Body Waxing Tips : ನೀವು ಮನೆಯಲ್ಲೇ ಆಗಾಗ ವ್ಯಾಕ್ಸಿಂಗ್ ಮಾಡ್ತೀರಾ? ಹಾಗಾದ್ರೆ ಈ ತಪ್ಪುಗಳನ್ನು ಮಾಡದಿರಿ

ಹೆಣ್ಣು ಮಕ್ಕಳಿಗೆ ಸೌಂದರ್ಯದ ಬಗ್ಗೆ ವಿಶೇಷ ಕಾಳಜಿ. ಹೀಗಾಗಿ ತ್ವಚೆ ಹಾಗೂ ಗಮನ ಕೊಡುವುದಲ್ಲದೆ, ದೇಹ ಸೌಂದರ್ಯದ ಬಗ್ಗೆ ಹೆಚ್ಚು ಗಮನ ಕೊಡುತ್ತಾರೆ. ದೇಹದ ಮೇಲಿರುವ ಬೇಡದ ಕೂದಲನ್ನು ತೆಗೆದುಹಾಕಲು ತಿಂಗಳಿಗೊಮ್ಮೆಯಾದರೂ ವ್ಯಾಕ್ಸಿಂಗ್ ಮಾಡಿಸುತ್ತಾರೆ. ಸುಮ್ಮನೆ ಹಣ ವೇಸ್ಟ್ ಮಾಡೋದು ಯಾಕೆ ಎಂದು ಹೆಚ್ಚಿನವರು ಮನೆಯಲ್ಲೇ ವ್ಯಾಕ್ಸ್ ಮಾಡುತ್ತಾರೆ. ಆದರೆ ವ್ಯಾಕ್ಸ್ ಮಾಡುವಾಗ ಹಾಗೂ ನಂತರದಲ್ಲಿ ಈ ಕೆಲವು ತಪ್ಪುಗಳನ್ನು ಅಪ್ಪಿ ತಪ್ಪಿಯು ಮಾಡಲೇಬೇಡಿ. ಹೀಗೇನಾದ್ರೂ ಮಾಡಿದ್ರೆ ಚರ್ಮಕ್ಕೆ ಹಾನಿಯಾಗುವ ಸಾಧ್ಯತೆಯೇ ಹೆಚ್ಚು.

Body Waxing Tips : ನೀವು ಮನೆಯಲ್ಲೇ ಆಗಾಗ ವ್ಯಾಕ್ಸಿಂಗ್ ಮಾಡ್ತೀರಾ? ಹಾಗಾದ್ರೆ ಈ ತಪ್ಪುಗಳನ್ನು ಮಾಡದಿರಿ
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Sep 20, 2024 | 4:27 PM

ಈಗಿನ ಕಾಲದಲ್ಲಿ ದೇಹದ ಮೇಲೆ ಬೆಳೆಯುವ ಕೂದಲನ್ನು ತೆಗೆದುಹಾಕಲು ವ್ಯಾಕ್ಸಿಂಗ್ ಮಾಡುವುದು ಸರ್ವೇ ಸಾಮಾನ್ಯ. ಆದರೆ ಈಗೀಗ ಹೆಚ್ಚಿನವರು ಪಾರ್ಲರ್ ಗೆ ಹೋಗುವ ಬದಲು ಮನೆಯಲ್ಲೇ ವ್ಯಾಕ್ಸ್ ಮಾಡಲು ಮುಂದಾಗುತ್ತಾರೆ. ಆದರೆ ಈ ಕೆಲವು ಪರಿಸ್ಥಿತಿಗಳಲ್ಲಿ ಮಾಡುವ ಸಣ್ಣ ಪುಟ್ಟ ತಪ್ಪುಗಳಿಂದ ವ್ಯಾಕ್ಸಿಂಗ್ ಸ್ವಲ್ಪ ನೋವಿನಿಂದ ಕೂಡಿರಬಹುದು. ಹೀಗಾಗಿ ಈ ಕೆಲವೊಂದು ಮುಂಜಾಗ್ರತೆಗಳನ್ನು ತೆಗೆದುಕೊಳ್ಳುವುದು ಒಳ್ಳೆಯದು.

