Life Lessons : ವಯಸ್ಸು 30 ದಾಟುವ ಮುನ್ನ ಈ ವಿಚಾರಗಳು ನಿಮಗೆ ತಿಳಿದಿರಲಿ
ಜೀವನವೆಂದ ಮೇಲೆ ಕಲಿಯುವುದು ತುಂಬಾನೇ ಇದೆ. ವಯಸ್ಸು ಆಗುತ್ತಿದ್ದಂತೆ ಒಂದರ ಹಿಂದೆ ಒಂದು ಅನುಭವಗಳು ಆಗುತ್ತಲೇ ಹೋಗುತ್ತದೆ. ಎಲ್ಲರೂ ಕೂಡ ಓದು ಮುಗಿಯುತ್ತಿದ್ದಂತೆ ಎಲ್ಲರೂ ಉದ್ಯೋಗದಲ್ಲಿ ಬ್ಯುಸಿಯಾಗಿ ಬಿಡುತ್ತಾರೆ. ಮುಂದಿನ ಭವಿಷ್ಯ ರೂಪಿಸುವ ಧಾವಂತದಲ್ಲಿ ಎಲ್ಲರೂ ಕೂಡ ಈ ಕೆಲವು ಸತ್ಯಗಳನ್ನು ಮರೆಯುವುದಿದೆ. ಆದರೆ ವಯಸ್ಸು 30 ದಾಟುವ ಮೊದಲು ಪ್ರತಿಯೊಬ್ಬರು ತಮ್ಮ ಬದುಕಿನಲ್ಲಿ ಈ ಕೆಲವು ವಿಷಯಗಳನ್ನು ಅರಿತಿದ್ದರೆ ಒಳ್ಳೆಯದು.
ಜೀವನವು ಸಮತಟ್ಟಾದ ಬಯಲಲ್ಲ, ಬದುಕಿನಲ್ಲಿ ಏಳುಬೀಳುಗಳು ಸರ್ವೇ ಸಾಮಾನ್ಯ. ಹೀಗಾಗಿ ದಿನಲು ಒಂದೊಂದು ಅನುಭವವನ್ನು ಪಡೆದುಕೊಂಡು ಮುಂದೆ ಸಾಗಲೇಬೇಕು. ಕೆಲವರು ಈ ಮೂರು ದಿನ ಜೀವಿಸಲು ಉಸಿರು ಇರುವ ತನಕ ಒಂದಲ್ಲ ಒಂದು ರೀತಿಯಲ್ಲಿ ಒದ್ದಾಡುತ್ತಲೇ ಇರುತ್ತಾರೆ. ಆದರೆ ವಯಸ್ಸು ಮೂವತ್ತು ದಾಟುವ ಮುನ್ನ ಈ ವಿಷಯಗಳು ತಲೆಯಲ್ಲಿದ್ದರೆ ಬದುಕಿನಲ್ಲಿ ನೆಮ್ಮದಿಯಾಗಿರಲು ಸಾಧ್ಯ.
- ಹಣವೇ ಬದುಕಲ್ಲ : ಓದು ಮುಗಿಯುತ್ತಿದ್ದಂತೆ ಉದ್ಯೋಗ ಗಿಟ್ಟಿಸಿಕೊಂಡು ಬಹುತೇಕರು ಹಣ ಸಂಪಾದನೆಯಲ್ಲೇ ತಮ್ಮ ಜೀವನವನ್ನು ಕಳೆಯುತ್ತಾರೆ. ದುಡ್ಡಿನ ಹಿಂದೆ ಬೀಳುವ ಜನರು ತಮ್ಮ ಬದುಕಿನ ಅಮೂಲ್ಯವಾದ ಕೆಲವು ಅಂಶಗಳನ್ನು ಮರೆತು ಬಿಡುತ್ತಾರೆ. ಕೆಲಸದ ಹಿಂದೆ ಬೀಳುವ ಮುನ್ನ ನಿಮಗೊಂದು ಬದುಕಿಗಿದೆ. ಪ್ರೀತಿ, ಸಂಬಂಧ, ಗೆಳೆತನ ಮುಂತಾದ ಬದುಕಿನಲ್ಲಿ ಖುಷಿ ಕೊಡುವ ಸಂಗತಿಗಳಿವೆ ಎನ್ನುವ ಸತ್ಯವನ್ನು ಅರಿತಿರಬೇಕು.
- ಆರೋಗ್ಯವೇ ದೊಡ್ಡ ಸಂಪತ್ತು: ವಯಸ್ಸಿರುವಾಗ ಆರೋಗ್ಯದ ಬಗ್ಗೆ ತಿಳಿದಿರುವುದಿಲ್ಲ. ಹೀಗಾಗಿ ರಾತ್ರಿ ಹಗಲೆನ್ನದೇ ವಿರಾಮವಿಲ್ಲದೇ ದುಡಿಯುವ ಜನರು ಇದ್ದಾರೆ. ವಯಸ್ಸು ಆಗುತ್ತಿದ್ದಂತೆ ಒಂದೊಂದು ಆರೋಗ್ಯ ಸಮಸ್ಯೆಗಳು ಬಾಧಿಸಲು ಶುರುವಾಗುತ್ತದೆ. ಹೀಗಾಗಿ ವಯಸ್ಸು ಇರುವಾಗಲೇ ಊಟ ತಿಂಡಿ, ನಿದ್ದೆ ಹಾಗೂ ವಿಶ್ರಾಂತಿಯೊಂದಿಗೆ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯ.
