೆನೆಸಿಡುತ್ತಾರೆ. ಇದು ಈರುಳ್ಳಿಯಲ್ಲಿರುವ ಸಲ್ಫರನ್ನು ಹೀರಿಕೊಂಡು ರುಚಿಯನ್ನು ಹೆಚ್ಚಿಸುತ್ತದೆ. ಮಜ್ಜಿಗೆಯಲ್ಲಿ ನೆನೆಯುವ ಕಾರಣ ಹೆಚ್ಚು ಸುವಾಸನೆಭರಿತವಾಗಿರುತ್ತದೆ.
* ವಿನೆಗರ್ : ಈರುಳ್ಳಿ ತುಂಡುಗಳನ್ನು ವಿನೆಗರ್ ನಲ್ಲಿ ಐದು ನಿಮಿಷಗಳ ಕಾಲ ನೆನೆಸಿ ನಂತರ ನೀರಿನಿಂದ ತೊಳೆಯಲಾಗುತ್ತದೆ. ಹೀಗಾಗಿ ಇದರಲ್ಲಿ ಕುರುಕಲು ಕಡಿಮೆಯಾಗಿರುವುದಲ್ಲದೇ ಹೆಚ್ಚು ರಸಭರಿತವಾಗಿರುತ್ತವೆ.
ಇದನ್ನೂ ಓದಿ: ಕಡಿಮೆ ನಿರ್ವಹಣೆಯಲ್ಲಿ ಮನೆಗೆ ಹಸಿರು ಸ್ಪರ್ಶ ನೀಡುವ ಸಸ್ಯಗಳಿವು
* ಉಪ್ಪು : ಈರುಳ್ಳಿ ತುಂಡುಗಳ ಮೇಲೆ ಉಪ್ಪನ್ನು ಸಿಂಪಡಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ ಹತ್ತರಿಂದ ಹದಿನೈದು ನಿಮಿಷಗಳ ಕಾಲ ಬಿಡುತ್ತಾರೆ. ಆ ಬಳಿಕ ಈರುಳ್ಳಿ ಮೇಲೆ ಇರುವ ಉಪ್ಪನ್ನು ಕೈಯಿಂದ ಒರೆಸಲಾಗುತ್ತದೆ.
* ನಿಂಬೆ ರಸ : ಕತ್ತರಿಸಿಟ್ಟ ಈರುಳ್ಳಿಗೆ ನಿಂಬೆ ರಸವನ್ನು ಸಿಂಪಡಿಸಿ ಹತ್ತು ನಿಮಿಷಗಳ ಕಾಲ ಇಡಲಾಗುತ್ತದೆ. ಈ ಸಿಟ್ರಸ್ ಆಮ್ಲವು ಈರುಳ್ಳಿಯ ತೀವ್ರತೆಯನ್ನು ಕಡಿಮೆ ಮಾಡಿ, ರುಚಿಯನ್ನು ಹೆಚ್ಚಿಸುತ್ತದೆ. ಇದನ್ನು ಸಲಾಡ್ ಗಳಲ್ಲಿ ಬಳಸುವುದರಿಂದಲೇ ಸಲಾಡ್ ಕೂಡ ಅಷ್ಟೇ ಟೇಸ್ಟಿಯಾಗಿರುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