ವ್ಯಾಕ್ಸಿಂಗ್ ಮುನ್ನ ಈ ವಿಚಾರಗಳು ನೆನಪಿನಲ್ಲಿರಲಿ :

  • ವ್ಯಾಕ್ಸ್ ಗೂ ಮುನ್ನ ನಿಮ್ಮ ದೇಹದ ಚರ್ಮವನ್ನು ಸಿದ್ಧಪಡಿಸಿಕೊಳ್ಳಬೇಕು. ದೇಹದಲ್ಲಿ ಕೊಳಕು, ಬೆವರು ಇದ್ದರೆ ವ್ಯಾಕ್ಸಿಂಗ್ ಮಾಡಬಾರದು. ಬೇಡದ ಕೂದಲನ್ನು ತೆಗೆಯುವ ಮುನ್ನ ಆ ಭಾಗವನ್ನು ಸ್ವಚ್ಛಗೊಳಿಸಿ ವ್ಯಾಕ್ಸ್ ಗೆ ಮುಂದಾಗಿ.
  • ವ್ಯಾಕ್ಸಿಂಗ್ ಗೂ ಮೊದಲು ನಿಮ್ಮ ಚರ್ಮವನ್ನು ಬೆಚ್ಚಗಿನ ನೀರಿನಿಂದ ತೊಳೆದು, ಪ್ರೀ ವ್ಯಾಕ್ಸಿಂಗ್ ಕ್ರೀಮ್​ಗಳನ್ನು ಹಚ್ಚಿಕೊಳ್ಳಿ. ಈ ರೀತಿ ಮಾಡುವುದರಿಂದ ಚರ್ಮದ ತುರಿಕೆಯನ್ನು ತಡೆಯಬಹುದು.
  • ವ್ಯಾಕ್ಸಿಂಗ್ ಮಾಡಿದ ಮೊದಲ ಎರಡು ದಿನಗಳ ಕಾಲ ವ್ಯಾಯಾಮ ಮಾಡಬೇಡಿ. ವ್ಯಾಕ್ಸಿಂಗ್ ನಂತರದಲ್ಲಿ ಚರ್ಮದ ರಂಧ್ರಗಳು ತೆರೆದಿರುತ್ತವೆ. ವ್ಯಾಯಾಮದ ವೇಳೆ ಬೆವರಿನ ಮೂಲಕ ಕೊಳಕು ಚರ್ಮವನ್ನು ಸೇರಿಕೊಳ್ಳುತ್ತದೆ.
  • ವ್ಯಾಕ್ಸಿಂಗ್ ಬಳಿಕ ಸ್ನಾನಕ್ಕೆ ಹೆಚ್ಚು ನೀರನ್ನು ಬಳಸಬೇಡಿ. ಇದು ಚರ್ಮಕ್ಕೆ ಹಾನಿಯುಂಟು ಮಾಡುವ ಸಾಧ್ಯತೆಯೇ ಹೆಚ್ಚಿರುತ್ತದೆ. ಬಿಸಿನೀರಿನ ಬಳಕೆಯನ್ನು ಆದಷ್ಟು ತಪ್ಪಿಸುವುದು ಒಳ್ಳೆಯದು.
  • ವ್ಯಾಕ್ಸಿಂಗ್ ನಂತರದಲ್ಲಿ ಸ್ಕ್ರಬರ್ ಬಳಸುವುದು ಒಳ್ಳೆಯದಲ್ಲ. ಇದರಿಂದ ಚರ್ಮಕ್ಕೆ ಹಾನಿಯಾಗುತ್ತದೆ.
  • ದೇಹದ ಮೇಲಿನ ಕೂದಲನ್ನು ತೆಗೆದ ಬಳಿಕ ಚರ್ಮವು ಬಹಳ ಸೂಕ್ಷ್ಮವಾಗಿರುತ್ತದೆ. ಈ ವೇಳೆಯಲ್ಲಿ ಸುಗಂಧ ದ್ರವ್ಯಗಳನ್ನು ಬಳಸುವುದು ತ್ವಚೆಗೆ ಆರೋಗ್ಯಕರವಲ್ಲ.
  • ವ್ಯಾಕ್ಸಿಂಗ್ ನಂತರ ಆದಷ್ಟು ಬಿಗಿಯಾದ ಬಟ್ಟೆಗಳಾದ ಜೀನ್ಸ್ ಪ್ಯಾಂಟ್, ಲೆಗ್ ಇನ್ ಹಾಕುವುದನ್ನು ತಪ್ಪಿಸಿ. ಈ ಬಟ್ಟೆಯಿಂದ ಚರ್ಮದೊಂದಿಗೆ ಘರ್ಷಣೆ ಉಂಟಾಗಿ ಚರ್ಮಕ್ಕೆ ಹಾನಿಯಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ  ಕ್ಲಿಕ್ ಮಾಡಿ