- ಬೇರೆಯವರ ನೋವಿಗೆ ಸ್ಪಂದಿಸಿ : ಎಲ್ಲರ ಜೀವನದಲ್ಲಿ ಸಂತೋಷವೇ ತುಂಬಿರುವುದಿಲ್ಲ. ಹಾಗಂತ ತಾನು ಖುಷಿಯಾಗಿದ್ದರೆ ಸಾಕು ಎನ್ನುವ ಸ್ವಾರ್ಥ ಭಾವ ಬೇಡ. ಬೇರೆಯವರ ನೋವಿಗೆ ಕಿವಿಯಾಗಿ ಅವರಿಗೆ ಸಾಂತ್ವನ ನೀಡುವ ವ್ಯಕ್ತಿಯಾಗಿರಿ. ಒಬ್ಬ ವ್ಯಕ್ತಿಗೆ ನೀವು ಎಷ್ಟು ಭಾವನಾತ್ಮಕ ಬೆಂಬಲವನ್ನು ನೀಡುತ್ತೀರಿ ಸೂಚಿಸುತ್ತದೆ.
- ಸೋಲನ್ನು ಗೆಲುವಾಗಿಸಿಕೊಳ್ಳಿ : ಜೀವನದಲ್ಲಿ ಸೋಲು ಯಾರಿಗೆ ಇಲ್ಲ ಹೇಳಿ. ಸೋತೆ ಎಂದರೆ ಕೈಕಟ್ಟಿಕೂರದೇ, ಗೆಲುವಿನ ಹಾದಿಯನ್ನು ರೂಪಿಸಿಕೊಳ್ಳುವುದು ಹೇಗೆ ಎನ್ನುವ ಅರಿವಿರಬೇಕು. ಸೋಲಿನಲ್ಲಿಯಾದ ಅನುಭವವನ್ನು ಕಲಿತುಕೊಂಡು ಜೀವನದಲ್ಲಿ ಮುನ್ನಡೆಯಬೇಕು. ಈ ಜೀವನ ಪಾಠವು ಎಲ್ಲರೂ ಕೂಡ ವಯಸ್ಸು ದಾಟುವ ಮೊದಲು ತಿಳಿದಿರಬೇಕು.
- ನಿಮ್ಮ ಅಭಿಪ್ರಾಯಗಳನ್ನು ನೇರವಾಗಿ ತಿಳಿಸಿ : ಜೀವನದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವ ವೇಳೆ ಹೆಚ್ಚಿನವರಿಗೆ ಇನ್ನೊಬ್ಬರ ಜೊತೆ ಚರ್ಚಿಸುವ ಅಭ್ಯಾಸವಿರುತ್ತದೆ. ಅದಲ್ಲದೇ ಕೆಲವು ವಿಚಾರದಲ್ಲಿ ತಮ್ಮ ಅಭಿಪ್ರಾಯಗಳನ್ನು ತಿಳಿಸಲು ಬಹಳ ಯೋಚಿಸುತ್ತಾರೆ. ಆದರೆ ಗಟ್ಟಿಯಾದ ನಿಲುವಿನೊಂದಿಗೆ ತಮಗೆ ಏನು ಅನಿಸುತ್ತದೆಯೋ ಅದನ್ನು ಹೇಳುವುದನ್ನು ಕಲಿತುಕೊಳ್ಳಬೇಕು.
- ಎಲ್ಲರನ್ನು ಮೆಚ್ಚಿಸಲು ಸಾಧ್ಯವಿಲ್ಲ : ಎಲ್ಲರೂ ತಾನು ಹೇಳಿದಂತೆಯೇ ಕೇಳಬೇಕು ಎಂದುಕೊಳ್ಳುವುದು ಸಹಜ. ಅದಲ್ಲದೇ, ಕೆಲವೊಮ್ಮೆ ನಿಮ್ಮ ನಡೆ ನುಡಿ, ಮಾತು ಹಾಗೂ ಕೆಲಸವು ಸುತ್ತಮುತ್ತಲಿನವರಿಗೆ ಇಷ್ಟವಾಗದೇ ಇರಬಹುದು. ಈ ಬಗ್ಗೆ ಅವರು ಅಸಮಾಧಾನವನ್ನು ಹೊರಹಾಕಬಹುದು. ಆದರೆ ನಿಮ್ಮ ಇಷ್ಟದಂತೆ ಬದುಕನ್ನು ಕಲಿಯುವುದರ ಜೊತೆಗೆ ಎಲ್ಲರನ್ನು ಮೆಚ್ಚಿಸಲು ಸಾಧ್ಯವಿಲ್ಲ ಎನ್ನುವ ಕಹಿಸತ್ಯವನ್ನು ಅರಿತುಕೊಳ್ಳಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